ಸತ್ಯಸಾಯಿ ಗ್ರಾಮದ ಶರನ್ನವರಾತ್ರಿ ಉತ್ಸವದಲ್ಲಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ

ಚಿಕ್ಕಬಳ್ಳಾಪುರ, ಅ 5:  ಚಿಕ್ಕಬಳ್ಳಾಪುರ,  ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವದಲ್ಲಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಭಾಗವಹಿಸಿ ಗಮನ ಸೆಳೆದರು.  

ಭಗವಾನ್ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನಿಂದ ಆಯೋಜಿಸಿರುವ ನವರಾತ್ರಿ ಉತ್ಸವದಲ್ಲಿ ಶನಿವಾರ ಸತ್ಯಸಾಯಿ ಗ್ರಾಮದ ಹೃದಯ ಮಂದಿರದ ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ವಿವಿಧ ಧಾಮರ್ಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಶ್ರದ್ಧಾಭಕ್ತಿ ಮೆರೆದರು.  

ನವರಾತ್ರಿ ಮಹೋತ್ಸವ ಪ್ರಯುಕ್ತ ನವದುಗರ್ೆಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ದೇಶ, ವಿದೇಶಗಳಿಂದ ಸಾಯಿಬಾಬಾ ಭಕ್ತರು ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪುದುಚೇರಿ ಮುಖ್ಯಮಂತ್ರಿ  ವಿ.ನಾರಾಯಣ ಸ್ವಾಮಿರ ಅವರನ್ನು ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನಿಂದ ಸತ್ಕರಿಸಲಾಯಿತು.