ಕ್ಷಯ ಮುಕ್ತ ಭಾರತ ಮಾಡುವಲ್ಲಿ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಿ: ಸಿದ್ದಪ್ಪ ಲಿಂಗದಾಳ
Public should join hands with the department to make India tuberculosis-free: Siddappa Lingadala
ಲೋಕದರ್ಶನ ವರದಿ
ಗದಗ ಮಾ.28: ಒಂದು ಕಾಲದಲ್ಲಿ ಟಿ.ಬಿ. ಕ್ಷಯರೋಗ ಎಂದರೆ ಜನರಲ್ಲಿ ಭಯದ ವಾತವಾರಣ ಇತ್ತು, ಕ್ಷಯರೋಗವು ಮೈಕ್ರೋ ಬ್ಯಾಕ್ಟೆರಿಯಂ ಟ್ಯುಬರ್ ಕ್ಯೂಲೋಸಿಸ್ ಎಂಬ ಸೂಕ್ಷ ರೋಗಾಣುವಿನಿಂದ ಬರುತ್ತದೆ. ಇಂದು ಆರೋಗ್ಯ ಇಲಾಖೆಯು ನಿರಂತರವಾ ಅರಿವು ಮೂಡಿಸುವುದ ರಿಂದ ಮತ್ತು ತಿಳುವಳಿಕೆ ನೀಡುವ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಕ್ಷಯದಬಗ್ಗೆ ಜಾಗೃತಿ ಮತ್ತು ಓಷದೋಪಚಾರ ರಿಂದ ಗುಣಮುಖವಾಗುತ್ತಿರುವುದರಿಂದ ಭಯಮುಕ್ತಗೊಳಿಸಲಾಗಿದೆ. ಸಂಪೂರ್ಣ ಕ್ಷಯ ಮುಕ್ತ ಕರ್ನಾಟಕಕ್ಕೆ ಹೆಚ್ಚು ಸಮುದಾಯ ಕೈಜೊಡಿಸಲು ಮುಂದಾಗಬೇಕೆಂದು ಅಡವಿಸೋಮಾಪೂರ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಸಿದ್ದಪ್ಪ ಎನ್ ಲಿಂಗದಾಳ ಹೇಳಿದರು. ಅವರು ಕನಾಟಕ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಕೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಅಡವಿ ಸೋಮಾಪೂರ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಂಯೋಗದಲ್ಲಿ ಸಣ್ಣತಾಂಡೆಯಲ್ಲಿ ಏರಿ್ಟಸಲಾಗಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷಯ ರೋಗವನ್ನು ನಿರಂತರ ಚಿಕಿತ್ಸೆಯಿಂದ ಕ್ಷಯರೋಗವನ್ನು ಗುಣಪಡಿಸುವುದು, ಟಿಬಿಯು ಶ್ವಾಸಕೋಶಗಳಿಗಷ್ಟೇ ಅಲ್ಲದೇ ದೇಹದ ಇನ್ನಿತರ ಭಾಗಗಳಿಗೂ ಹರಡಬಹುದು. ಆದ್ದರಿಂದ ಕ್ಷಯ ರೋಗದ ಲಕ್ಷಣಗಳು ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟು ಸತತವಾದ ಕೆಮ್ಮ ಅದು ಕ್ಷಯವಾಗಿರಬಹುದು ಜ್ವರ ಅದರಲ್ಲೂ ಸಂಜೆ ವೇಳೆ ಜ್ವರ ಬರುವುದು ಎದೆಯಲ್ಲಿ ನೋವು ಉಂಟಾಗುವುದು ತೂಕ ಕಡಿಮೆಯಗುವುದು ಹಸಿವಾಗದಿರುವುದ ಕಷದಲ್ಲಿ ರಕ್ತ ಬಿಳುವುದು ಇಂತಹ ಲಕ್ಷಣಗಳು ಯಾರಿಗಾದರು ಇದ್ದರೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಫ ಪರೀಕ್ಷೆ ಮಾಡಿಸಿಕೊಳ್ಳಿರಿ ಕ್ಷಯರೋಗಕ್ಕೆ ಉಚಿತ ಚಿಕಿತ್ಸೆಯನ್ನು ಪಡೆದು ಆರೋಗ್ಯ ಭಾಗ್ಯವನ್ನು ಪಡೆಯಬೇಕೆಂದರು ಮತ್ತು 6ರಿಂದ 9 ತಿಂಗಳು ಇರುತ್ತದೆ ಎಂದು ಹೇಳಿದರು
ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಎಸ್,ಬಿ.ಗಡಾದ ಮಾತನಾಡಿ ಕ್ಷಯರೋಗವು ಮೈಕ್ರೋ ಬ್ಯಾಕ್ಟೆರಿಯಂ ಟ್ಯುಬರ್ ಕ್ಯೂಲೋಸಿಸ್ ಎಂಬ ಸೂಕ್ಷ ರೋಗಾಣುವಿನಿಂದ ಬರುತ್ತದೆ. ಕ್ಷಯ ರೋಗಿಯು ಕೆಮ್ಮಿದಾಗ ಅಥವಾ ಸೀನುವಾಗ ಹೊರಬರುವ ತುಂತುರಗಳಿಂದ ಈ ರೋಗಾಣು ಗಾಳಿ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಅವನಿಗೆ ಸೋಂಕು ಉಂಟಾಗುತ್ತದೆ ಕ್ಷಯ ರೋಗದ ಲಕ್ಷಣಗಳು ಎರಡು ವಾರು ಅಥವಾ ಅದಕ್ಕಿಂತ ಮೇಲ್ಪಟ್ಟು ಸತತವಾದ ಕೆಮ್ಮ ಅದು ಕ್ಷಯವಾಗಿರಬಹುದು ಜ್ವರ ಅದರಲ್ಲೂ ಸಂಜೆ ವೇಳೆ ಜ್ವರ ಬರುವುದು ಎದೆಯಲ್ಲಿ ನೋವು ಉಂಟಾಗುವುದು ತೂಕ ಕಡಿಮೆಯಗುವುದು ಹಸಿವಾಗದಿರುವುದ ಕಷದಲ್ಲಿ ರಕ್ತ ಬಿಳುವುದು ಇಂತಹ ಲಕ್ಷಣಗಳು ಯಾರಿಗಾದರು ಇಂದ್ದರೆ ಕಫ ಪರೀಕ್ಷೆ ಮಾಡಿಸಿಕೊಳ್ಳಿರಿ ಕ್ಷಯರೋಗಕ್ಕೆ ಪಡೆಯಬೇಕೆಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕರಾದ ಎಸ್.ಜಿ.ಅಮ್ಮಿನಬಾಯಿ ವಹಿಸಿದ್ದರು ಅಂಗನವಾಡಿ ಕಾರ್ಯಕರ್ತೆ ಎಫ್.ಎನ್.ಅತ್ತಿಕಟ್ಟಿ ಸ್ವಾಗತಿಸಿದರು, ಸವಿತಾ ಪವಾರ ಕಾರ್ಯಕ್ರಮವನ್ನು ನಿರೂಪಿಸಿದರು ರೇಣುಕಾ ಮಾಡಲಗೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಿದ್ದಪ್ಪ ಲಮಾಣಿ ಮಂಜುಳಾ ಆರಿ. ಲಲಿತಾ ಅಂಗಡಿ ಲಕ್ಷ್ಮೀ ಪೂಜಾರ. ಮುಂತಾದವರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 