ಆ.1ರಂದು ಒಳಮೀಸಲಾತಿ ಜಾರಿಗಾಗಿ ಜನಾಕ್ರೋಶ ಪ್ರತಿಭಟನೆ- ಗಣೇಶ ಹೊರತಟ್ನಾಳ
Public outcry over implementation of internal reservation on August 1st - Ganesh Horatatnal
ಆ.1ರಂದು ಒಳಮೀಸಲಾತಿ ಜಾರಿಗಾಗಿ ಜನಾಕ್ರೋಶ ಪ್ರತಿಭಟನೆ- ಗಣೇಶ ಹೊರತಟ್ನಾಳ
ಕೊಪ್ಪಳ 30: ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯಒದಗಿಸುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದತೀರ್ಿನಅನ್ವಯತ್ವರಿತವಾಗಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ವಿವಿಧ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಆ.1ರಂದು ಜಿಲ್ಲಾಧಿಕಾರಿಕಚೇರಿಎದುರುಜನಾಕ್ರೋಶ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದುದಲಿತ ಮುಖಂಡಗಣೇಶ ಹೊರತಟ್ನಾಳ ಹೇಳಿದರು.ನಗರದ ಕಾರ್ಯನಿರತ ಪತ್ರಕರ್ತರ ಸಂಘದಕಾರ್ಯಾಲಯದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿದರು.
ಅಲ್ಲದೇ ನಾಗಮೋಹನ್‌ದಾಸ್‌ಆಯೋಗಕ್ಕೆ ಸರ್ಕಾರ ಸರಿಯಾದರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಹೀಗಾಗಿ ಆ.11ರಂದು ನಡೆಯುವ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ತ್ವರಿತಕ್ರಮ ವಹಿಸಿ, ಸುಪ್ರೀಂಕೋರ್ಟ್‌ಆದೇಶವನ್ನುಗೌರವಿಸಬೇಕು ಎಂದು ತಿಳಿಸಿದರು.ಒಳ ಮೀಸಲಾತಿಜಾರಿಯಾಗದಿದ್ದರೆ ಸರ್ಕಾರಿ ಕಚೇರಿಗಳಲ್ಲಿ ಯಾರಿಗೂ ಆಡಳಿತ ನಡೆಸುವುದಕ್ಕೆ ಬಿಡುವುದಿಲ್ಲ. ರಾಜ್ಯದಎಲ್ಲ ಶಾಸಕ, ಸಚಿವರ, ಮುಖ್ಯಮಂತ್ರಿಗಳ ಮನೆ ಎದುರು ನ್ಯಾಯ ಸಿಗುವವರೆಗೂ ನಿರಂತರ ಮೀಸಲಾತಿ ಹೋರಾಟ ಮಾಡುತ್ತೇವೆ ಎಂದರು.ಆ.1ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿಜಿಲ್ಲಾದ್ಯಂತ ನಾಲ್ಕು ಸಾವಿರಕ್ಕೂಅಧಿಕ ಮಾದಿಗ ಸಮುದಾಯದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಹನುಮೇಶ ಕಡೇಮನಿ, ದ್ಯಾಮಣ್ಣ ಪೂಜಾರ್, ಮಲ್ಲಿಕಾರ್ಜುನ ಪೂಜಾರ್, ಗಾಳೆಪ್ಪ ಹಿಟ್ನಾಳ, ಫಕೀರ್ಪ ಬಂಗ್ಲಿ, ಜುಂಜಪ್ಪ ಮೆಳ್ಳಿಕೇರಿ ಸೇರಿದಂತೆಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 