29 ವಾರ್ಡ್‌ಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಸಾರ್ವಜನಿಕರ ಆಗ್ರಹ
Public demand to open fair price shops in 29 wards
ಲೋಕದರ್ಶನ ವರದಿ
ಹಾವೇರಿ 01: ಶಹರದ 29 ವಾರ್ಡಗಳಲ್ಲಿ ನ್ಯಾಯಬೆಲೆ ಅಂಗಡಿಯನ್ನು ಸ್ಥಾಪಿಸುವಂತೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು. ಹಾವೇರಿ ಶಹರದ ಮಕಾನಗಲ್ಲಿ,ಮಣಿಗಾರ ಓಣಿ, ತಳವಾರ ಓಣಿ, ಚಂದ್ರಪಟ್ಟಣ ರೋಡ್, ಮಹಬೂಬ ನಗರ, ತಾಜನಗರ ಆನಿಹೊಂಡ ದಾನೇಶ್ವರಿ ನಗರ ಬಾದಾಮಿ ನಗರ, ಶಿವಲಿಂಗ ನಗರದಲ್ಲಿ, ಯಾವುದೇ ನ್ಯಾಯಬೇಲೆ ಅಂಗಡಿಯು ಇರುವುದಿಲ್ಲ.
ಇಲ್ಲಿನ ಜನರು ಬಹಳ ಬಡವರು ಹಾಗೂ ಮಾಧ್ಯಮ ವರ್ಗದವರು ವಾಸಿಸುರುತ್ತಾರೆ ನ್ಯಾಯ ಬೇಲೆಯ ಅಂಗಡಿಯು ಬಹಳ ದೂರವಾಗಿದ್ದರಿಂದ ಜನರಿಗೆ ತುಂಬಾ ತೊಂದರೆಯಾಗಿರುತ್ತೆದೆ. ನ್ಯಾಯಬೇಲೆ ಅಂಗಡಿಯಿಂದ ರೇಷನವನ್ನು ತರಲು ವಯೋವೃದ್ದರು ಹರಸಾಹಸ ಪಡುತ್ತಿದ್ದಾರೆ ಹಾಗೂ ಕೂಲಿ ಕಾರ್ಮಿಕರು ಆ ದಿವಸದ ಕೂಲಿಯನ್ನು ಬಿಟ್ಟು ನ್ಯಾಯಬೆಲೆ ಅಂಗಡಿಯ ಮುಂದೆ ಪಾಳೆ ಹಚ್ಚತ್ತಿದ್ದಾರೆ. ಬಡವರು ರೇಷನನನ್ನು ತರಲು ಅಟೋರಿಕ್ಷಾಗಳಿಗೆ ಹೆಚ್ಚಿನ ಬಾಡಿಗೆಯನ್ನು ನೀಡಿ ರೇಷನನನ್ನು ತರುತ್ತಿದ್ದಾರೆ.ಕೊಡಲೇ ಸದರಿ ವಾರ್ಡಗಳಲ್ಲಿ ನ್ಯಾಯಬೇಲೆ ಅಂಗಡಿಯನ್ನು ಸ್ಥಾಪಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಶಾಹೀದ ದೇವಿಹೊಸೂರ,ಮುಖಂಡರಾದ ಅಮೀರಜಾನ ಬೇಪಾರಿ ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 