ಜೀವಜಲ ವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಅಂಗೂರ

ಲೋಕದರ್ಶನವರದಿ

ರಾಣೇಬೆನ್ನೂರು: ಜೀವಜಲ ವೃದ್ಧಿಗಾಗಿ ಸಕರ್ಾರ ಜಲಮೂಲಗಳ ಪುನರುಜ್ಜೀವನ, ಹಸಿರೀಕರಣ ಮಣ್ಣು ಮತ್ತು ನೀರಿನ ಸಂರಕ್ಷಣೆ ಹಾಗೂ ನೀರಿನ ಮಿತವಾದ ಬಳಕೆ ಎಂಬ ನಾಲ್ಕು ಅಂಶಗಳ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದೆ ಎಂದು ತಾಲೂಕು ನರೇಗಾ ಯೋಜನೆಯ ಸಂಯೋಜಕ ಡಿ.ವಿ ಅಂಗೂರ ಹೇಳಿದರು.

         ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮ ಪಂಚಾಯ್ತಿ ಆವರಣದಲ್ಲಿ  ಶ್ರೀ ಬಸವೇಶ್ವರ ಪ್ರೌಢಶಾಲೆ, ಕುಮಾರಪಟ್ಟಣ ಪೊಲೀಸ್ ಠಾಣೆ ಹಾಗೂ ನಿವೃತ್ತ ಯೋಧರ ಸಹಯೋಗದಲ್ಲಿ ಜಲಶಕ್ತಿ ಹಾಗೂ ಜಲಾಮೃತ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

          ಮಾನವನ ಸ್ವಯಂಕೃತ ಅಪರಾಧದಿಂದಾಗಿ ಸಸ್ಯ ಸಂಪತ್ತು ಕಡಿಮೆಯಾಗಿ ಮಳೆಯ ಕೊರತೆ ಉಂಟಾಗಿದೆ. ವರ್ಷದಿಂದ ವರ್ಷಕ್ಕೆ ಜೀವಜಲ ಬತ್ತಿ ಹೋಗುತ್ತಿದೆ. 

 ಮುಂದಿನ ದಿನಗಳಲ್ಲಿ ಹನಿ ನೀರಿಗೂ ಪರದಾಡುವಂತಾಗಲಿದೆ' ಎಂದು ಆತಂಕ ವ್ಯಕ್ತಪಡಿಸಿದರು.

ಮೀಸಲು ಆರಣ್ಯ ಪ್ರದೇಶ, ವರ್ಷಕ್ಕೆ 500ಸಸಿಗಳನ್ನು ನೆಡುವಿಕೆ, ಪಾಳು ಬಿದ್ದ ಕೆರೆ, ಬಾವಿ, ಗೋಕಟ್ಟೆ, ಗೋಮಾಳ ಜಮೀನುಗಳಲ್ಲಿ ಬದು, ಚೆಕ್ಡ್ಯಾಂ, ಇಂಗುಗುಂಡಿ ನಿಮರ್ಿಸಿ ವ್ಯರ್ಥವಾಗಿ ಹರಿಯುವ ನೀರನ್ನು ಭೂಮಿಯಲ್ಲಿ ಇಂಗಿಸಲಾಗುವುದು ಎಂದರು.

   ಜೀವಜಲ ಸಂರಕ್ಷಿಸುವ ಯೋಜನೆ ಯಶಸ್ವಿಯಾಗಲು ವಿದ್ಯಾಥರ್ಿಗಳು, ಪರಿಸರ ಪ್ರೇಮಿಗಳು, ಸಾರ್ವಜನಿಕರು ಸಹಕರಿಸಬೇಕಿದೆ ಎಂದರು. ಜಾಗೃತಿ ಜಾಥಾವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಳಿಕ ಪೊಲೀಸ್ ಠಾಣೆ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಕುಂಬಾರ, ಪಿಡಿಒ ಪೂಣರ್ಿಮಾ.ವಿ., ನಿವೃತ್ತ ಯೋಧರಾದ ಶಿವೇಗೌಡ ಯು.ಡಿ., ಶಿವರಾಜ ಎನ್.ಎಚ್., ಶಿವಮೂತರ್ಿ ಕರೂರ, ನೂರಜಹಾನ್, ಅಣ್ಣೆಪ್ಪ ಚನ್ನಾಪುರ, ಚಂದ್ರಶೇಖರ ಕೆ.ಜಿ, ಎನ್ಎನ್ ಕಮ್ಮಾರ, ಎಂ.ಆರ್ ತೇಗೂರ, ರಾಜು ಕೆಂಗಣ್ಣನವರ, ಮಹಾಂತೇಶ್ ಕೊಡಿಯಾಲ ವಿದ್ಯಾಥರ್ಿಗಳು ಮತ್ತಿತರರು ಪಾಲ್ಗೊಂಡಿದ್ದರು.