ಮಾದಕ ದ್ರವ್ಯ ಸೇವನೆ, ಅಕ್ರಮ ಸಾಗಾಣಿಕೆ ವಿರುದ್ಧ ಜನಜಾಗೃತಿ
Public awareness against drug abuse and trafficking
ಬೆಳಗಾವಿ 26: ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಸಂಸ್ಥೆಯ ಆಶ್ರಯದಲ್ಲಿ ಹಾಗೂ ಆಹಾರ ಸುರಕ್ಷತೆ ಮತ್ತು ಓಷಧೀಯ ಆಡಳಿತ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಇಂದು ಬೆಳಗಾವಿಯಲ್ಲಿ ಜನಜಾಗೃತಿ ರಾ್ಯಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಜಾಥಾ ಆರಂಭಕ್ಕೂ ಮುನ್ನ ಜಿತೋ ಸಂಸ್ಥೆಯ ಅಧ್ಯಕ್ಷ ಹರ್ಷವರ್ಧನ ಇಂಚಲ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳಗಾವಿ ನಗರದ ಪೋಲಿಸ ಆಯುಕ್ತ ಬೊರಸೆ ಭೂಷಣ ಅವರು ಜಾಥಾವನ್ನು ಅಧಿಕೃತವಾಗಿ ಚಾಲನೆ ನೀಡಿ ಜಾಥಾ ಮುಕ್ತಾಯಗೊಳ್ಳುವವರೆಗೂ ಭಾಗವಹಿಸಿ ಎಲ್ಲರಿಗೂ ಸ್ಫೂರ್ತಿಯಾದರು.
ಜಾಗತಿಕವಾಗಿ, ಮಾದಕ ದ್ರವ್ಯ ದುರುಗಪಯೋಗವನ್ನು ಎದುರಿಸಲು ಈ ಮಹತ್ವದ ದಿನದಂದು ವಿಶ್ವದಲ್ಲೆಡೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಅಂತರಾಷ್ಟ್ರೀಯ ಮಟ್ಟದ ಪ್ರಯತ್ನದ ಒಂದು ಭಾಗವಾಗಿ ಇಂದು ನಗರದಲ್ಲಿಯೂ ಸಹ ಈ ಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು. ಈ ಜಾಥಾವೂ ಬೆಳಿಗ್ಗೆ 8-30 ಗಂಟೆಗೆ ಬೆಳಗಾವಿ ನಗರದ ರಾಣಿ ಚೆನ್ನಮ್ಮ ವೃತ್ತದ ಬಳಿವಿರುವ ಕನ್ನಡ ಸಾಹಿತ್ಯ ಭವನದಿಂದ ಅರಂಭಗೊಂಡು ಡಾ. ಅಂಬೇಡಕರ ರಸ್ತೆ, ಕೊಲ್ಲಾಪೂರ ಸರ್ಕಲ ಮೂಲಕ ಕೆ.ಎಲ್.ಇ. ಶತಮಾನೋತ್ಸವ ಕೆಂದ್ರದ ಬಳಿ ಮುಕ್ತಾಯಗೊಂಡಿತು.
ಜನಜಾಗೃತಿ ಜಾಥಾದಲ್ಲಿ ಉಪ ಓಷಧಿ ನಿಯಂತ್ರಕ ನಾಗರಾಜ, ಸಹಾಯಕ ಓಷಧ ನಿಯಂತ್ರಕ ಕೆ.ಮಲ್ಲಿಕಾರ್ಜುನ, ರಘುರಾಮ.ಎನ್., ಮನೋಹರ, ಓಷಧ ನೀರೀಕ್ಷಕ ರೇಣುಪ್ರಸಾದ, ಮತ್ತು ಬೆಳಗಾವಿಯ ಆಹಾರ ಸುರಕ್ಷತೆ ಮತ್ತು ಓಷಧ ಆಡಳಿತ ಸಂಸ್ಥೆಯ ದಯಾನಂದ, ಜಿತೋ ಕಾರ್ಯದರ್ಶಿ ಅಭಯ ಆದಿಮನಿ ಕಾರ್ಯಕ್ರಮ ಸಂಚಾಲಕ ಡಾ. ದೇವೆಗೌಡ ಇಮಗೌಡನವರ, ಸೇರಿದಂತೆ ಜಿತೋ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಚಿಲ್ಲರೆ ವ್ಯಾಪಾರಿ ಮತ್ತು ಸಗಟು ಓಷಧ ಸಂಘ, ಹಾಗೂ ಕೆ.ಎಲ್.ಇ.ರಾಣಿ ಚೆನ್ನಮ್ಮ ಫಾರ್ಮಸಿ ಕಾಲೇಜು, ಮರಾಠಾ ಮಂಡಳ ಫಾರ್ಮಸಿ ಕಾಲೇಜು, ಪ್ಯಾರಾಮೆಡಿಕಲ್ , ಭರತೇಶ ನರ್ಸಿಂಗ ಕಾಲೇಜು, ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 