ಪಬ್ಲಿಕ್ ಸ್ಕೂಲ್ನನ ಪ್ರಥಮ ಶಾಲಾ ವಾರ್ಷಿಕೋತ್ಸವ ಉದ್ಘಾಟನೆ
ಕೊಪ್ಪಳ, 17 - ಶಿಕ್ಷಣ ಕ್ಷೇತ್ರದಲ್ಲಿ ಸೇವಾ ಮನೋಭಾವ ದಿಂದ ಕೆಲಸ ಮಾಡಿದಾಗ ಮಕ್ಕಳಿಗೆ ಉಜ್ವಲ ಭವಿಷ್ಯ ಸಾಧ್ಯವೆಂದು ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ ಹೇಳಿದರು.
ಅವರು ರವಿವಾರದಂದು ಕೊಪ್ಪಳ ನಗರದ ಕುಷ್ಟಗಿ ರಸ್ತೆಯ ಬಳಿ ಮಹಾಂತಮ್ಮ ಸಂಗಣ್ಣ ಗಡಾದ ಶೆಟ್ಟರ ಮೆಮೋರಿಯಲ್ ಟ್ರಸ್ಟ್ (ರಿ)ನ ಗ್ಲೋಬಲ್ ಪಬ್ಲಿಕ್ ಸ್ಕೂಲ್ನನ ಪ್ರಥಮ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾಗದಲ್ಲಿ ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ, ಮಕ್ಕಳ ಭವಿಷ್ಯ ಉತ್ತಮ ಶಿಕ್ಷಣದಲ್ಲಿ ಅಡಗಿದೆ ಪ್ರತಿ ಮಗುವಿಗು ಸಹ ಉತ್ತಮ ಶಿಕ್ಷಣ ದೊರಕುವಂತಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಮುಸ್ಲಿಂ ಯೂನಿಟಿ ತಾಲಗಕ ಅಧ್ಯಕ್ಷ ಪಕ್ರುಸಾಬ ನದಾಫ್ ಮಾತನಾಡಿ ಶಿಕ್ಷಣ ಸಂಸ್ಥೆಯನ್ನು ತುಂಬಾ ಕಷ್ಟಪಟ್ಟು ಕಟ್ಟಿದ್ದು ಅದರ ಫಲ ಬರುವದಿನಗಳಲ್ಲಿ ಸಂಸ್ಥೆಗೆ ಸಿಗಲಿದೆ. ಪಾಲಕರು ಬೆಳೆಯುವ ಈ ಸಂಸ್ಥೆಗೆ ಆರಂಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಬೆಂಬಲಿಸುವಂತೆ ಕರೆ ನೀಡಿದರು.
ಪತ್ರಕರ್ತ ಸಂತೋಷ ದೇಶಪಾಂಡೆ ಮಾತನಾಡಿ ಶಿಕ್ಷಣ ಸಂಸ್ಥೆಗಲು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದೃಷ್ಠಿಕೋನದಿಂದ ಕೆಲಸ ಮಾಡುತ್ತವೆ ಎಲ್ ಕೆ ಜಿ ಯಿಂದ ಆರಂಭವಾಗಿರುವ ಈ ಸಂಸ್ಥೆ ದೊಡ್ಡಮಟ್ಟದಲ್ಲಿ ಬೆಳೆದು ಕೊಪ್ಪಳದ ಆಸ್ತಿಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಸಂಸ್ಥೆ ಅಧ್ಯಕ್ಷ ಬಸವರಾಜ ಶಿರಗುಂಪಿ ಶೆಟ್ಟರ್ ಮಾತನಾಡಿ ನಮ್ಮ ಶಾಲೆಗೆ ಕುಡಿಯುವ ನೀರು ಹಾಗೂ ರಸ್ತೆ ಸೌಲಭ್ಯ ವದಗಿಸಿ ಮಕ್ಕಳ ಶಿಕ್ಷಣಕ್ಕೆ ಸಹಕರಿಸಿದ ನಗರಸಭಾ ಸದಸ್ಯ ಮುತ್ತುರಾಜ ಕುಷ್ಟಗಿ ಹಾಗೂ ಸಂಸ್ಥೆಗೆ ಸದಾ ಬೆಂಬಲ ನೀಡುವ ಗುರುರಾಜ ಹಲಗೇರಿ ಅವರಿಗೆ ಮಕ್ಕಳ ಪರವಾಗಿ ದನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖೋಪಾಧ್ಯಕರಾದ ಶ್ರೀಮತಿ ರೇಖಾ ಬಸವರಾಜ ಶಿರಗುಂಪಿ ಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕಿ ಶಾರದಾ ನಿರುಪಿಸಿದರು. ಪ್ರರಂಬದಲ್ಲಿ ಸ್ವಾಗತ ಕಾರ್ಯಕ್ರಮ ಕಳಕೇಶ ಜಿಗಳೂರ್, ಸಾಂಸ್ಕೃತಿಕ ಕಾರ್ಯಕ್ರಮ ಮಹಮದ್ ರಫಿ, ಪ್ರಶಸ್ತಿ ಪತ್ರ ವಿತರಣೆ ನಿಂಗಪ್ಪ ಅಂಗಡಿ ಅವರು ನಡೆಸಿಕೊಟ್ಟರು.
ವೇದಿಕೆ ಮೇಲೆ ನಗರಸಭೆ ಸದಸ್ಯ ಗುರುರಾಜ ಹಲಗೇರಿ, ಮುಖಂಡ ಶಿವಕುಮಾರ ಕುಕನೂರ, ಉಧ್ಯಮಿ ಅಶೋಕ ಕುಂಬಾರ ಇತರರು ಇದ್ದರು. ಶಾಲಾ ಮಕ್ಕಳಿಂದ ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದುವು.