ಸಾರ್ವಜನಿಕರಿಂದ ಪರಿಸರ ಕುರಿತು ಆಲಿಕೆ ಸಭೆ

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪೂರದಲ್ಲಿ ಜೂನ್ 22 ರಂದು ಹಾಗೂ ಲೋಕಾಪೂರದಲ್ಲಿ 25 ರಂದು ಪರಿಸರ ಕುರಿತು ಆಲಿಕೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ ಹೇಳಿದರು.

ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಈ ಕುರಿತು ಗಣಿ ಗುತ್ತಿಗೆದಾರರ ಸಮಕ್ಷಮದಲ್ಲಿ ಜರುಗಿದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೂನ್ 22 ರಂದು ಶಿವಾಜಿ ವಾಸುದೇವ ದೇವಗಿರಿ, ಮೆ|| ಅಂಬಾ ಮಿನರಲ್ಸ್ ಮುದ್ದಾಪೂರ ಇವರಿಂದ ಮುದ್ದಾಪೂರ ಸುಣ್ಣದ ಕಲ್ಲು ಮತ್ತು ಡೊಲೊಮೈಟ್ ಗಣಿಗುತ್ತಿಗೆಯ ಹಾಲಿ ಇರುವ 15,000 ರಿಂದ 40,000 ಟನ್ ಪ್ರತಿ ವರ್ಷಕ್ಕೆ ಸುಣ್ಣದ ಕಲ್ಲನ್ನು ಮತ್ತು 5000 ರಿಂದ 60,000 ಟನ್ ಪ್ರತಿ ವರ್ಷಕ್ಕೆ ಡೊಲೊಮೈಟ್ ಉತ್ಪಾದನೆ ವಿಸ್ತರಿಸಲು ಪರಿಸರ ಪರವಾನಿಗೆ ನೀಡುವ ಸಲುವಾಗಿ ಸಾರ್ವಜನಿಕರಿಂದ ಆಲಿಕೆ ಸಭೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಅದೇ ರೀತಿ ವೆಂಕಪ್ಪ ರಾಮಪ್ಪ ಪಾಟೀಲ ಲೋಕಾಪೂರ ಅವರಿಂದ ಎಂ.ಎಲ್.ನಂ 2407 ಸುಣ್ಣದ ಕಲ್ಲಿನ ಗಣಿಗುತ್ತಿಗೆಯ ಹಾಲಿ ಇರುವ 20,000 ಟಿಪಿಎ ಸುಣ್ಣದ ಕಲ್ಲು ಗಣಿಗಾರಿಕೆ ಸಾಮರ್ಥವನ್ನು 1,00,000 ಟಿಪಿಎಗೆ ವಿಸ್ತರಿಸಲು ಪರಿಸರ ಪರವಾನಿಗೆ ನೀಡುವ ಸಲುವಾಗಿ ಲೋಕಾಪೂರದಲ್ಲಿ ಜೂನ್ 25 ರಂದು ಸಾರ್ವಜನಿಕರ ಆಲಿಕೆ ಸಚಿಭೆ ಹಮ್ಮಿಕೊಳ್ಳಲಾಗಿದೆ. ಅಂದು ಸಾರ್ವಜನಿಕರು ಸದರಿ ದಿನದಂದು ಪಾಲ್ಗೊಂಡು ಪರಿಸರ ಕುರಿತು ತಮ್ಮ ಆಲಿಕೆಗಳನ್ನು ವ್ಯಕ್ತಪಡಿಸಬಹುದಾಗಿದೆ ಎಂದು ತಿಳಿಸಿದರು. 

ಅಂದು ನಡೆಯುವ ಸಭೆಗಳಲ್ಲಿ ಪರಿಸರ ಪರವಾನಿಗೆ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಸಾರ್ವಜನಿಕರಿಂದ ಬಂದ ಆಲಿಕೆಗಳನ್ನು ಪಡೆದುಕೊಳ್ಳಲು ತಿಳಿಸಿದರು. ಸಭೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಮನಿಯಾರ, ಪರಿಸರ ಕಾನ್ಸಲ್ಟಂಟ್ ಐ.ಶ್ರೀನಿವಾಸರಾವ್, ಕೆ.ವಿ.ಪಟೇಲ ಉಪಸ್ಥಿತರಿದ್ದರು.