ಯೋಗ-ಧ್ಯಾನದಿಂದ ಮಾನಸಿಕ ನಿಯಂತ್ರಣ: ಪ್ರೊ. ನಾಗಲಿಂಗಪ್ಪ

ಹಾವೇರಿ, 21: ಭಾರತೀಯ ಪರಂಪರೆಯಲ್ಲಿ ವಿಶ್ವಮಾನ್ಯವಾದ ಯೋಗವು ಪ್ರಮುಖ ಪಾತ್ರ ವಹಿಸಿದ್ದು, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೆಸೆಯಲ್ಲಿ ನಿತ್ಯವೂ ಯೋಗದ ಪ್ರಾಕಾರಗಳನ್ನು ಮತ್ತು ಧ್ಯಾನ ಅಳವಡಿಸಿಕೊಳ್ಳುವುದರಿಂದ ಮಾನಸಿಕ ನಿಯಂತ್ರಣ ಮಾಡಬಹುದೆಂದು ಯೋಗತಜ್ಞ ಪ್ರೊ. ನಾಗಲಿಂಗಪ್ಪ ಗುಂಡಣ್ಣನವರ ಅಭಿಪ್ರಾಯಪಟ್ಟರು. 

ಅವರು ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಯೋಗ ಕೇಂದ್ರವು ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. 

ಶಿವಯೋಗದಿಂದ ಯೋಗತ್ವ ಪ್ರಾಪ್ತಿಯಾಗುತ್ತದೆ. ಜಗತ್ತಿಗೆ ಶ್ರೇಷ್ಠವಾದ ಪರಿಕಲ್ಪನೆಯನ್ನು ಕೊಟ್ಟ ಹಿರಿಮೆ ಭಾರತದ್ದು. ಯೋಗ ಮತ್ತು ಧ್ಯಾನಗಳು ಮನುಷ್ಯನ ಆರೋಗ್ಯ ಉತ್ತಮಗೊಳಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತವೆ. ಇಂದ್ರಯ ನಿಗ್ರಹ, ಮಾನಸಿಕ ಸ್ಥಿಮಿತತೆ ಮತ್ತು ಸಮೃದ್ಧ ಬದುಕನ್ನು ಹೊಂದಲು ಅನುಕೂಲವಾಗುತ್ತವೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎಮ್. ಎಸ್. ಯರಗೊಪ್ಪ ಮಾತನಾಡಿ ಪ್ರತಿಯೊಬ್ಬರೂ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ನಿಶ್ಚಿತ ಗುರಿ ಮತ್ತು ಕಾರ್ಯಸಾಧ್ಯತೆಗಳನ್ನು ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾಥರ್ಿಗಳಾದವರು ವೇಳಾಪಟ್ಟಿ ನಿಗದಿಗೊಳಿಸಿ ನಿತ್ಯವೂ ಯೋಗ ಮಾಡುವುದು ಅವಶ್ಯವಿದೆ ಎಂದರು. 

ಕಾರ್ಯಕ್ರಮದನ್ವಯ ಪ್ರೊ. ಗುಂಡಣ್ಣನವರ ಪ್ರಾರಂಭದಲ್ಲಿ 45 ನಿಮಿಷದ ಅವಧಿಯವರೆಗೆ ದೇವತಾ ಪ್ರಾರ್ಥನೆ-ಧ್ಯಾನದೊಂದಿಗೆ ಆರಂಭಿಸಿ ಮುದ್ರಾ ನಮಸ್ಕಾರ, ತಾಡಾಸನ, ವಜ್ರಾಸನ, ಉಚಿತಾಸನ, ಅರ್ಧಕುಶ್ವಾಸನ, ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ವಕ್ರಾಸನ, ಭುಜಂಗಾಸನ, ಕಪಾಳಬಾತಿ, ಪ್ರಾಣಾಯಾಮ, ಸೂರ್ಯನಮಸ್ಕಾರ ಮೊದಲಾದ ಯೋಗ ಪ್ರಾಕಾರಗಳನ್ನು ಪ್ರದರ್ಶನಗೊಳಿಸಿ ಸಿಬ್ಬಂದಿ ಮತ್ತು ವಿದ್ಯಾಥರ್ಿಗಳಿಗೆ ಪ್ರಾತ್ಯಕ್ಷಿತೆಗಳ ಮೂಲಕ ಪ್ರಯೋಗಗೊಳಿಸಿದರು. 

ಯೋಗದ ಸಂದರ್ಭದಲ್ಲಿ ಪ.ಪೂ. ಪ್ರಾಚಾರ್ಯ ಪ್ರೊ. ಜೆ. ಆರ್. ಶಿಂಧೆ, ಸ್ಕೌಟ್ಸ್ & ಗೈಡ್ಸ್ ಅಧಿಕಾರಿ ಡಾ|| ಎಂ. ಪಿ. ಕಣವಿ, ಎನ್.ಸಿ.ಸಿ ಅಧಿಕಾರಿ ಮೇಜರ್ ಬಿ. ಎಮ್. ಲೋಕಾಪುರ, ಎನ್.ಎಸ್.ಎಸ್. ಅಧಿಕಾರಿ ಪ್ರೊ. ರಮೇಶ ನಾಯ್ಕ, ಪ್ರೊ. ಎಸ್. ಎಸ್. ಸಣ್ಣಶಿವಣ್ಣವರ ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು, ಕೆಡೆಟ್ಗಳು, ಸ್ವಯಂಸೇವಕರು ಪಾಲ್ಗೊಂಡಿದ್ದರು. ಪೂಜಾ ಸಂಗಡಿಗರು ಯೋಗಗೀತೆ ಹಾಡಿದರು, ಪ್ರೊ. ಎಸ್. ಜಿ. ಹುಣಸಿಕಟ್ಟಿಮಠ ನಿರೂಪಿಸಿದರು.