ಜಾನಪದ ಕಲೆಗಳು ಉಳಿಯಲುಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಿ : ಬಸವರಾಜ
Provide opportunities for children to preserve folk arts: Basavaraja
ಶಿಗ್ಗಾವಿ 22 : ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದರಿಂದ ನಿಮ್ಮ ಮಕ್ಕಳ ಭವಿಷ್ಯವನ್ನು ನೀವೆ ಹಾಳು ಮಾಡಿದ ಹಾಗೆ ಆಗುತ್ತದೆ ಎಂದು ಜಾನಪದ ತಜ್ಞ ಬಸವರಾಜ ಶಿಗ್ಗಾವಿ ಪಾಲಕರಿಗೆ ಕಿವಿ ಮಾತು ಹೇಳಿದರು. ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಹಿಂದೂ ಮಹಾಗಣಪತಿ ಯುವಕ ಮಂಡಳಿಯ ವತಿಯಿಂದ 9 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಊರು ಕಲಾವಿದರ ಊರು,
ರಾಜ್ಯವಲ್ಲದೇ ದೇಶ ವಿದೇಶಗಳಲ್ಲಿ ಹೆಸರು ಮಾಡಿದಂತಹ ಕಲೆಯನ್ನು ಪ್ರದರ್ಶನ ನೀಡಿದ ಕಲಾವಿದರನ್ನು ಹೊಂದಿದ ಊರು ನಮ್ಮೂರು ಅಲ್ಲದೇ ಮೂಲ ಜಾನಪದ ಕಲೆಗಳು ಉಳಿಯಲು ಇಂತಹ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಟ್ಟ ಹಿಂದು ಮಹಾಗಣಪತಿ ಯುವಕ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಶ್ರೀ ಶಿವಪುತ್ಯಯ್ಯ ಹಿರೇಮಠ ಹಾಗೂ ಗದಗಯ್ಯಸ್ವಾಮಿಗಳು ಹೆಬ್ಬಳ್ಳಿಮಠ ಅವರು ನೆರವೇರಿಸಿದರು.
ಬಸವರಾಜ ಹೆಬ್ಬಳ್ಳಿಮಠ ಮಾತನಾಡಿ ಶೈಕ್ಷಣಿಕ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಅಂದಾಗ ಮಾತ್ರ ಮಕ್ಕಳಲ್ಲಿ ಪ್ರಗತಿ ಕಾಣಲು ಸಹಾಯವಾಗುತ್ತದೆ ಜೊತೆಗೆ ಇದರಿಂದ ಮಕ್ಕಳಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ದೊರೆಯುತ್ತದೆ ಎಂದರು. ಪ್ರಾಥಮಿಕ ಶಾಲೆ ಮಕ್ಕಳು ಕೋಲಾಟ,ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೇರವೇರಿದವು. ಈ ಸಂದರ್ಭದಲ್ಲಿ ಹಿಂದು ಮಹಾ ಗಣಪತಿ ಯುವಕ ಮಂಡಳಿ ಅದ್ಯಕ್ಷ ವಿನಾಯಕ ಹೂಗಾರ, ಬಸವರೆಡ್ಡಿ ಮಂಡಿಗನಾಳ, ಸತೀಶ ಚೋಟಪ್ಪನವರ,
ಈರ್ಪ ಚಿನ್ನಣ್ಣವರ,ಬಸವಣ್ಣಯ್ಯ ಮಠಪತಿ,ಬಸವರಾಜ ಸಜ್ಜನ, ಶರೀಪಸಾಬ ನಧಾಪ, ಡಾ.ಎಮ್ ಸಿ ಅಂಗಡಿ, ನಿಂಗನಗೌಡ ಅಯ್ಯಣ್ಣವರ,ರವಿ ಗಾಣಗೇರ, ಧರ್ಮಪ್ಪ ಉಳ್ಳಟ್ಟಿ, ಗದಿಗೆಪ್ಪಮಂಡಿಗನಾಳ, ಬೂದುರೆಡ್ಡಿ ಮಂಡಿಗನಾಳ, ಗಂಗಪ್ಪ ಸಂಶಿ,ನಾಗಪ್ಪ ಹುಣಸಿಮರದ, ಜಾಪರ ಬಾಗವಾನ ಸೇರಿದಂತೆ ಊರಿನ ಗ್ರಾಮಸ್ಥರು, ಯುವಕರು, ಮಹಿಳೆಯರು, ಮಕ್ಕಳು ಇದ್ದರು. ಬಸವರಾಜ ಶಿಗ್ಗಾವಿ ಸ್ವಾಗತಿಸಿದರು, ಶಿಕ್ಷಕ ಮೆಹಬೂಬಸಾಬ ತಂಗೊಡ ನಿರೂಪಿಸಿದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 