ಎಸ್‌ಐಆರ್ ವಿಶೇಷ ಜಾಗೃತಿ ಅಭಿಯಾನ

ಎಸ್‌ಐಆರ್ ವಿಶೇಷ ಜಾಗೃತಿ ಅಭಿಯಾನ SIR Special Awareness Campaign

ಲೋಕದರ್ಶನ ವರದಿ 

ಹಾವೇರಿ 22: ಹಾವೇರಿ ತಾಲೂಕಿನ ದೇವಗಿರಿ ಗ್ರಾಪಂನಲ್ಲಿ ಪ್ರಗತಿಯಲ್ಲಿರುವ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಿ, ಕಾರ್ಮಿಕರಿಗೆ ಅರಿವು ಮೂಡಿಲಾಯಿತು.  ಸಹಾಯಕ ನಿರ್ದೇಶಕ ಮೌಲಾಸಾಬ್ ಎಲವಗಿ ಅವರು  ಎಸ್‌ಐಆರ್ ಅಭಿಯಾನದ ಕುರಿತು ಮಾಹಿತಿ ನೀಡಿದರು. ಈ ವೇಳೆ ಪಿಡಿಓ, ಟಿಐಇಸಿ ಸೇರಿದಂತೆ ಪಂಚಾಯತ ಸಿಬ್ಬಂದಿಗಳು, ಕಾಯಕ ಬಂಧಯಗಳು ಇದ್ದರು.