ಉದ್ಯೋಗದ ಹಕ್ಕಿಗಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಸೌಹಾರ್ದ ಸಮಾಜಕ್ಕಾಗಿ ಡಿವೈಎಫ್ಐ 13ನೇ ರಾಜ್ಯಸಮ್ಮೇಳನ - ಬಸವರಾಜ ಪೂಜಾರ
DYFI 13th State Conference: For the Right to Employment, Protection of Democracy, and a Harmonious S
ಹಾವೇರಿ 22: ಶಿಕ್ಷಣ ಉದ್ಯೋಗದ ಹಕ್ಕಿಗಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ ಹಾಗೂ ಸೌಹಾರ್ದ ಸಮಾಜಕ್ಕಾಗಿ ಘೋಷಣೆಯಡಿ ಇದೇ 26,27,28 ಸೆಪ್ಟೆಂಬರ್ 2026 ರಂದು ಮೂರು ದಿನಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆಯಲಿರುವ ಡಿವೈಎಫ್ಐ 13ನೇ ರಾಜ್ಯ ಯುವಜನರ ಸಮ್ಮೇಳನದ ಲೋಗೋವನ್ನು ನಗರದ ಪರೀವೀಕ್ಷಣಾ ಮಂದಿರದ ಆವರಣದಲ್ಲಿ ಬಿಡುಗಡೆ ಮಾಡಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಮಾತನಾಡಿದರು.
ದೇಶಪ್ರೇಮಿ ಯುವಜನ ಚಳುವಳಿಯಾದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಇಂದು ದೇಶದ ಅತಿ ದೊಡ್ಡ ಬಲಿಷ್ಠ ಯುವಜನ ಸಂಘಟನೆಯಾಗಿ ಹಾಗೂ ಯುವಜನರ ನೈಜ ಪ್ರತಿನಿಧಿಯಾಗಿ ಬೆಳೆದು ನಿಂತಿದೆಯಲ್ಲದೆ, ಯುವಜನರ ಸಬಲೀಕರಣಕ್ಕಾಗಿ ದೇಶಾದ್ಯಂತ ಶ್ರಮಿಸುತ್ತಿದೆ.ಯುವಜನರ ಶಿಕ್ಷಣ - ಉದ್ಯೋಗ, ಆರೋಗ್ಯ, ಘನತೆಯ ಬದುಕಿಗಾಗಿ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರುವ ಡಿವೈಎಫ್ಐ ಭಾವೈಕ್ಯತೆ, ಜನ ಚಳುವಳಿಯ ಬಹುದೊಡ್ಡ ಪರಂಪರೆಯುಳ್ಳ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯುವಜನ ಚಳುವಳಿಯನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ "ಶಿಕ್ಷಣ-ಉದ್ಯೋಗದ ಹಕ್ಕಿಗಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಸೌಹಾರ್ದ ಸಮಾಜಕ್ಕಾಗಿ" ಘೋಷಣೆಯಡಿ 13ನೇ ರಾಜ್ಯ ಸಮ್ಮೇಳನವನ್ನು 26 ರಿಂದ 28 ಸೆಪ್ಟೆಂಬರ್ 2026 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿಯಲ್ಲಿ ನಡೆಸಲಾಗುತ್ತಿದೆ.
ಸಮ್ಮೇಳನದಲ್ಲಿ ನಟ ಪ್ರಕಾಶ್ ರಾಜ್, ಕಿಶೋರ್, ರಾಜ್ಯ ಸಭಾ ಸದಸ್ಯರಾದ ರಹೀಮ್, ಡಿವೈಎಫ್ಐ ರಾಜ್ಯ ಸಮಿತಿ ಅಧ್ಯಕ್ಷೆ ಲಿಖಿತ್ ವಸ್ತ್ರದ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಕಾರ್ಯದರ್ಶಿ ಖಲಂದರ್ ಅಲ್ಲಿಗೌಡ್ರ, ಡಿಎಸ್ಎಸ್ ರಾಜ್ಯ ಕಾರ್ಯದರ್ಶಿಗಳಾದ ಉಡಚಪ್ಪ ಮಾಳಗಿ, ಎಸ್ಎಫ್ಐ ಜಿಲ್ಲಾಧ್ಯಕ್ಷರಾದ ಅರುಣ ನಗವತ, ಜಿಲ್ಲಾ ಕಾರ್ಯದರ್ಶಿ ಚೈತ್ರಾ ಕೊರವರ, ವಕೀಲರಾದ ನಾರಾಯಣ ಕಾಳೆ, ಅಲೆಮಾರಿ ಸಮುದಾಯ ಸಂಘದ ಜಿಲ್ಲಾಧ್ಯಕ್ಷರಾದ ಶೆಟ್ಟಿ ವಿಭೂತಿ, ಕರ್ನಾಟಕ ರಾಜ್ಯ ರೈತ ಸಂಘದ ಶಹರ ಘಟಕದ ಅಧ್ಯಕ್ಷ ಸುರೇಶ ಛಲವಾದಿ ಎಸ್ಎಫ್ಐ-ಡಿವೈಎಫ್ಐ ಮುಖಂಡರಾದ ರೇಣುಕಾ ಕಹಾರ, ತಸ್ಲೀಮ್ ಕೆ.ಸಿ, ಶರಣು ಸಂಗನಾಳ, ಮಹೇಶ್, ಪುನೀತ್, ಅತಾವುಲ್ಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 