ರೈತರಿಗೆ 400 ಕೋಟಿ ರೂಪಾಯಿ ಬೆಳೆ ಸಾಲ ನೀಡಿ : ಕುಲಗುಡೆ
Provide crop loans of Rs 400 crore to farmers: Kulgude
ರಾಯಬಾಗ 16: ತಾಲೂಕಿನ ರೈತರಿಗೆ 400 ಕೋಟಿ ರೂಪಾಯಿ ಬೆಳೆ ಸಾಲ ನೀಡಿ ಆರ್ಥಿಕ ಸಬಲರಾಗಲು ಕಾರಣವಾಗುತ್ತಿರುವುದು ಸಂತಸವಾಗಿದೆ ಎಂದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿದರು.ತಾಲ್ಲೂಕಿನ ನಸಲಾಪೂ ಗ್ರಾಮದಲ್ಲಿ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 105ನೇ ನೂತನ ಶಾಖೆಯ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ರೈತರಿಗೆ ವಿವಿಧ ರೀತಿಯ ಸಾಲಗಳನ್ನು ಸಕಾಲದಲ್ಲಿ ಒದಗಿಸಿ ಅವರ ಅಭಿವೃದ್ದಿಗಾಗಿ ಸದಾಸಿದ್ದ ಎಂದರು.
ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕಗಳಲ್ಲಿ ಅತೀ ಹೆಚ್ಚು ರೈತರಿಗೆ ಆಧಾರವಾಗಿರುವ ಏಕೈಕ ಹಣಕಾಸು ಸಂಸ್ಥೇಯಾಗಿದೆ. ಹಾಗೂ ಪ್ರಾರಂಭದಲ್ಲಿಯೇ ನಸಲಾಪೂರದಲ್ಲಿ 105ನೇ ಶಾಖೆಯು ಇಂದು 7 ಕೋಟಿ ಠೇವಣಿಯನ್ನು ಹೊಂದುವ ಮೂಲಕ ದಾಖಲೆಯನ್ನು ಸ್ಠಷ್ಟಿಸಲು ಸ್ಥಳಿಯ ವಿವಿಧ ಸಂಘ ಸಂಸ್ಥೆಗಳು, ರೈತರು ನಾಗರೀಕರು ಮಹತ್ವದ ಪಾತ್ರ ವಹಿಸಿದ್ದಾರೆಂದು ಪ್ರಭಾರಧಾರಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಜಿ ಕಲಾವಂತ ಅವರು ಹೇಳಿದರು. ಓಂಕಾರ ಮಠದ ಶ್ರೀ ಶಿವಶಂಕರ ಮಹಾಸ್ವಾಮಿಗಳು, ಹಾಗೂ ಶ್ರೀಸಿದ್ದಸೇನ ಮುನಿ ಮಹಾರಾಜ ಅವರು ಶುಭಾರ್ಶಿವಚನದಲ್ಲಿ ತಿಳಿಸಿದರು *. ನಂತರ ಸಿ.ಬಿ.ಕೋರೆ ಸಕ್ಕರೆ ಕಾರ್ಖಾನೆ ನಿರ್ದೇಶಕ ಭರತೇಶ ಬನವಣೆ ಮಾತನಾಡಿ, ಸುಮಾರು 17 ವರ್ಷಗಳ ರೈತರ ಕನಸು ನನಸಾಗಿದೆ.
ನಂದಿಕುರಳಿ ನಸಲಾಪುರ, ಬಾವನಸೌಂದತ್ತಿ , ಕೆಂಪಟ್ಟಿ ಭಾಗದ ರೈತರು ಈ ಬ್ಯಾಂಕಿನ ಸದುಪಯೋಗ ಪಡೆದುಕೊಂಡು ಜಿಲ್ಲೆಯಲ್ಲಿ ಮಾದರಿ ಶಾಖೆ ಮಾಡಲು ಎಲ್ಲರೂ ಶ್ರಮಿಸಬೇಕು ಎಂದರು.* ನಂತರ ಸಿ.ಡಿ.ಒ ಶಂಕರ ಕರಿಬಸನ್ನವರ, ಗೋಮಟೇಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎ. ಮಗದುಮ್ಮ ಹಾಗೂ ಇತರರು ಮಾತನಾಡಿದರು.ಈ ಸಂದರ್ಭದಲ್ಲಿ ಹಿರಿಯ ಮುಖಂಡ ಪಾಸಗೌಡ ಪಾಟೀಲ, ರಾಜಗೌಡ ಪಾಟೀಲ,ಈರಗೌಡ ಪಾಟೀಲ, ರಾವಸಾಬ ಪಾಟೀಲ, ಮಹಾವೀರ ಪಾಟೀಲ, ಗ್ರಾ.ಪಂ. ಅಧ್ಯಕ್ಷ ಅರುಣ ನಾಯಿಕ,ಕೆ.ಸಿ. ಕಲ್ಮಠ, ಸುನೀಲ ಪಾಟೀಲ, ಶಿವಾನಂದ ಪಾಟೀಲ, ಬಿಡಿಸಿಸಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದ ಪಾಟೀಲ, ಬಾಹುಬಲಿ ಪಾಟೀಲ, ಎನ್.ಎಸ್. ಪಾಟೀಲ, ಪೃತ್ವಿರಾಜ ಜಾಧವ, ತುಕಾರಾಮ ಮಾಳಿ, ಶಿವಪ್ಪ ನಾಯಿಕ, ಮಹಾದೇವ ನಾಯಿಕ, ಬಾಲಚಂದ್ರ ದತ್ತವಾಡೆ, ಅಪ್ಪಾಸಾಬ ಮಾಳಿ, ಜಿನೇಶ್ವರ ಮಗದುಮ್ಮ, ಸತ್ತೆಪ್ಪ ಭಿಷ್ಟೆ, ಚೇತನ ಕಾಟೆ, ಸುಖದೇವ ಚಾವರೆ ಹಾಗೂ ವಿವಿದ ಪಿಕೆಪಿಎಸ್ ಸೊಸಾಯಿಟಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಇತರರು ಉಪಸ್ಥಿತರಿದ್ದರು.ಎಸ್ ಜಿ ಖೋಠಾರೆ ನಿರೂಪಿಸಿದರು. ಡಿಸಿಸಿ ಬ್ಯಾಂಕ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎನ್ ಕೆ ಕರೆನ್ನವರ ಸ್ವಾಗತಿಸಿ, ವಂದಿಸಿದರು.ಪೋಟೋ :ರಾಯಬಾಗ:ತಾಲೂಕಿನ ನಸಲಾಪೂರ ಗ್ರಾಮದಲ್ಲಿ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 105ನೇ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 