ರೈಲು ನಿಲ್ದಾಣದ ಹೊರಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ - ವಿಶ್ವನಾಥ ಶೀರಿ

ರೈಲು ನಿಲ್ದಾಣದ ಹೊರಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ - ವಿಶ್ವನಾಥ ಶೀರಿ Provide basic amenities outside the railway station - Vishwanath Shiri

ಲೋಕದರ್ಶನ ವರದಿ 

ರೈಲು ನಿಲ್ದಾಣದ ಹೊರಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ - ವಿಶ್ವನಾಥ ಶೀರಿ 

ಗದಗ 06 : ಕರ್ನಾಟಕದ ನೈಋತ್ಯ ರೈಲ್ವೆ (ಖಘಖ) ವಲಯದ ಅಡಿಯಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಒಟ್ಟು ? 91.33 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿ ಆಧುನೀಕರಿಸಿ ನಿರ್ಮಾಣವಾದ ಗದಗ ರೈಲು ನಿಲ್ದಾಣದ ಹೊರ ಭಾಗದಲ್ಲಿ ಅತ್ಯವಶ್ಯಕ ಮೂಲಭೂತ ಸೌಕರ್ಯಗಳಾದ ಮೂತ್ರಾಲಯ, ಶೌಚಾಲಯ ಹಾಗೂ ಸ್ನಾನಗೃಹ ಮತ್ತು ಎ.ಟಿ. ಎಮ್ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಅರಿವು ಫೌಂಡೇಶನ್ ಅಧ್ಯಕ್ಷರು ಹಾಗೂ 2024 ನೇ ಸಾಲಿನ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆ ಅಭ್ಯರ್ಥಿ ವಿಶ್ವನಾಥ ಶೀರಿ ಕೋರಿದ್ದಾರೆ. 

ಗದಗ ರೈಲು ನಿಲ್ದಾಣಕ್ಕೆ ದಿನನಿತ್ಯ 25  ಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿದ್ದ ಅದರಿಂದ ಸಾವಿರಾರು ಜನರು ಪ್ರಯಾಣಿಕರು ಆಗಮಿಸಿ ನಿರ್ಮಿಸುವುದು ಸಾಮಾನ್ಯ ಆದರೆ ಬೆಳಗ್ಗಿನ ಜಾವ ಹೆಚ್ಚು ರೈಲುಗಳು ಸಂಚರಿಸುತ್ತಿರುವುದರಿಂದ ಗದಗ ಜಂಕ್ಷನ್ ರೈಲು ನಿಲ್ದಾಣದ ಹೊರಭಾಗದಲ್ಲಿ ಖಾಲಿ ಇರುವ ರೈಲ್ವೆ ಇಲಾಖೆ ಸಂಬಂಧಿಸಿದ ಸ್ಥಳದಲ್ಲಿ ಪ್ರಯಾಣಿಕರು ಹಾಗೂ ಪ್ರಯಾಣಿಕರು  ಬಿಡಲು ಆಗಮಿಸಿ ಸಾರ್ವಜನಿಕ ಹಾಗೂ ಆಟೋ ಚಾಲಕರು ತಮ್ಮ ನಿತ್ಯ ಕರ್ಮಗಳಿಗೆ ಮೂಲಭೂತ ಸೌಕರ್ಯ ಇಲ್ಲದಿರುವುದು ಕಾರಣ ಬೈಯಲು ಜಾಗವನ್ನು ಆಶ್ರಯಿಸಿಬೇಕಾಗಿದೆ. ಜೊತೆಗೆ ರೈಲು ನಿಲ್ದಾಣದ ಒಳಭಾಗದಲ್ಲಿ ಇರುವ ಸೌಲಭ್ಯಗಳನ್ನು ಪಡೆಯಲು ಒಳಗಡೆ ಪ್ರವೇಶಿಸಲು ಪ್ಲಾಟ್ ಫಾರಂ ಟೀಕೆಟ ಕಡ್ಡಾಯವಾಗಿ ಇರುವುದರಿಂದ ಟಿಕೆಟ್ ಹಾಗೂ ಶೌಚಾಲಯದ ಪಾವತಿ ಮೊತ್ತ ಆರ್ಥಿಕ ಹೊರೆ ಆಗುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಈ ವ್ಯವಸ್ಥೆಯನ್ನು ನೋಡಿ ಸುಮ್ಮನೆ ಕುಳಿತ್ತಿರುವುದು ವಿಷಾದನೀಯ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ.  

ಈ ಕೊಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈಲ್ವೆ ಇಲಾಖೆ, ಜಿಲ್ಲಾಡಳಿತ, ಸ್ಥಳೀಯ ಆಡಳಿತವಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ರೈಲು ನಿಲ್ದಾಣದ ಹೊರಭಾಗದ ಪರಿಸರವನ್ನು ಸ್ವಚ್ಛವಾಗಿ ಇಡಲು ಪಣತೋಡಬೇಕಾಗಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.