ಸಮಾಜದ ಅಂಕುಡೊಂಕು ತಿದ್ದುವ ಕಂಪ್ಲಿ ಪತ್ರಕರ್ತರಿಗೆ ನಿವೇಶನ ಕಲ್ಪಿಸಿ : ಪಿ.ವಿರೇಶ

 ಸಮಾಜದ ಅಂಕುಡೊಂಕು ತಿದ್ದುವ ಕಂಪ್ಲಿ ಪತ್ರಕರ್ತರಿಗೆ ನಿವೇಶನ ಕಲ್ಪಿಸಿ : ಪಿ.ವಿರೇಶ Provide a place for journalists who are committed to correcting the wrongs of society: P. Viresha

ಲೋಕದರ್ಶನ ವರದಿ 

ಸಮಾಜದ ಅಂಕುಡೊಂಕು ತಿದ್ದುವ ಕಂಪ್ಲಿ ಪತ್ರಕರ್ತರಿಗೆ ನಿವೇಶನ ಕಲ್ಪಿಸಿ : ಪಿ.ವಿರೇಶ 

ಕಂಪ್ಲಿ  02:  ಪಟ್ಟಣದ ಅತಿಥಿ ಗೃಹದಲ್ಲಿ ಕಂಪ್ಲಿ ತಾಲೂಕು ಘಟಕದ ಪತ್ರಕರ್ತರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮಿತಿಗೆ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಸಂಯುಕ್ತ ಕರ್ನಾಟಕ ತಾಲೂಕು ವರದಿಗಾರ ದ್ಯಾಮನಗೌಡ ಪಾಟೀಲ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಗಿ ಮಂಜುನಾಥ, ಪತ್ರಕರ್ತರ ಅಮರ್‌ನಾಥ ಶಾಸ್ತ್ರೀ ಇವರಿಗೆ ಭಾನುವಾರ ಸನ್ಮಾನಿಸಿ ಗೌರವಿಸಿದರು. ನಂತರ ತಾಲೂಕು ಅಧ್ಯಕ್ಷ ಪಿ.ವಿರೇಶ ಮಾತನಾಡಿ, ಕಂಪ್ಲಿ ತಾಲೂಕಿನಿಂದ ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ದ್ಯಾಮನಗೌಡ ಪಾಟೀಲ್ ಇವರು ಅವಿರೋಧವಾಗಿ ಆಯ್ಕೆಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಬಂಗಿ ಮಂಜುನಾಥ ಪಡೆದಿರುವುದು ಖುಷಿ ತಂದಿದೆ. ಹಾಗೂ ಪತ್ರಕರ್ತರ ಅಮರ್‌ನಾಥಶಾಸ್ತ್ರೀ ಬೆಂಗಳೂರಿನ ಮಾಧ್ಯಮ ವಲಯದಲ್ಲಿ ಕೆಲಸ ಮಾಡಲು ತೆರಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನಮ್ಮ ಪತ್ರಿಕಾ ಮಾಧ್ಯಮದವರು ಎಲ್ಲಾ ರಂಗದಲ್ಲಿ ಬೆಳೆಯಬೇಕೆಂಬುದು ನಮ್ಮ ಉದ್ದೇಶವಾಗಿದೆ. ಹಲವು ವರ್ಷಗಳಿಂದ ಮಳೆ, ಬಿಸಿಲು, ಚಳಿ ಎನ್ನದೇ, ಸಮಾಜದ ಅಂಕುಡೊಂಕು ತಿದ್ದುವ ಕೆಲಸವನ್ನು ಪತ್ರಕರ್ತರು ಮಾಡುತ್ತಾ ಬಂದಿದ್ದಾರೆ. ಪತ್ರಕರ್ತರಿಗೆ ಗೌರವಧನ ಬಿಟ್ಟರೆ, ಯಾವುದೇ ವೇತನ ಇಲ್ಲದೇ, ಸಮಾಜ ಸೇವೆ ಮಾಡುತ್ತಿದ್ದಾರೆ. ಆದ್ದರಿಂದ ಪತ್ರಕರ್ತರಿಗೆ ನಿವೇಶನ ಜೊತೆಗೆ ಸೂರು ಒದಗಿಸಬೇಕೆಂಬುದು ಬಹುದಿನದ ಹಕ್ಕೋತ್ತಾಯವಾಗಿದೆ. ಮಾನ್ಯ ಶಾಸಕ ಗಣೇಶ, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಗಮನಕ್ಕೆ ಹಲವು ಬಾರಿ ಗಮನಕ್ಕೆ ತಂದಿದ್ದು, ನಿವೇಶನ ಒದಗಿಸಿಕೊಡುವ ಭರವಸೆಗಳು ಆಗುತ್ತಿವೆ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಪತ್ರಕರ್ತರ ಸಂಕಷ್ಟವನ್ನು ಆಲಿಸಿ, ನಿವೇಶನ ಒದಗಿಸಬೇಕು. ಮತ್ತು ಕಂಪ್ಲಿಯಲ್ಲಿ ಪತ್ರಿಕಾ ಭವನ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಎಚ್‌.ಎಂ.ಪಂಡಿತಾರಾಧ್ಯ, ಕರಿ ವಿರುಪಾಕ್ಷಿ, ಜಿ.ಚಂದ್ರಶೇಖರಗೌಡ, ಎಸ್‌.ಯಮನಪ್ಪ, ಭಾವೈಕ್ಯ ವೆಂಕಟೇಶ, ಚಂದ್ರಶೇಖರ, ರಸೂಲ್ ಇದ್ದರು. ತದನಂತರ ಬಳ್ಳಾರಿಯಿಂದ ಬಂದಂತಹ ಹಿರಿಯ ವರದಿಗಾರರಾದ ಹೆಚ್‌.ಬವಸರಾಜ, ಮಲ್ಲಿಕಾರ್ಜನ ಚಿಲ್ಕರಾಗಿ, ರಮೇಶ ಇವರು ದ್ಯಾಮನಗೌಡ ಪಾಟೀಲ್, ಬಂಗಿ ಮಂಜುನಾಥ, ಅಮರನಾಥ್ ಶಾಸ್ತ್ರೀಗೆ ಸನ್ಮಾನಿಸಿ ಗೌರವಿಸಿದರು.  

ನ.003: ಕಂಪ್ಲಿಯಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಸಂಯುಕ್ತ ಕರ್ನಾಟಕ ತಾಲೂಕು ವರದಿಗಾರ ದ್ಯಾಮನಗೌಡ ಪಾಟೀಲ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಗಿ ಮಂಜುನಾಥ, ಪತ್ರಕರ್ತರ ಅಮರ್‌ನಾಥ ಶಾಸ್ತ್ರೀ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.