ರೈತರಿಗೆ ಸಕಾಲಕ್ಕೆ ಗೊಬ್ಬರ ಒದಗಿಸಿದೆ : ಚಿಲವಾಡಗಿ
Provide Fertilizer to farmers on time: Chilawadagi
ಕೊಪ್ಪಳ 16: ಸದಾ ರೈತರ ಹಿತರಕ್ಷಣೆಗೆ ಶ್ರಮಿಸುವ ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈ ಭಾರಿ ಕಷ್ಟದ ನಡುವೆ ರೈತರಿಗೆ ಸಕಾಲಕ್ಕೆ ಗೊಬ್ಬರ ಒದಗಿಸಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಬಸವರಾಜ ಚಿಲವಾಡಗಿ ಹೇಳಿದರು.
ಅವರು ಸೋಮವಾರ ದಂದು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಮದಲ್ಲಿ ಜರುಗಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 64ನೇ ವಾರ್ಷಿಕ ಮಹಾಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕೃಷಿಸಾಲ ವಿತರಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ಧೇವೆ ರೈತರಿಗೆ ಹೆಚ್ಚಿನ ಸಾಲ ನೀಡಿ ವಸುಲಾತಿಯಲ್ಲಿಯೂ ಸಹ ಎಲ್ಲ ರೈತರ ಮರುಪಾವತಿಯಿಂದ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದ್ದೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ಧಾರ : ಸಂಘದ ಲಾಭಾವಂಷದಲ್ಲಿ ಸಂಘದ ಮುಂದೆ ಮಳಿಗೆ ಕಟ್ಟಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಅಮರೇಶ ಉಪಲಾಪೂರ ಮಾತನಾಡಿ ರೈತರ ಹಾಗೂ ಗ್ರಾಹಕರ ಸಹಕಾರದಿಂದ ನಮ್ಮ ಸಂಘ ವಸುಲಾತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಗ್ರಾಹಕರ ಸಹಕಾರ ನಮ್ಮ ಸಂಘ ಹೆಚ್ಚು ಲಾಭಾಂಷ ಬರಲು ಕಾರಣ ಎಂದರು. ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುದ್ರಿಮುತಿ ವಾರ್ಷಿಕ ವರದಿ ವಾಚನಮಾಡಿ ಎಲ್ಲರನ್ನು ಸ್ವಾಗತಿಸಿದರು, ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಾಧ್ಯಕ್ಷೆ ಅಮೃತಾ ಚಿತ್ರಗಾರ ,ನಿರ್ದೇಶಕರಾದ ಮಹಾದೇವಯ್ಯ ಹಿರೇಮಠ, ಕೆ. ಮಲ್ಲಿಕಾರ್ಜುನ ,ರವೀಂದ್ರನಾಥ ಕೋಲ್ಕಾರ , ಮಲ್ಲಮ್ಮ ಕಾರಬ್ಯಾಳಿ , ಮೋನೇಶ ಕಳ್ಳಿಮನಿ ,ಈರಣ್ಣ ವಾಲ್ಮೀಕಿ , ದಂಬುನಾಥ ಸೊನ್ರೋ, ಮಂಜುನಾಥ ಸಿರಿಗೇರಿ, ಹಿರಿಯ ಸಹಕಾರಿ ಪ್ರಸನ್ನ ಗಡಾದ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 