ಲೋಕದರ್ಶನ ವರದಿ
ಬೆಳಗಾವಿ, 20: ಅನ್ಯ ಸಮಾಜದ ಬಗ್ಗೆ ಆಸಕ್ತಿ ಇಲ್ಲವೆಂದು ಜಾತಿ ದ್ವೇಷ ಸಾಮರಸ್ಯ ಕದಡುವ ಮಾತುಗಳನ್ನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಿ. ಸಿ. ಮಾಧುಸ್ವಾಮಿಯನ್ನು ಸ್ಥಾನದಿಂದ ವಜಾಗೊಳಿಸಬೇಕೆಂದು ಹಾಲುಮತ ಮಹಾಸಭಾ ಪದಾಧಿಕಾರಿಗಳು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ನಲ್ಲಿ ಕನಕದಾಸ ಸರ್ಕಲ್ನ ಗೊಂದಲದಿಂದ ಹಾಲುಮತ ಸಮಾಜದ ಪೂಜ್ಯರ, ಸಮಾಜದ ಹಿರಿಯರ, ಯುವಕರ ಶಾಂತಿ ಸಭೆಯಲ್ಲಿ ಗೌರವ ಸೂಚಿಸದೆ ಕರ್ತವ್ಯ ಮರೆತಿದ್ದಾರೆ. ದೂರವಾಣಿ ಮೂಲಕ ಸ್ಪಷ್ಟೀಕರಣ ಕೇಳಿದಾಗ ನಾನು ಒಂದು ಸಮಾಜದ ನಾಯಕನಾಗಿದ್ದು ಬೆರೆ ಸಮಾಜದ ಬಗ್ಗೆ ತನಗೆ ಆಸಕ್ತಿಯಿಲ್ಲ ಎಂಬಂತೆ ಉದ್ಧಟತನದಿಂದ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ಎಲ್ಲ ಸಮಾಜದ ಪ್ರಜೆಗಳಿಂದ ಆಯ್ಕೆಯಾಗಿರುವ ಸಚಿವ ಜಿ. ಸಿ. ಮಾಧುಸ್ವಾಮಿ ರಾಜ್ಯಪಾಲರು ಬೋಧಿಸಿದ ಸಮಾನತೆಯಿಂದ ಆಡಳಿತ ನಡೆಸುವುದಾಗಿ ಪ್ರತಿಜ್ಞಾವಿಧಿಯನ್ನು ಸ್ವಿಕರಿಸಿದ್ದಾರೆ. ಎಲ್ಲರನ್ನು ಸಮಾನವಾಗಿ ಕಾನದ ಇವರು ಕೂಡಲೆ ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಇವರನ್ನು ವಜಾಗೊಳಿಸಬೇಕು ತಪ್ಪಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದರು.
ಈ ಪ್ರತಿಭಟನೆಯಲ್ಲಿ ಶಂಕರ ಹೆಗಡೆ, ಸೋಮಲಿಂಗ್ ಮಳಮಳಸಿ, ವಿನಾಯಕ ಕಟ್ಟಿಮನಿ, ಲಕ್ಷ್ಮಣ ಲವಟೆ, ಕೃಷ್ಣಾ ಕುರಬರ, ಮಂಜುನಾಥ ಬೆಣ್ಣಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.