ನ್ಯಾಯಕ್ಕಾಗಿ ಆಸ್ತಿ ಕಳೆದುಕೊಂಡ ನಿರಾಶ್ರಿತರ ಪ್ರತಿಭಟನೆ: ಮುಖಂಡರ ಬೆಂಬಲ

ನ್ಯಾಯಕ್ಕಾಗಿ ಆಸ್ತಿ ಕಳೆದುಕೊಂಡ ನಿರಾಶ್ರಿತರ ಪ್ರತಿಭಟನೆ: ಮುಖಂಡರ ಬೆಂಬಲ Protest of refugees who lost property for justice: Leaders support

ನ್ಯಾಯಕ್ಕಾಗಿ ಆಸ್ತಿ ಕಳೆದುಕೊಂಡ ನಿರಾಶ್ರಿತರ ಪ್ರತಿಭಟನೆ: ಮುಖಂಡರ ಬೆಂಬಲ 

ಸಿಂದಗಿ 16: ಪಟ್ಟಣದ ಸರ್ವೆ ನಂ. 842/2ರಲ್ಲಿ ಆಸ್ತಿ ಕಳೆದುಕೊಂಡ ನಿರಾಶ್ರಿತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪುರಸಭೆ, ಸರ್ಕಾರದ ವಿರುದ್ಧ ನ್ಯಾಯಕ್ಕಾಗಿ ಕಳೆದ 7ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಸಿಂದಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಾ ಸೇರಿದಂತೆ ಯುವ ಮೋರ್ಚಾ, ಮಹಿಳಾ ಮೋರ್ಚಾ ಕಾರ್ಯಕರ್ತರು ಸೋಮವಾರ ಬೇಟಿ ನೀಡಿ ಪ್ರತಿಭಟನೆಗೆ ಬೆಂಬಲ ನೀಡಿದರು.  

ಪ್ರತಿಭಟನೆಗೆ ಬೆಂಬಲಿಸಿದ ಸಿಂದಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಾ ಮಾತನಾಡಿ, ಪಟ್ಟಣದ ಸರ್ವೆ ನಂ. 842/2ರಲ್ಲಿ ಆಸ್ತಿ ಕಳೆದುಕೊಂಡ ನಿರಾಶ್ರೀತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪುರಸಭೆ, ಸರ್ಕಾರದ ವಿರುದ್ಧ ಪ್ರತಿಭಟಿಸಿ ನ್ಯಾಯಕ್ಕಾಗಿ ಕಳೆದ 7 ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ. ಬಡವರ ಕೂಗು ಪುರಸಭೆ ಆಢಳಿತಕ್ಕೆ ಮತ್ತು  ಸರ್ಕಾರಕ್ಕೆ ಕೆಳಿಸದೇ ಇರುವುದು ಖಂಡನಿಯ  ಎಂದು ಖಂಡಿಸಿದರು. 

ಪುರಸಭೆ ಆಢಳಿತದ ನಿರ್ಲಕ್ಷದಿಂದ ಸ.ನಂ. 842/2ರ 2 ಎಕರೆ 10 ಗುಂಟೆ ಪ್ರದೇಶದಲ್ಲಿರುವ 84 ಕುಟುಂಭಗಳು ಬಿದಿ ಪಾಲಾಗಿವೆ. ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ 84 ಜನ ಫಲಾನುಭವಿಗಳಿಗೆ ಹಕ್ಕು ಪತ್ರ ನಿಡಿದ್ದಾರೆ. ಮತ್ತೆ ಅವರೆ ಆಸ್ತಿ ತೆರವುಗೊಳಿಸಿ ಅವರನ್ನು ಬೀದಿ ಪಾಲು ಮಾಡಿದ್ದಾರೆ. ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಬೀದಿಗೆ ಬಿದ್ದ ಕುಟುಂಭಕ್ಕೆ ಆಶ್ರಯ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಹೆಳಿದರು. 

ಆಶ್ರಯ ಯೋಜನೆಯಲ್ಲಿ ಹಕ್ಕು ಪತ್ರ ಪಡೆಯುವವರೇ ಬಡವರು. ಅವರನ್ನು ಬೀದಿ ಪಾಲು ಮಾಡದೇ ಅವರಿಗೆ ಆಶ್ರಯ ನಿಡಿ. ಈ 84 ಕುಟುಂಭಗಳಿಗೆ ಬೆನ್ನೆಲು ಬಾಗಿ ಹೋರಾಟದಲ್ಲಿ ಭಾಗಿಯಾಗುತ್ತೇವೆ. ಜನಪ್ರತಿನಿಧಿಗಳಾದವರು ಬಡವರ ಕಣ್ಣಿರು ಒರೆಸಬೇಕು. ಆದರೇ ಕಾಂಗ್ರೆಸ್ ಸರ್ಕಾರ ಬಡವರ ಪಕ್ಷವಾಗಿಲ್ಲ. ಬಡವರ ವಿರೋಧಿ ಪಕ್ಷವಾಗಿದೆ. ನಿಮ್ಮಲ್ಲಿ ಬಡವರ ಕಳಕಳಿ ಇತ್ತು ಎಂದರೇ 84 ಫಲಾನುಭವಿಗಳಿಗೆ ಶಿಘ್ರದಲ್ಲಿ ಆಶ್ರಯ ನೀಡಬೇಕು. ಮತ್ತೆ ಕಾನೂನು ಹೋರಾಟ ಮಾಡಿ ಫಲಾನುಭವಿಗಳಿಗೆ ಪುನಃ 842/2ರಲ್ಲಿ ಆಸ್ತಿ ನೀಡಬೇಕು ಎಂದು ಪುರಸಭೆಗೆ ಮತ್ತು ಸರ್ಕಾರಕ್ಕೆ ಒತ್ತಾಯಿಸಿದರು. ಬಡವರಿಗೆ ನ್ಯಾಯ ದೊರಕುವವರೆಗೂ ಹೋರಾಟ ನಿಲ್ಲೋದಿಲ್ಲ ಎಂದು ಎಚ್ಚರಿಕೆ ನೀಡಿದರು. 

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ನೀಲಮ್ಮ ಯಡ್ರಾಮಿ, ಮಲ್ಲಣ್ಣ ಮನಗೂಳಿ, ಪ್ರಶಾಂತ ಪಾಟೀಲ ಕನ್ನೊಳ್ಳಿ, ಪರಶುರಾಮ ಗೂಳ್ಳೂರ, ಸಂಗನಗೌಡ ಬಿರಾದಾರ, ಲಕ್ಕಮ್ಮ ಬಿರಾದಾರ, ಜಯಶ್ರೀ ನಾಟಿಕಾರ, ಶೋಭಾ ಹಂಚಿನಾಳ, ಜಯಶ್ರೀ ಯಾಳವಾರ, ಶಿವು ಪವಾರ, ಬಸುಗೌಡ ಪಾಟೀಲ ಯಂಕಂಚಿ, ಕಾಜು ಬಂಕಲಗಿ, ಸಂಜೀವ ನಂದಿಕೋಲ, ಸಂಗು ರತ್ನಾಕರ, ಸೋಮನಾಥ ಸೋಂಪೂರ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.