ಸತೀಶ್ ಜಾರಕಿಹೊಳಿ ಬೆಂಬಲಿಸಿ ಘಟಪ್ರಭಾದಲ್ಲಿ ಪ್ರತಿಭಟನೆ
Protest in Ghataprabha in support of Satish Jarkiholi.
ಸತೀಶ್ ಜಾರಕಿಹೊಳಿ ಬೆಂಬಲಿಸಿ ಘಟಪ್ರಭಾದಲ್ಲಿ ಪ್ರತಿಭಟನೆ
ಘಟಪ್ರಭಾ 12: ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಸ್ಥೆಗಳು ಹಾಗೂ ನಿವಾಸದ ಮೇಲೆ ಇ.ಡಿ. ಮತ್ತು ಐಟಿ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯನ್ನು ಖಂಡಿಸಿ ಯುವ ಕಾಂಗ್ರೆಸ್, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಘಟಪ್ರಭಾದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಮೃತ್ಯುಂಜಯ ವೃತ್ತದಲ್ಲಿ ಪ್ರತಿಭಟನಾಕಾರರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಬಳಿಕ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ವಿವೇಕ್ ಜತ್ತಿ, ಕಾಡೇಶ ತಳಗೇರಿ, ಆನಂದ ತಾಯವ್ವಗೋಳ, ಸುಧೀರ್ ಜೋಡಟ್ಟಿ, ಡಾ. ಕೆಂಪಣ್ಣ ಚೌಕಾಶಿ, ಶಿವಲಿಂಗ ಕೋಟಬಾಗಿ, ಅರ್ಜುನ ಗಂಡವಗೋಳ, ಶ್ರೀಕಾಂತ ಮಹಾಜನ್, ಪುಟ್ಟು ಖಾನಾಪುರ ಸೇರಿದಂತೆ ಹಲವರು ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ರೆಹಮಾನ್ ಮೊಕಾಶಿ, ರವಿ ನಾವಿ, ಶೆಟ್ಟೆಪ್ಪ ಗಾಡಿವಡ್ಡರ, ರಾಹುಲ್ ಬಡೇಸಗೋಳ, ಶಿವಾನಂದ ಹತ್ತರವಾಟ, ಪ್ರವೀಣ ತುಕ್ಕಾನಟ್ಟಿ, ಶಂಕರ್ ಕಂಬಾರ, ಅಪ್ಪಾಸಾಬ ಮುಲ್ಲಾ, ರಾಜು ವಗ್ಗಣ್ಣವರ, ಸುರೇಶ್ ಚಿಗಡೊಳ್ಳಿ, ಶಶಿಧರ್ ಚೌಕಾಶಿ, ಕೃಷ್ಣಾ ಗಂಡವ್ವಗೋಳ, ಕಲ್ಲಪ್ಪ ಗಾಡಿವಡ್ಡರ, ಗಜಪ್ಪ ಗಾಡಿವಡ್ಡರ, ಮಲ್ಲೇಶಿ ಗಾಡಿವಡ್ಡರ, ಕಲ್ಲೋಳಪ್ಪ ಗಾಡಿವಡ್ಡರ, ಮಾರುತಿ ಗಾಡಿವಡ್ಡರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 