ಒಳ ಮೀಸಲಾತಿ ಜಾರಿಗಾಗಿ ಪ್ರತಿಭಟನೆ

ಯರಗಟ್ಟಿ 16: ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್‌ ಮಹತ್ತರ ತೀರ​‍್ು ನೀಡಿದ್ದರೂ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದನ್ನು ವಿರೋಧಿಸಿ ತಾಲೂಕಾ ದಲಿತ ಸಂಘಟನೆಗಳ ವತಿಯಿಂದ ಪಟ್ಟಣದ ಸಂಗೋಳ್ಳಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 

ಈ ವೇಳೆ ಮಾತನಾಡಿದ ದಲಿತ ಸಂಘದ ಮುಖಂಡ ಭಾಸ್ಕರ ಹಿರಮೇತ್ರಿ ಪರಿಶಿಷ್ಟ ಜಾತಿಗಳಲ್ಲಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತಿ ಹೆಚ್ಚು ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಸದುದ್ದೇಶದಿಂದ ಆಯಾ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಸೌಲಭ್ಯ ತಲುಪಲು ಒಳಮೀಸಲಾತಿ ನೀಡುವ ಸಾಂವಿಧಾನಿಕ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೂರ್ಣ ಪೀಠವು ಆಗಸ್ಟನಲ್ಲಿ ತಿರ​‍್ು ನೀಡಿದೆ ರಾಜ್ಯ ಸರಕಾರ ಮೀಸಲಾತಿ ನೀಡಲು ಮೀನಮೇಷ ಮಾಡುತ್ತಿದೆ ಎಂದು ಸರಕಾರ ವಿರುದ್ಧ ಹರಿಹಾಯ್ದರು. 

ಈ ವೇಳೆ ಯಲ್ಲಪ್ಪ ಪಟ್ಟಪ್ಪನವರ, ಸಂತೋಷ ಚನ್ನಮೇತ್ರಿ, ಸುರೇಶ ತಮ್ಮನ್ನವರ, ಹಣಮಂತ ನರೇರ, ಬಾಬು ಚನ್ನಮೇತ್ರಿ, ಪ್ರಕಾಶ ತಳವಾರ, ಯಶವಂತ ನೀಲಪ್ಪನ್ನವರ, ಮಾಂತೇಶ ಚನ್ನಮೇತ್ರಿ, ಸುನೀಲ ಚನ್ನಮೇತ್ರಿ, ಲಕ್ಕಪ್ಪ ಜಗದಾರ, ಹಣಮಂತ ಕಳಸಪ್ಪನವರ, ಕರೆಪ್ಪ ಕೊಡ್ಲಿವಾಡ ಸೇರಿದಂತೆ ಅನೇಕರು ಇದ್ದರು.