ಬಾಕಿ ಇರುವ ನರೇಗ ಕೂಲಿ ಹಣವನ್ನು ಬಿಡುಗಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ

ಬಾಕಿ ಇರುವ ನರೇಗ ಕೂಲಿ ಹಣವನ್ನು ಬಿಡುಗಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ Protest demanding release of pending NAREGA wage payments

ಧಾರವಾಡ 27: ಅಖಿಲ ಭಾರತ ರೈತ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತಿ ಎದುರಿಗೆ ಪ್ರತಿಭಟನೆ ಮಾಡಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತುದಲದವರಿಗೆ ಮನವಿ ಸಲ್ಲಿಸಲಾಯಿತು.  

ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಗ್ರಾಮೀಣ ಭಾಗದ ಜನತೆಗೆ ಆರ್ಥಿಕ ನೆರವು ನೀಡುತ್ತಿರುವ ನರೇಗಾ ಯೋಜನೆಯು ಇನ್ನಷ್ಟು ಬಲಿಷ್ಠ ಗೊಳಿಸುವ ಅವಶ್ಯಕತೆ ಇದೆ. ಇಂದಿನ ಗ್ರಾಮೀಣ ಬದುಕು ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದೆ. ಎಲ್ಲಾ ಅಗತ್ಯ ಕೃಷಿ ಒಳ ಸುರಿವುಗಳ ಬೆಲೆ ಗಗನಕ್ಕೇರಿ ಕೃಷಿ ಕ್ಷೇತ್ರವು ಗಂಭೀರ ಪರಿಸ್ಥಿತಿಯಲ್ಲಿದೆ. ಸಾಲದಕ್ಕೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇನ್ನೂ ವಾತಾವರಣದ ಏರುಪೇರಿನಿಂದಾಗಿ ಇತ್ತೀಚೆಗೆ ಬೇಸಿಗೆಯ ಸಂದರ್ಭದಲ್ಲೂ ಮಳೆಯಾಗುತ್ತಿರುವುದು ಪ್ರಕೃತಿಯ ವೈಪರಿತ್ಯಕ್ಕೆ ಸಾಕ್ಷಿಯಾಗಿದೆ. ಇದರಿಂದಲೂ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ನರೇಗಾ ಕೂಲಿ ಹಣ ಬಿಡುಗಡೆಯಾಗದೆ ನರೇಗಾ ಕೂಲಿ ಕಾರ್ಮಿಕರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು ಕೂಡಲೇ ಬಾಕಿ ಇರುವ ಕೂಲಿ ಹಣವನ್ನು ಬಿಡುಗಡೆ ಮಾಡಬೇಕೆಂದು ಎಐಕೆಕೆಎಂಎಸ್ ಧಾರವಾಡ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ. ಅಷ್ಟೇ ಅಲ್ಲದೆ ಬರುವ ಮುಂದಿನ ತಿಂಗಳಲ್ಲಿ ನರೇಗಾ ಯೋಜನೆ ಅಡಿಯಲ್ಲಿಯೇ ಕೆಲಸವನ್ನು ನೀಡಬೇಕು. ವಿಬಿ ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಕೂಲಿಯನ್ನು ಕಸಿದುಕೊಳ್ಳುವ ಯೋಜನೆಯಾಗಿದೆ. ಗ್ರಾಮೀಣ ಜನತೆಗೆ ಕೆಲಸನ್ನು ಕೇಳುವ ಹಕ್ಕನ್ನು ಸಹ ಇದು ಕಸಿದುಕೊಳ್ಳುತ್ತದೆ. ಆದ್ದರಿಂದ ಗ್ರಾಮೀಣ ಜನತೆಯ ಬದುಕು ಅತಂತ್ರವಾಗಿದೆ ಮತ್ತು ಕೃಷಿ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ.ದೇಶದಾದ್ಯಂತ ನರೇಗಾ ಕೂಲಿ ಕಾರ್ಮಿಕರ ಹೋರಾಟವು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಕೇಂದ್ರ ಸರ್ಕಾರವು ಯೋಜನೆಯನ್ನು ಕೈಬಿಟ್ಟು ನರೇಗಾ ಯೋಜನೆಯನ್ನೇ ಮರು ಸ್ಥಾಪಿಸಬೇಕೆಂದು ಎಐಕೆಕೆಎಂಎಸ್ ಧಾರವಾಡ ಜಿಲ್ಲಾ ಸಮಿತಿಯು ಆಗ್ರಹಪೂರ್ವಕವಾಗಿ ಮನವಿ ಮಾಡುತ್ತದೆ. 

ಬೇಡಿಕೆಗಳು 1. ಬಾಕಿ ಇರುವ ನರೇಗಾ ಕೂಲಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.2. ನರೇಗಾ ಯೋಜನೆಯೇ ಮರುಸ್ಥಾಪಿಸಬೇಕು.3. ಗ್ರಾಮೀಣ ಜನತೆಯ ಕೆಲಸವನ್ನು ಕಸಿಯುವ ವಿವಿಜಿ ರಾಂ ಜಿ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು.4. ನರೇಗಾ ಕೂಲಿ ಹಣವನ್ನು 600 ರೂಪಾಯಿಗೆ ಹೆಚ್ಚಿಸಬೇಕು ಮತ್ತು ಎರಡು ನೂರು ದಿನ ಕೆಲಸ ನೀಡಬೇಕು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ದೀಪಾ ಧಾರವಾಡ, ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಸಮಿತಿಯ ಸದಸ್ಯರಾದ ದಿವಾನ್ ಸಾಬ್ ತುಮಕಿ, ಗೌರಮ್ಮ, ಶಿವಯ್ಯ, ಮಹಮದ್ ನದಾಫ್‌ , ರೇಣುಕಾ ಮುಂತಾದವರು ಇದ್ದರು.ವಂದನೆಗಳೊಂದಿಗೆ,ಸುದ್ದಿ ಇವರಿಂದಗೋವಿಂದ ಕೃಷ್ಣಪ್ಪನವರಜಿಲ್ಲಾ ಸಮಿತಿ ಪರವಾಗಿ