ಮದ್ಯದ ಅಂಗಡಿ ಬಂದ್ಗೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ 03: ವಾರ್ಡ ನಂ 13 ರಲ್ಲಿರುವ ಶ್ರೀನಗರ ವೃತ್ತದಲ್ಲಿ ಹೊಸದಾಗಿ ಇಂದು ಮೆ. ದುರ್ಗ ಪೆಗ್ಗ್ ಬಾರ್ ಮತ್ತು ರೆಸ್ಟೊರೆಂಟ್ ಆರಂಭಗೊಂಡಿದ್ದು ಸ್ಥಳೀಯರ ಹಾಗೂ ಅಕ್ಕಪಕ್ಕದ ಮನೆಯವರ ಒಪ್ಪಿಗೆ ಇಲ್ಲದೆ ನಿನ್ನೆಯವರೆಗೂ ಅಮೃತಸಾಗರ ಹೋಟೆಲ ನಾಮಫಲಕವಿದ್ದು ಇಂದು ಮುಂಜಾನೆ ಏಕಾಏಕಿ ಮೆ|| ದುರ್ಗ ಪೆಗ್ಗ್ ಬಾರ್ ಮತ್ತು ರೆಸ್ಟೊರೆಂಟ್ ನಾಮಫಲಕವನ್ನು ಹಾಕಿ ಮದ್ಯದ ಅಂಗಡಿಯನ್ನು ಆರಂಭಿಸಿದ್ದಾರೆ. ಈ ಅಂಗಡಿಗೆ ವಿರೋಧಿಸಿ ದಿ.29ರಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಸಹಾಯಕ ಆಯುಕ್ತರು ಅಬಕಾರಿ ಇಲಾಖೆ ಮದ್ಯದ ಅಂಗಡಿಗೆ ಪರವಾಣಿಗೆಯನ್ನು ಕೊಡಬಾರದೆಂದು ಮನವಿ ಸಲ್ಲಿಸಲಾಗಿದೆ. ಆದರೂ ಸಹ ಇಂದು ಮದ್ಯ ,ಮಾರಾಟದ ಅಂಗಡಿಯನ್ನು ಆರಂಭಮಾಡಿದ್ದಾರೆ. ಆದ್ದರಿಂದ ಇವತ್ತು ಸ್ಥಳೀಯ ನಾಗರಿಕರಿಂದ ಅಂಗಡಿಯನ್ನು ಬಂದ್ ಮಾಡುವಂತೆ ಅಂಗಡಿಯ ಮುಂದೆ ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು.

ಜಯ ಕರ್ನಾಟಕ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ  ಮುತ್ತು ಬೆಳ್ಳಕ್ಕಿ, ಹುಧಾಮಸ ಮಾಜಿ ಪಾಲಿಕೆ ಸದಸ್ಯ್ಯರಾದ ಬಲರಾಮ ಕುಸುಗಲ್ಲ ಕಮಲುಪುಲವಾಲೆ ಸಂತೋಜಿ ಅವ್ವನವರ ಕೃಷ್ಣಾ ಹುಬ್ಬಳ್ಳಿ ರಾಧಾ ಪಾಟೀಲ ಇನ್ನೂ ಅನೇಕ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.