ಮಣೂರ ಗ್ರಾಪಂ ನಲ್ಲಿ ನಡೆದ ಮನೆ ಹಂಚಿಕೆ ಬೋಗಸ್ ಕಾಮಗಾರಿ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
Protest demanding investigation into bogus house allotment work in Manoora Gram Panchayat
ದೇವರಹಿಪ್ಪರಗಿ 01: ತಾಲೂಕಿನ ಮಣೂರ ಗ್ರಾಪಂ ನಲ್ಲಿ ನಡೆದ ಮನೆ ಹಂಚಿಕೆ ಬೋಗಸ್ ಕಾಮಗಾರಿ ತನಿಖೆಗೆ ಆಗ್ರಹಿಸಿ ಅಂಬೇಡ್ಕರ ಸ್ವಾಭಿಮಾನಿ ಸೇನೆ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಪಂ ವರೆಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಘಟಕದಿಂದ ಪ್ರತಿಭಟನೆ ಮೂಲಕ ಘೋಷಣೆಗಳನ್ನು ಕೂಗಿ ಮಣೂರ ಗ್ರಾಮ ಪಂಚಾಯತಿಯಲ್ಲಿ ನಡೆದ 2022-23 ಹಾಗೂ 2024-25 ನೇ ಸಾಲಿನ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾದ ಮನೆಗಳ ಆಯ್ಕೆಯಲ್ಲಿ ನೋಡಲು ಅಧಿಕಾರಿಯದ ತಾರಾನಾಥ ರಾಠೋಡ ಹಾಗೂ ಅಭಿವೃದ್ಧಿ ಅಧಿಕಾರಿಗಳಾದ ಅಕ್ಕಮಹಾದೇವಿ ಅವರು ಒಂದೇ ಜಾತಿಗೆ ಸೇರಿದವರ ಹತ್ತಿರ ಹಣ ತೆಗೆದುಕೊಂಡು ಮಂಜೂರು ಮಾಡಿರುತ್ತಾರೆ ಕೂಡಲೇ ಆಯ್ಕೆ ಪಟ್ಟಿ ರದ್ದುಪಡಿಸಿ ಗ್ರಾಮಸಭೆ ಕರೆದು ಪುನಃ ಆಯ್ಕೆ ಮಾಡಬೇಕು. 15ನೇ ಹಣಕಾಸಿನಲ್ಲಿ 40 ಲಕ್ಷ ಬೋಗಸ್ ಕ್ರಿಯಾಯೋಜನೆ ಮಾಡಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇಂಜಿನಿಯರ್ ಕಾಮಗಾರಿ ಮಾಡದೆ ಬಿಲ್ ತೆಗೆದಿರುತ್ತಾರೆ. ಈ ಕುರಿತು ಮಾಹಿತಿ ಕೇಳಿದರೂ ಮಾಹಿತಿ ಕೊಟ್ಟಿಲ್ಲ. ಈ ಕುರಿತು 15ನೇ ಹಣಕಾಸಿನ 2023-24 ಹಾಗೂ 2024-25ನೇ ಸಾಲಿನಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಇಲ್ಲದಿದ್ದರೆ ಬರುವಂತ ದಿನಗಳಲ್ಲಿ ತಾಲೂಕು ಪಂಚಾಯಿತಿಗೆ ಬೀಗ ಜಡೆದು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷರಾದ ಸುಖದೇವ್ ಕಟ್ಟಿಮನಿ, ರಾಜ್ಯ ಕಾರ್ಯದರ್ಶಿಯಾದ ಶರಣು ಜಮಖಂಡಿ, ತಾಲೂಕು ಘಟಕದ ಅಧ್ಯಕ್ಷರಾದ ತಿಪ್ಪಣ್ಣ ಮೇಲಿನಮನಿ, ಉಪಾಧ್ಯಕ್ಷರಾದ ಕಮಲಸಾಬ ಕಾಟಮಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ ತಳಕೇರಿ, ಪದಾಧಿಕಾರಿಗಳಾದ ಮುನೀರ್ ಕೋಜಗಿರಿ, ಮಲ್ಲಿಕಾರ್ಜುನ ಮೆಲಿನಮನಿ, ಅಶೋಕ ಕೊಂಡಗೂಳಿ, ಸುಖದೇವ್ ಕಟ್ಟಿಮನಿ,ಶರಣು ಜಮಖಂಡಿ, ಶಿವಶರಣ ಕಾಂಬಳೆ, ರಾಘವೇಂದ್ರ ಗುಡಿಮನಿ ಸೇರಿದಂತೆ ತಾಲೂಕು, ಜಿಲ್ಲಾ ಪದಾಧಿಕಾರಿಗಳು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 