ಕಬ್ಬಿಗೆ ಬೆಂಬಲ ಬೆಲೆ 3500ರೂ ನಿಗದಿ ಪಡಿಸಲು ಆಗ್ರಹಿಸಿ ಪ್ರತಿಭಟನೆ
Protest demanding fixing of support price for sugarcane at Rs. 3500
ಜಮಖಂಡಿ 05: ತಾಲೂಕಿನ ಜಂಬಗಿ ಬಿ.ಕೆ ಗ್ರಾಮದಲ್ಲಿ ಕಬ್ಬು ಬೆಳೆಗಾರರು ಕಬ್ಬಿಗೆ ಬೆಂಬಲ ಬೆಲೆ 3500ರೂ ನಿಗದಿ ಪಡಿಸಬೇಕು ಹಾಗೂ ಬಾಕಿ ಉಳಿಸಿಕೊಂಡಿರುವ ಬಿಲ್ ಪಾವತಿ ಮಾಡಬೇಕೆಂದು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಜಂಬಗಿ ಬಿ.ಕೆ ಗ್ರಾಮದಲ್ಲಿ ನೂರಾರು ರೈತರಿಂದ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ ಅನೀಲ ಬಡಿಗೇರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಈ ಭಾಗದಲ್ಲಿ ಸಮೃದ್ದಿ ಭರಿತ ನೆಲ, ಜಲ, ಭೂಮಿಯನ್ನು ಒಳಗೊಂಡಿದ್ದು ಈ ಭಾಗದಲ್ಲಿ ಕಬ್ಬು ಬೇಳೆ ಹೆಚ್ಚಾಗಿ ಬೆಳೆಯುತ್ತಾರೆ. ರೈತರು ಕಷ್ಟಪಟ್ಟು ಬೆವರು ಹರಿಸಿ ಬೆಳೆದ ಕಬ್ಬಿಗೆ ಸರಿಯಾದ ಬೆಲೆ ನಿಗದಿಯಾಗಬೇಕಿದೆ. ಜನಪ್ರತಿನಿಧಿಗಳು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಯಾರೆ ಇದ್ದರು ಅವರು ಕಾರ್ಖಾನೆ ಮಾಲಿಕರಾಗಿರುವದರಿಂದ ಅವರು ಒಬ್ಬ ಕಬ್ಬು ಬೆಳೆಗಾರರು ಮತ್ತು ರೈತರೊಂದಿಗೆ ನೇರ ಸಂಪರ್ಕ ಇಟ್ಟುಕೊಳ್ಳಬೇಕು. ಬೆಳೆದ ಬೆಳೆಗೆ ಯೋಗ್ಯ ದರ ನೀಡುವುದು ಸರ್ಕಾರ ಹಾಗೂ ಕಾರ್ಖಾನೆ ಮಾಲಿಕರ ಆದ್ಯ ಕರ್ತವ್ಯ ಎಂದರು.
ಜಬ್ ಕಿಸಾನ ಉಟೇಗಾ ತಬ್ ಗಾವ್ ಉಟೇಗಾ, ಜಬ್ ಗಾವ್ ಉಟೇಗಾ ತಬ್ ದೇಶ ಬಡೆಗಾ ಎಂಬ ಮಹಾತ್ಮಾಗಾಂಧಿಯವರ ಮಾತಿನಂತೆ ಗ್ರಾಮಗಳ ರೈತರನ್ನು ಆರ್ಥಿಕವಾಗಿ ಸಬಲ ಮಾಡಬೇಕಾಗಿದೆ. ಅದಕ್ಕಾಗಿ ಸರ್ಕಾರ ಕಟಿ ಬದ್ಧವಾಗಬೇಕಿದೆ. ಕಬ್ಬಿನ ಬಿಲ್ ಬರುತ್ತಿಲ್ಲ ಎಂದು ಗೋವಿನ ಜೋಳ ಬೆಳೆದರೆ ಅದರಲ್ಲೂ ರೈತ ಮಂಕಾಗುತ್ತಿದ್ದಾನೆ. ಕಳೆದ ಬಾರಿ ಗೋವಿನ ಜೋಳ 2750 ಇತ್ತು ಆದರೆ ಇಂದು 1500 ರೂ ಇದೆ. ದರ ಇಳಿಕೆಯಾಗುತ್ತಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಯಾವಾಗಲೂ ಸಿಗುವುದಿಲ್ಲ, ದುಡಿಯುವ ರೈತರಿಗೆ, ಕೊಳ್ಳುವ ಗ್ರಾಹಕನಿಗೂ ಲಾಭವಿಲ್ಲ ಕೇವಲ ಮದ್ಯವರ್ತಿಗಳು ಲಾಭ ತಿನ್ನುತ್ತಿದ್ದಾರೆ ಈ ಪದ್ದತಿ ಬದಲಾಗಬೇಕು ಎಂದರು.
ಕಾಂಗ್ರೇಸ್ ಮುಖಂಡ ಸುಶೀಲಕುಮಾರ ಬೆಳಗಲಿ ಮಾತನಾಡಿ, ಈ ಭಾಗದ ಹೋರಾಟಗಾರ ರಮೇಶ ಗಡದನ್ನವರ ಅವರನ್ನು ನೆನಪಿಸಿಕೊಂಡರು. ಪಕ್ಷ, ಪಂಗಡ, ಜಾತಿ, ಕುಲ ಮರೆತು ಪ್ರಾಮಾಣಿಕತೆಯಿಂದ ಅಭಿವೃದ್ದಿ ಕೆಲಸಮಾಡಬೇಕು. ಶೇ. 80ಅ ರಷ್ಟು ಜನಪ್ರತಿನಿಧಿಗಳೆ ಕಾರ್ಖಾನೆ ಮಾಲಿಕರಾಗಿರುವುದರಿಂದ ರೈತರ ಕಷ್ಟ ತಿಳಿಯುತ್ತಿಲ್ಲ. ಮಾಲಿಕರು ಎಂಬುದನ್ನು ಬದಿಗಿಟ್ಟು ಅವರು ಕಬ್ಬು ಬೆಳೆಗಾರರಾಗಿರುವುದರಿಂದ ರೈತರ ಪರ ನಿಲ್ಲಬೇಕಾಗಿದೆ ಎಂದರು.
ಕಾಂಗ್ರೇಸ್ ಮುಖಂಡ ಬಸವರಾಜ ಸಿಂದೂರ, ಆನಂದ ಇಂಗಳಗಾವಿ, ರೈತ ಮುಖಂಡ ಉಮೇಶ ಶಿದರಡ್ಡಿ, ಸುರೇಶ ಹಂಚನಾಳ, ಅಜೇಯ ಕುಲಕರ್ಣಿ, ಪಿಂಟು ಶಿಂಧೆ, ಮಹೇಶ ದೇಶಪಾಂಡೆ, ರಾಜು ನಧಾಪ ಮಾತನಾಡಿದರು. ಸುತ್ತಮುತ್ತಲಿನ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪೋಲಿಸ ಸಿಬ್ಬಂಧಿಗಳು ಬಂದೋಬಸ್ತ ಒದಗಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 