ಅಕ್ರಮ ಮದ್ಯ ಮಾರಾಟ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ

ಅಕ್ರಮ ಮದ್ಯ ಮಾರಾಟ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ Protest demanding ban on illegal liquor sales

ಬೆಳಗಾವಿ 30: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡಬೇಕು. ಮಹಿಳಾ ಗ್ರಾಮಸಭೆಗಳ ಠರಾವಿಗೆ ಪರಮಾಧಿಕಾರ ನೀಡಬೇಕೆಂದು ಆಗ್ರಹಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕದ ಮಹಿಳಾ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  

ಈಗಾಗಲೇ ಹರಿಯಾಣ, ಮಹಾರಾಷ್ಟ್ರ ಹಾಗೂ ಇನ್ನಿತರ ಹಲವಾರು ರಾಜ್ಯಗಳಲ್ಲಿ ಮಹಿಳಾ ಗ್ರಾಮ ಸಭೆಗಳಿಗೆ ಪರಮಾಧಿಕಾರ ನೀಡಲಾಗಿದೆ. ಕಾನೂನಿನಂತೆ ರಾಜ್ಯ ಸರ್ಕಾರ ಮದ್ಯದ ಅಂಗಡಿಗೆ ಪರವಾನಿಗೆ ನೀಡಲು ಅಥವಾ ರದ್ದು ಮಾಡಲು ಮಹಿಳಾ ಗ್ರಾಮ ಸಭೆಯಲ್ಲಿ ಒಪ್ಪಿಗೆ ದೊರೆಯಬೇಕು ಮತ್ತು ಅದಕ್ಕೆ ಮಾನ್ಯತೆ ದೊರೆಯಬೇಕು. ಎಂದು ಒತ್ತಾಯಿಸಿದರು. ಮಹಿಳಾ ಗ್ರಾಮ ಸಭೆಯಲ್ಲಿ ಒಪ್ಪಿಗೆ ದೊರೆಯುವ ಅವಕಾಶ ಕಲ್ಪಿಸಬೇಕು. ಈ ಹಿಂದಿನ ಸರಕಾರ ಕಾನೂನು ಜಾರಿ ಮಾಡಿದ್ದರು. ಅದನ್ನು ಕಳೆದ 2016ರಂದು ಸರಕಾರ ತೆಗೆದು ಹಾಕಿದೆ ಎಂದು ದೂರಿದರು.  

ಅನುಮತಿ ಪಡೆದ ಅಂಗಡಿಗಳ ಸಮಸ್ಯೆ ಒಂದೆಡೆಯಾದರೆ ಅದಕ್ಕಿಂತ ಹೆಚ್ಚು ಗ್ರಾಮಗಳ ಮನೆ, ಹಾಗೂ ಪಾನ್ ಶಾಪ್, ಕಿರಾಣಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ಸಣ್ಣ ಸಣ್ಣ ಮಕ್ಕಳು ಸಹಿತ ಮದ್ಯ ವ್ಯಸನಕ್ಕೆ ಅಂಟಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಮೊದಲೂ ಪರವಾನಿಗೆ ಇದ್ದ ಬಾರ್‌ಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಗ್ರಾಮಾಂತರದಲ್ಲಿನ ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಯುವಪೀಳಿಗೆ ಮತ್ತು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ, ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸರ್ಕಾರ ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕು. ಗ್ರಾಮಸಭೆಗಳಲ್ಲಿ ಮಹಿಳೆಯರು ಚರ್ಚಿಸಿ ಠರಾವು ಪಾಸ್ ಮಾಡಿದಾಗ, ಮದ್ಯವನ್ನು ನಿಷೇಧಿಸಬೇಕು.  

ಈ ಎರಡು ಬೇಡಿಕೆಗಳನ್ನು ತಕ್ಷಣ ಸರ್ಕಾರ ವೇದಿಕೆ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ರಾಜ್ಯ ಎಲ್ಲ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ನವಂಬರ 25ರಂದು ಬೆಂಗಳೂರಿನಲ್ಲಿ ಅನಿದಿಷ್ಠಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಶೋಕ, ಮಹಾದೇವಿ, ಸುವರ್ಣಾ, ಗಂಗೂ ಲಕ್ಷ್ಮೀ, ಲಕ್ಷ್ಮೀ, ರೂಪಾ, ವನೀತಾ, ರಾಧಿಕಾ, ಕಸ್ತೂರಿ, ದುರ್ಗವ್ವಾ, ಯಲ್ಲವ್ವಾ, ಸಂಗಮ್ಮಾ, ಮಂಜು, ಹನಮಂತ ಯಲ್ಲಪ್ಪ, ವೈಶಾಲಿ, ಹೇಮಾ, ಸಾಗರಿಕಾ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆ ಪಾಲ್ಗೊಂಡಿದ್ದರು. ಉಪಸ್ಥಿತರಿದ್ದರು.