ಅಂಗನವಾಡಿ ಉದ್ಘಾಟನೆಗೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ
ಹಾವೇರಿ25: ತಾಲೂಕಿನ ಕೋಡಬಾಳ ಗ್ರಾಮದಲ್ಲಿ ನಿಮರ್ಿಸಿರುವ ನೂತನ ಅಂಗನವಾಡಿ ಕೇಂದ್ರಕ್ಕೆ ಅಧಿಕಾರಿಗಳ ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡದೆ ಹಾಗೆ ಬಿಟ್ಟಿದ್ದು, ಸಕರ್ಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.ಎಂದು ಅಂಗನವಾಡಿ ಕೇಂದ್ರ ಉದ್ಘಾಟನೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಏನಿದು ಸಮಸ್ಯೆ:
ಕೋಡಬಾಳ ಗ್ರಾಮವು ಮರೋಳಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಗ್ರಾಮದಲ್ಲಿ ಪ್ರಸ್ತುತ ಎರಡು ಅಂಗನವಾಡಿ ಕೇಂದ್ರಗಳಿದ್ದು, ಅಂಗನವಾಡಿ ಕೇಂದ್ರ-1 ಸ್ವಂತ ಕಟ್ಟಡದಲ್ಲಿ ನಡೆಯುತ್ತಿದ್ದರೆ, ಅಂಗನವಾಡಿ ಕೇಂದ್ರ-2ಕ್ಕೆ ಸ್ವಂತ ಕಟ್ಟಡ ಇಲ್ಲದ ಕಾರಣ ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡವೊಂದರಲ್ಲಿ ಕಳೆದ8 ವರ್ಷಗಳಿಂದ ನಡೆಯುತ್ತಿದೆ.
ಅಂಗನವಾಡಿ ಕೇಂದ್ರ-1ರಲ್ಲಿ 26 ಮಕ್ಕಳಿದ್ದು, ಅಂಗನವಾಡಿ ಕೇಂದ್ರ-2 ರಲ್ಲಿ 20 ಮಕ್ಕಳಿದ್ದಾರೆ 2011-12ನೇ ಸಾಲಿನಲ್ಲಿ ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿಮರ್ಿಸಲಾಗಿದೆ.
ಪಾಳು ಬಿದ್ದಿರುವ ಕಟ್ಟಡ: ನೂತನ ಕಟ್ಟಡವನ್ನು ನಿಮರ್ಿಸಿ 7 ವರ್ಷಗಳೇ ಕಳೆದಿದ್ದು, ಇನ್ನೂ ಉದ್ಘಾಟನೆಯಾಗಿಲ್ಲ. ಮುಂದಾಲೋಚನೆ ಇಲ್ಲದ ಅಧಿಕಾರಿಗಳ ಮನೋಭಾವದಿಂದ ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು, ಕೆಲ ಕಡೆಗಳಲ್ಲಿ ಬಿರುಕು ಬಿಟ್ಟಿದೆ. ಅಲ್ಲದೆ, ಕಟ್ಟಡದ ಸುತ್ತ ಆಳೆತ್ತರಕ್ಕೆ ಗಿಡ, ಗಂಟಿಗಳು ಬೆಳೆದು ನಿಂತಿವೆ.
ಜತೆಗೆ ಕೇಂದ್ರದ ಸುತ್ತ ಕಾಂಪೌಂಡ್ ನಿಮರ್ಿಸದೆ ಕಟ್ಟಡವು ಕಾಡುಪ್ರಾಣಿಗಳು ಹಾಗೂ ಸರೀಸೃಪಗಳ ಆವಾಸ ತಾಣವಾಗಿ ಮಾಪರ್ಾಟು ಹೊಂದಿದೆ. ಅಧಿಕಾರಿಗಳ ಬೇಜಬ್ದಾರಿತನದಿಂದ ಸಕರ್ಾರದ ಹಣ ಪೋಲಾಗಿದೆ.
ಮಕ್ಕಳನ್ನು ಕಳುಹಿಸಲು ಪಾಲಕರ ಹಿಂದೇಟು: ಅಂಗನವಾಡಿ ಕೇಂದ್ರ-2ರ ನೂತನ ಕಟ್ಟಡವಾಗಿದ್ದರು ಸಹ ಉದ್ಘಾಟನೆ ಯಾಗದ ಹಿನ್ನಲೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಎಂದು ಗ್ರಾಮಸ್ಥ ಲೊಕೇಶ ಕುಬಸದ ಆರೋಪಿಸಿದರು
ಬಿಲ್ ಕೈಸೇರಿಲ್ಲ: ಕಟ್ಟಡ ನಿಮರ್ಾಣದ ಉಸ್ತುವಾರಿ ವಹಿಸಿಕೊಂಡ ಬಳಿಕ ವೇಗವಾಗಿ ಕಾಮಗಾರಿ ಮಾಡಲಾಗಿದೆ. ಕಟ್ಟಡ ನಿಮರ್ಾಣಕ್ಕೆ ಸಂಬಂಧಿಸಿ ನನಗೆ ಪಾವತಿಯಾಗಬೇಕಿದ್ದ ಹಣ ಇನ್ನು ಕೈಸೇರಿಲ್ಲ.
ಗುತ್ತಿಗೆದಾರ
ಅಂಗನವಾಡಿ ಕೇಂದ್ರದ ಕಟ್ಟಡವನ್ನು ನಿಮರ್ಿತಿ ಕೇಂದ್ರವು ನಿಮರ್ಿಸಿ ಶಿಶು ಅಭಿವೃದ್ಧಿ ಇಲಾಖೆಗೆ ವಗರ್ಾಹಿಸಿ ಹಲವು ವರ್ಷಗಳೇ ಕಳೆದಿದೆ. ಆದರೆ, ಇಲಾಖೆ ಅಧಿಕಾರಿಗಳ ನಿರ್ಲಕ್ಷೃ ಹಾಗೂ ಗ್ರಾಮಸ್ಥರ ಅಸಹಕಾರ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ತಡೆದಿದೆ.
ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಅಂಗನವಾಡಿ ಕಟ್ಟಡ ಹಾಗೂ ಮೂಲಭೂತ ಸೌಲಭ್ಯದೊಂದಿಗೆ ಉದ್ಘಾಟಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರ ಆಗ್ರಹ.
ಪ್ರತಿಭಟನೆಯಲ್ಲಿ ಲೋಕೇಶ ಕುಬಸದ ಮುತ್ತಯ್ಯ ಚಿನ್ನಿಕಟ್ಟಿ ಸಿದ್ಧಪ್ಪ ತೆಲಗಿ ಶಂಕರಗೌಡ ದಾಳಿಗೌಡ್ರ ಸೇರಿದಂತೆ ಇತರರು ಭಾಗವಹಿಸಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 