ಜು.15ರಂದು ವಿವಿಧ ಬೇಡಿಕೆಗಾಗಿ ನೊಂದಾಯಿತ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ

ಜು.15ರಂದು ವಿವಿಧ ಬೇಡಿಕೆಗಾಗಿ ನೊಂದಾಯಿತ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ  Protest by registered workers organization for various demands on June 15

ಕೊಪ್ಪಳ 10: ನೊಂದಾಯಿತ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗಾಗಿ ಜು.15ರಂದು ನಗರದ ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದುಕಲ್ಯಾಣಕರ್ನಾಟಕ ಜಿಲ್ಲೆಗಳ ನೊಂದಾಯಿತಕಾರ್ಮಿಕ ಸಂಘದ ಅಧ್ಯಕ್ಷ ರಮೇಶ ಘೋರ್ಪಡೆ ಹೇಳಿದರು. 

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿ, ಕರ್ನಾಟಕಕಟ್ಟಡ ಮತ್ತುಇತರೆ ನಿರ್ಮಾಣಕಾರ್ಮಿಕರಕಲ್ಯಾಣ ಮಂಡಳಿ ಹೊಸದಾಗಿ ಜಾರಿಗೊಳಿಸಿದ ಕುಟುಂಬ ಐ ಡಿ ಅಪ್ಲಿಕೇಷನ್ ರದ್ದುಗೊಳಿಸಿ, ನೈಜಕಾರ್ಮಿಕರ ವಿವಿಧ ಸೌಲಭ್ಯಗಳ ಅರ್ಜಿಗಳನ್ನು ಸಕಾರಣವಿಲ್ಲ ತಿರಸ್ಕರಿಸುವುದನ್ನುತಡೆಯಬೇಕು.ಸೇವಾ ಸಿಂಧುವಿನಲ್ಲಿ ಅರ್ಜಿಗಳ ಮಂಜೂರಾತಿಯಾದ ಫಲಾನುಭವಿಗಳಿಗೆ ಹೆರಿಗೆ ಮತ್ತು ಮದುವೆ ಸಹಾಯಧನದ ಬಾಂಡಗಳನ್ನು ಇಲ್ಲಿಯವರೆಗೂ ನೀಡಿಲ್ಲ. ಬಾಂಡ್ ವಿಲೇವಾರಿಗೆಕ್ರಮ ವಹಿಸಬೇಕು ಎಂದರು.ಜಿಲ್ಲೆಯಲ್ಲಿ 1.86 ಲಕ್ಷ ನೊಂದಾಯಿತಕಾರ್ಮಿಕರಿದ್ದು, ಅವರಿಗೆ ಸರ್ಕಾರದ ಸೌಲಭ್ಯಗಳು ಸಕಾಲಕ್ಕೆ ಸಿಗುತ್ತಿಲ್ಲ. ಅಲ್ಲದೇ 2024 ರಿಂದ ಮಂಜೂರಾದ ಕೆಲವು ವಿವಿಧರೀತಿಯ ಸೌಲಭ್ಯಗಳಿಗೆ ಸಲ್ಲಿಸಿದ ಅರ್ಜಿಗಳಿಗೆ ಈವರೆಗೂ ಹಣಜಮಾಆಗಿಲ್ಲ.ಕಾರ್ಮಿಕರಕಾರ್ಡ್‌ ನವೀಕರಣವನ್ನು ಮೂರು ವರ್ಷಕ್ಕೆ ನವೀಕರಣ ಮಾಡಲುತ್ವರಿತವಾಗಿ ಆದೇಶಿಸಬೇಕು. ಕಟ್ಟಡಕಾರ್ಮಿಕರಿಗೆ ನೀಡುತ್ತಿರುವ ಮದುವೆ ಸಹಾಯಧನವನ್ನು 60 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಜು.15ರಂದು ನಮ್ಮ ನ್ಯಾಯಯುತ ಬೇಡಿಕೆಈಡೇರಿಸುವಂತೆ ಸರ್ಕಾರಕ್ಕೆ ಮತ್ತೊಮ್ಮೆಒತ್ತಾಯ ಮಾಡುತ್ತೇವೆ. ಅಂದುಜಿಲ್ಲೆ ಸೇರಿದಂತೆರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 4 ಸಾವಿರ ನೊಂದಾಯಿತಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವು ಮಾಲೂರು, ಶರಣಪ್ಪ, ಶಿವಕುಮಾರಗೌಡ, ಮಹೇಶ, ದಾದಾಫೀರ್ ಮುದಗಲ್ ಸೇರಿದಂತೆಇತರರು ಉಪಸ್ಥಿತರಿದ್ದರು.ಫೋಟೋ ಕ್ಯಾಪ್ಸನ್‌: ಕೊಪ್ಪಳ ನಗರದ ಪತ್ರಿಕಾ ಭವನದಲ್ಲಿಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿಕಲ್ಯಾಣಕರ್ನಾಟಕ ನೊಂದಾಯಿತಕಾರ್ಮಿಕರ ಸಂಘದಅಧ್ಯಕ್ಷರಮೇಶಘೋರೆ​‍್ಡ ಮಾತನಾಡಿದರು.