ಮುಧೋಳ: ಮಾಜಿ ಸಚಿವ ಡಿ. ಕೆ. ಶಿವಕುಮಾರ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸತೀಶ ಬಂಡಿವಡ್ಡರ ಮಾಜಿ ಸಚಿವ ಕಾಂಗ್ರೇಸ್ ಧುರೀಣ ಡಿ. ಕೆ. ಶಿವಕುಮಾರ ಅವರನ್ನು ಕೇಂದ್ರ ಸರಕಾರದ ಅಧೀನದಲ್ಲಿರುವ ಇ.ಡಿ ಸಂಸ್ಥೆಯನ್ನು ದುರುಪಯೋಗ ಮಾಡಿಕೊಂಡು ಡಿ. ಕೆ. ಶಿವಕುಮಾರ ಅವರನ್ನು ಬಂದಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿದೆ. ಕಾಂಗ್ರೇಸ್ ಮುಖಂಡರುಗಳನ್ನು ತೇಜೋವದೆ ಮಾಡುವ ಕೆಲಸ ಮಾಡುತ್ತಿದೆ. ಇದರಿಂದ ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಸಿ.ಬಿ.ಐ. ಮತ್ತು ಇ.ಡಿ ಇಲಾಖೆಗಳನ್ನು ದುರುಪಯೋಗ ಮಾಡಿಕೊಂಡು ಮಾಜಿ ಸಚಿವ ಡಿ. ಕೆ. ಶಿವಕುಮಾರ ಅವರನ್ನು ಬಂದಿಸಿದ್ದು. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಕಾಶಿನಾಥ ಹುಡೇದ ಮಾತನಡಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಡಿ. ಕೆ. ಶಿವಕುಮಾರ ಅವರು ಗುಜರಾತ ಕಾಂಗ್ರೆಸ್ ಶಾಸಕರನ್ನು ಏಕೆ ರಕ್ಷಣೆ ಮಾಡಬೇಕು, ಉಪ್ಪು ತಿಂದವರು ನೀರು ಕುಡಿಯಬೇಕೆಂದು ಹೇಳಿದ್ದು ಅವರು ಗುಜರಾತ ಶಾಸಕರನ್ನು ರಕ್ಷಸಿದ್ದರಿಂದಲೆ ಬಿಜೆಪಿಯವರು ನಾವು ಅವರ ಮೇಲೆ ಸೇಡು ತಿರಿಸಿಕೊಳ್ಳುತ್ತಿದ್ದೇವೆ ಅಂತ ಒಪ್ಪಿಕೊಂಡಿದ್ದು ದುರದುಷ್ಟಕರ ಸಂಗತಿ ಇಂತಹ ಮಾತು ಕಾರಜೋಳ ಅವರ ಬಾಯಿಂದ ಬಂದಿದ್ದು ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಹಾಕಿದಂತಾಗಿದೆ ಎಂದು ಹೇಳಿದರು ದಯಾನಂದ ಪಾಟೀಲ, ಡಿ.ಸಿ.ಸಿ ಬ್ಯಾಂಕ ಉಪಾದ್ಯಕ್ಷ ಶಿವಾನಂದ ಪಾಟೀಲ, ಜಗನ್ನಾಥ ಪವಾರ ಮುಂತಾದವರು ಮಾತನಾಡಿ ಎಲ್ಲರೂ ಸೇರಿ ಮಾನ್ಯ ರಾಜ್ಯ ಪಾಲರಿಗೆ ತಹಶೀಲ್ದಾರರ ಮುಖಾಂತರ ಡಿಕೆಶಿ ಯವರನ್ನು ಬಿಡುಗಡೆ ಮಾಡಲು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸಂಜು ನಾಯಕ, ಉಪಾಧ್ಯಕ್ಷರಾದ ಲೋಕಣ್ಣ ಕೊಪ್ಪದ, ಮಾಂತೇಶ ಉದಪುಡಿ, ದುಂಡಪ್ಪ ಲಿಂಗರಡ್ಡಿ, ಹೆಚ್. ಎ. ಕಡಪಟ್ಟಿ, ನವಿನ ಬದ್ರಿ, ಸತೀಶ ಮಲಘಾಣ, ಸಂತೋಷ ಪಾಲೋಜಿ, ಮಹೇಶ ಹಲಸಂಗಿಮಠ, ಸುಭಾಸ ಗಸ್ತಿ, ಕಾಶಿಮಸಾಬ ಕೆಸರಟ್ಟಿ, ರಾಜು ಬಾಗವಾನ, ತಿರುಪತಿ ಬಂಡಿವಡ್ಡರ, ದುಂಡಪ್ಪ ಬರಮಣಿ, ತಮ್ಮಣ್ಣಪ್ಪ ಅರಳಿಕಟ್ಟಿ, ಗೋವಿಂದಪ್ಪ ತುಬಾಕಿ, ಕಾಂತುಗೌಡ ಪಾಟೀಲ, ಗೋಪಾಲ ಗುಣದಾಳ, ರಾಕೇಶ ಬಳಗಾರ, ಶ್ರೀಕಾಂತ ಕೋಳಿ, ಕುಮಾರ ಬಂಡಿವಡ್ಡರ, ಅಕ್ಬರ ಬಾಗವಾನ, ಅಶೋಕ ಗೌರೋಜಿ, ಕಲ್ಮೇಶ ಸಾರವಾಡ, ಸುಧಾಕರ ಸಾರವಾಡ, ಕಲ್ಮೇಶ ಹುಚರಡ್ಡಿ, ಕಲ್ಮೇಶ ಪಂಚಗಾವಿ, ವೆಂಕಣ್ಣ ಗದಿಗೆಪ್ಪಗೋಳ, ಮಂಜು ಪಾಟೀಲ, ಸಾಮ್ರಾಟ ನಿಂಬಾಳಕರ, ಸುಧೀರ ಅರಳಿಕಟ್ಟಿ, ರಿತೇಶ ಪಾಟೀಲ, ಭೀಮಶಿ ಸರಕಾರಕುರಿ, ಮಲ್ಲಪ್ಪ ಕೋಮಾರ, ರಮೇಶ ಗಾಣಿಗೇರ, ಹಣಮಂತ ತೇಲಿ, ಹಣಮಂತ ಅಡವಿ, ಗೋಪಾಲಗೌಡ ಪಾಟೀಲ, ಗಿರೀಶ ಲಕ್ಷಾಣಿ, ಬಾಳಪ್ಪ ಹೊಸಮನಿ, ಪ್ರಕಾಶ ಹಲಗಲಿ, ಬಸವರಾಜ ಬೂದಿಹಾಳ, ತಮ್ಮಣಗೌಡ ಪಾಟೀಲ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.