ಧರ್ಮದ ಆಧಾರದ ಮೇಲೆ ವಿಭಜನೆ ಖಂಡಿಸಿ ಪ್ರತಿಭಟನೆ
Protest against division on the basis of religion
ವಿಜಯಪುರ 11: ದೇಶದಲ್ಲಿ ಕೋಮು ಗಲಭೆ ಸೃಷ್ಠಿಸಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿ ಬ್ರಾಹ್ಮಣ್ಯವಾದಿ ಅಧಿಕಾರವನ್ನು ನಿರಂತರವಾಗಿ ಅನುಭವಿಸಲು ಆರ್‌ಎಸ್‌ಎಸ್ ಕುತಂತ್ರವನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳಗಾವಿ ವಿಭಾಗೀಯ ಸಂಚಾಲಕರಾದ ಸಂಜು ವಾಯ್. ಕಂಬಾಗಿ ಮಾತನಾಡಿ, 1950ರ ದಶಕದಲ್ಲಿಯೆ ಡಾ!! ಬಾಬಾ ಸಾಹೇಬ ಅಂಬೇಡ್ಕರ ರವರು ಯಾವುದೆ ಕಾರಣಕ್ಕೂ ಆರ್.ಎಸ್.ಎಸ್. ಹಾಗೂ ವಿಶ್ವ ಹಿಂದೂ ಮಹಾಸಭಾದಂತಹ ಸಂಘಟನೆಗಳೊಂದಿಗೆ 6 ಹೊಂದಣಿಕೆ ಮಾಡಿಕೊಳ್ಳಬಾರದೆಂದು ರಾಜಕೀಯ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಅಷ್ಟೆ ಅಲ್ಲಾ ಆರ್.ಎಸ್.ಎಸ್. ಅಪಾಯಕಾರಿ ಸಂಘಟನೆ ಎಂದು ಘೋಷಿಸಿದ್ದರು. 15 ಅಗಷ್ಟ 1947ರಂದು ಭಾರತ ಸ್ವಾತಂತ್ರಗೊಂಡು, 26 ಜನವರಿ 1950ರಂದು ಅಂಬೇಡ್ಕರ ರವರು ರಚಿಸಿದ ಭಾರತ ಸಂವಿಧಾನ ಜಾರಿಗೊಂಡಾಗ ಇದೆ ಆರ್‌ಎಸ್‌ಎಸ್ ಪತ್ರಿಕೆಯಾದ ಆರ್ಗನೇಜರನಲ್ಲಿ ಭಾರತ ಸಂವಿಧಾನದಲ್ಲಿ ಏನೂ ಇಲ್ಲ ವಾಸ್ತವವಾಗಿ ನನ್ನ ಮನಸ್ಮೃತಿ ಪ್ರಾಚೀನವಾದುದ್ದು ಜಗತ್ತಿನ ಜನರೆಲ್ಲ ಅದರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಆದರೆ ಸಂವಿಧಾನ ಪಂಡಿತರಿಗೆ ಅದು ಏನು ಅಲ್ಲಾವೆಂದು ಟೀಕಿಸಿತ್ತು. ಆ ಮೂಲಕ ಮನುವಾದಿಗಳು ಮನಸೃತಿಯನ್ನು ಪೂಜಿಸಿ' ಭಾರತದ ಸಂವಿಧಾನವನ್ನು ಅಂದಿನಿಂದಲು ತಿರಸ್ಕಾರದ ಮನೊಭಾವದಿಂದಲೆ ನೋಡುತ್ತಾ ಬಂದಿರುತ್ತಾರೆ ಎಂದರು.
ರಾಜ್ಯ ಮಹಿಳಾ ಸಂಘಟನಾ ಸಂಚಲಾಕಿ ಪ್ರತಿಭಾ ಹೊಸಮನಿ ಮಾತನಾಡಿ, ಹಿಂದು ಮಹಿಳೆಯರಿಗೆ ಪುರುಷರಷ್ಟೆ ಸಮನಾ ಹಕ್ಕು ನೀಡಲು ಬಯಸಿದ್ದು ಹಿಂದೂ ಕೊಡ್‌ಬಿಲ್ಲ ಜಾರಿಯಾಗಲು ಅಂಬೇಡ್ಕರ ಹೋರಾಡುತ್ತಿದ್ದರೆ ಅದರ ಪ್ರತಿಯನ್ನು ಸುಟ್ಟು ಹಾಕಿ ಆರ್‌ಎಸ್‌ಎಸ್ ವಿಕೃತಿ ಮೆರೆದಿತ್ತು. ಇತ್ತಿಚಿಗೆ ಭಾರತದ ಮುಖ್ಯ ನ್ಯಾಯಾಧೀಶರಾದ ಜೆಸ್ವಿಸ್ ಗವಾಯಿ ರವರ ಮೇಲೆ ಶೂ ಏಸೆಯಲಾಗಿತ್ತು. ಆ ಕೃತ್ಯ ಮಾಡಿದ ವಕೀಲ ರಾಕೇಶ ಕಿಶೋರ ಸನಾತನ ಧರ್ಮ ಉಳಿಸಲು ಶೂ ಏಸೆದೆ ಎಂದು ಎದೆ ಉಬ್ಬಿಸಿ ಹೇಳುತ್ತಾನೆ. ಭಾರತ ದೇಶದಲ್ಲಿ ಆತನ ವಕೀಲನಾಗಿದ್ದು ಮನಸ್ಕೃತಿಯಿಂದಲೊ? ಅಥವಾ ಸಂವಿಧಾನದಿಂದಲೊ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 