ಲೋಕದರ್ಶನ ವರದಿ
ಗದಗ 21: ಕನಕ ಪೀಠದ ಶ್ರೀಗಳಿಗೆ ಅಗೌರವ ತೋರಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಹಾಲುಮತ ಸಮುದಾಯದವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಸಮಾಜದ ಮುಖಂಡರು, ಕಾರ್ಯಕರ್ತರು ಸಚಿವರ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಚಿಕ್ಕನಾಯ್ಕನಹಳ್ಳಿ ತಾಲೂಕು ಹುಳಿಯಾರ್ನಲ್ಲಿ ಕನದಾಸರ ವತರ್ುಳ ನಿರ್ಮಾಣ ಕುರಿತ ಗೊಂದಲ ಪರಿಹರಿಸಲು ಹಾಲುಮತ ಸಮಾಜದ ಶ್ರೀಗಳ ನೇತೃತ್ವದಲ್ಲಿ ಸಮಾಜದ ಹಿರಿಯರು, ಯುವಕರ ಶಾಂತಿ ಸಭೆ ಕರೆಯಲಾಗಿತ್ತು. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಸಭೆಯಲ್ಲಿ ತೋರಿದ ಉದ್ಧಟತನ ನಡವಳಿಕೆ ಸರಿಯಲ್ಲ. ಸೌಜನ್ಯದಿಂದ ವತರ್ಿಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುವ ಬದಲು ಸಮಾಜದ ಶ್ರೀಗಳ ಜತೆಗೆ ವಾಗ್ವಾದ ನಡೆಸಿ ಅಗೌರ ತೋರಿದ್ದಾರೆ. ಸಮುದಾಯದ ಮುಖಂಡರು ಸ್ಪಷ್ಟೀಕರಣ ಕೇಳಿದಾಗ ತಾವು ಒಂದು ಸಮುದಾಯದ ನಾಯಕ ಏನೀಗ ಎಂದು ಪ್ರಶ್ನಿಸಿ ಉದ್ಧಟತನ ಮೆರೆದ್ದಾರೆ. ಎಲ್ಲ ಸಮುದಾಯದವರನ್ನು ಸಮಾನತೆಯಿಂದ ಕಾಣುತ್ತೇನೆ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದ ಮಾಧುಸ್ವಾಮಿ ಅವರು ಸಮುದಾಯಗಳ ನಡುವೆ ಕಲಹ ಏರ್ಪಡುವಂತಹ ಮಾತುಗಳನ್ನಾಡುವ ಮೂಲಕ ದೇಶದ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ರಾಜ್ಯಪಾಲರು ಕೂಡಲೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರದ್ರಣ್ಣ ಗುಳಗುಳಿ, ಕುರುಬ ಸಮಾಜದ ಗದಗ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ, ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೋ.ಕೆ.ಬಿ. ತಳಗೇರಿ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಹೇಮಂತ ಮಂಜು ಜಡಿ, ಲೋಹಿತಗೌಡ ಕರಿಗಾರ, ಹೇಮಂತ ಎಸ್.ಜಿ., ರಾಮಕೃಷ್ಣ ರೊಳ್ಳಿ, ಸತೀಶ ಜಿ, ಮುತ್ತು ಜಡಿ, ನಾಗಪ್ಪ ಗುಗ್ಗರಿ, ಆನಂದ ಹಂಡಿ, ಹಾಗೂ ಗದಗ ಜಿಲ್ಲಾ ಕುರುಬ ಸಮಾಜದ ಅನೇಕ ಹಿರಿಯರು, ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.