ಲೋಕದರ್ಶನವರದಿ
ಧಾರವಾಡ15: ಕಲ್ಕತ್ತಾದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ. ಅವರ ರೋಡ್ ಷೋ ವೇಳೆ ಬಿಜೆಪಿ ಹಾಗೂ ಟಿಎಮ್ಸಿ ಕಾರ್ಯಕರ್ತರ ನಡುವೆ ನಡೆದ ಗಲಭೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಮಹಾನ್ ಮಾನವತಾವಾದಿ, ನವೋದಯದ ಹರಿಕಾರ ಈಶ್ವರ್ಚಂದ್ರ ವಿದ್ಯಾಸಾಗರರವರ ಪ್ರತಿಮೆ ಉರುಳಿಸಿದನ್ನು ಖಂಡಿಸಿ ಎಐಡಿಎಸ್ಓ ಹಾಗೂ ಎಐಎಮ್ಎಸ್ಎಸ್ ಸಂಘಟನೆಗಳು ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು.
ಎಐಎಮ್ಎಸ್ಎಸ್ ಜಿಲ್ಲಾಧ್ಯಕ್ಷೆ ಮಧುಲತಾ ಗೌಡರ ಮಾತನಾಡಿ "ಕೇವಲ ಮೇಲ್ಜಾತಿಯವರಿಗೆ ಶಿಕ್ಷಣ ಸೀಮಿತವಾಗಿದ್ದ ಕಾಲದಲ್ಲಿ ಈಶ್ವರ್ಚಂದ್ರ ವಿದ್ಯಾಸಾಗರರವರು ಅನೇಕ ಅಪಮಾನಗಳನ್ನು ಸಹಿಸಿ ಎಲ್ಲಾ ವರ್ಗದವರಿಗೂ ಶಿಕ್ಷಣ ದೊರೆಯುವಂತಾಗಲು ಹಾಗೂ ಬಹುಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದರು. ಬಾಲ್ಯ ವಿವಾಹ ಹಾಗೂ ಬಹುಪತ್ನಿತ್ವದ ವಿರುದ್ಧವು ದ್ವನಿ ಎತ್ತಿದರು. ಅವರ ಈ ಪ್ರಗತಿಪರ ವಿಚಾರಗಳನ್ನು ಒಪ್ಪಿಕೊಳ್ಳದ ಬಿಜೆಪಿ-ಆರ್ಎಸ್ಎಸ್ನ ಮನಸ್ಥಿತಿ ಇಂದು ಪ್ರತಿಮೆ ಉರುಳಿಸಲು ಕಾರಣವಾಗಿದೆ. ಪ್ರತಿಮೆಯನ್ನು ಉರುಳಿಸಿದವರಿಗೆ ಉಗ್ರಶಿಕ್ಷೆ ಆಗಬೇಕು" ಎಂದು ಆಗ್ರಹಿಸಿದರು.
ಎಐಡಿಎಸ್ಓನ ಜಿಲ್ಲಾ ಸಂಘಟನಾಕಾರರಾದ ರಣಜೀತ ಧೂಪದ ಮಾತನಾಡಿ "ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಉರುಳಿಸುವ ಬಿಜೆಪಿ- ಆರ್ಎಸ್ಎಸ್ನ ಕೆಲಸ ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಪೆರಿಯಾರ್, ಅಂಬೇಡ್ಕರ್, ಲೆನಿನ್, ಟ್ಯಾಗೋರ್ರವರ ಪ್ರತಿಮೆಗಳನ್ನು ಉರುಳಿಸಿದ್ದಾರೆ. ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿಯು ಅವರ ವಿಚಾರಗಳಿಗೆ ವಿರುದ್ಧವಾದ ವ್ಯಕ್ತಿಗಳು ದೇಶದಲ್ಲಿರುವುದನ್ನು ಒಪ್ಪುವದಿಲ್ಲ. ಬಿಜೆಪಿಯ ಈ ನಡೆ ಅತ್ಯಂತ ಅಪ್ರಜಾತಾಂತ್ರಿಕ ನಡೆಯಾಗಿದೆ. ದೇಶಭಕ್ತಿಯ ಬಗ್ಗೆ ಮಾತನಾಡುವ ಬಿಜೆಪಿ ದೇಶದ ಮಹಾನ್ ಮಾನವತಾವಾದಿಯ ಪ್ರತಿಮೆ ಉರುಳಿಸಿರುವುದು ಡೊಂಗೀ ದೇಶಭಕ್ತಿಯ ಪ್ರತೀಕವಾಗಿದೆ.
ವಿದ್ಯಾಸಾಗರ್ರವರು ವೇದಾಂತ ಹಾಗೂ ಸಾಂಖ್ಯ ಸುಳ್ಳು ತತ್ವಶಾಸ್ತ್ರಗಳೆಂದು ಪರಿಗಣಿಸಿದ್ದರು, ಸಂಪ್ರದಾಯದ ವಿರೋಧಿಗಳೂ ಆಗಿದ್ದರು. ಜನಗಳಿಗೆ ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಸಾರ್ವತ್ರಿಕ ಶಿಕ್ಷಣ ಸಿಗಬೇಕೆಂದು ಹೋರಾಡಿದರು. ವಿದ್ಯಾಸಾಗರ್ರವರ ಸಾವಿರ ಮೂತರ್ಿಗಳನ್ನು ಉರುಳಿಸಬಹುದು ಆದರೆ ಅವರು ಕೇವಲ ಮೂತರ್ಿಗೆ ಸೀಮಿತವಾಗಿಲ್ಲ, ಅವರ ವಿಚಾರಗಳು ಈ ದೇಶದ ಜನಗಳ ಹೃದಯದಲ್ಲಿ ಬೇರೂರಿವೆ.
ಅವುಗಳನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕೂಡಲೇ ಅಪರಾಧಿಗಳನ್ನು ಬಂಧಿಸಿ ಉಗ್ರಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎರಡು ಸಂಘಟನೆಗಳ ಮುಖಂಡರಾದ ವಿಜಯಲಕ್ಷ್ಮಿ ದೇವತ್ಕಲ್, ಗಂಗಾ ಕೋಕರೆ, ನಿಂಗಮ್ಮ ಹುಡೇದ, ದೇವಮ್ಮ ದೇವತ್ಕಲ್, ಸಿಂಧು ಕೌದಿ, ಶಶಿಕಲಾ ಮೇಟಿ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾಥರ್ಿಗಳು ಭಾಗವಹಿಸಿದ್ದರು.