ಕಾರವಾರ ಸಂಡೇ ಮಾರ್ಕೆ ಟ್ ಮೀನುಗಾರರ ವಶಕ್ಕೆ : ಅಧಿಕ ಪೊಲೀಸರ ಜಮಾವಣೆ ನೂತನ ಮಾರುಕಟ್ಟೆ ನಿಮರ್ಿಸಿ ಕೊಡದ್ದಕ್ಕೆ ಪ್ರತಿಭಟನೆ - ಕಾಮಗಾರಿ ಆರಂಭಿಸದಿದ್ದರೆ ಮತ್ತೆ ಹೋರಾಟದ ದಾರಿ

ಕಾರವಾರ, 3: ಇಲ್ಲಿನ ನಗರಸಭೆ ಐಡಿಎಸ್ಎಂಟಿ ಯೋಜನೆ ಅಡಿ ನೂತನ ವಾಣಿಜ್ಯ ಸಂಕೀರ್ಣ ಹಾಗೂ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ನಿಮರ್ಿಸಿಕೊಡಲು ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ನೂರಾರು ಜನ ಮೀನು ಮಾರಾಟ ಮಹಿಳೆಯರು ನಗರದ ಸಂಡೇ ಮಾಕರ್ೆಟ್ನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮೀನು ಮಾರಾಟದಲ್ಲಿ ತೊಡಗಿದರು. ಈ ಹಠಾತ್ ಪ್ರತಿಭಟನೆಯನ್ನು ಕಂಡ ಸಂಡೇ ಮಾರುಕಟ್ಟೆಯ ಅಂಗಡಿ ವ್ಯಾಪಾರಿಗಳು ತಮ್ಮ ಶಾಪ್ಗಳನ್ನು ಮುಚ್ಚಿದರು. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದರು. ಮೀನುಗಾರ ಮಹಿಳೆಯರು ಶಾಂತಿಯುತ ಪ್ರತಿಭಟನೆ ಮಾಡಿ ನಗರಸಭೆ ಮತ್ತು ಜಿಲ್ಲಾಡಳಿತದ ಗಮನ ಸೆಳೆದರು. 

ನೂತನ ಮೀನು ಮಾರುಕಟ್ಟೆ ನಿರ್ಮಾ ಣಕ್ಕೆ ಸಹಕರಿಸಲು ಮೂಲ ಮೀನು ಮಾರುಕಟ್ಟೆಯನ್ನು ಬಿಟ್ಟುಕೊಟ್ಟೆವು. ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಪಕ್ಕ ಕಟ್ಟಿಕೊಟ್ಟ ತಾತ್ಕಲಿಕ ಮೀನು ಮಾರುಕಟ್ಟೆಯಲ್ಲಿ 3 ವರ್ಷ ಕಳೆದಿದ್ದೇವೆ. ಎರಡು ವರ್ಷದಲ್ಲಿ ಪೂರ್ಣಗೊಳ್ಳಬೇಕಿದ್ದ ಮೀನು ಮಾರುಕಟ್ಟೆ ಇನ್ನು ಪೂರ್ಣವಾಗಿಲ್ಲ. ಮೀನು ಮಾರಾಟ ಮಾಡಲು ಗ್ರೌಂಡ್ ಪ್ಲೋರ್ ಮಾತ್ರ ಸಿದ್ಧ ಮಾಡಿಕೊಡಬಹುದು. ಅದನ್ನು ಸಹ ನಗರಸಭೆ ಮಾಡುತ್ತಿಲ್ಲ ಎಂದು ಮೀನು ಮಾರಾಟ ಮಹಿಳೆಯರು ಆಕ್ಷೇಪಿಸಿದರು. 130 ವರ್ಷ ಹಳೆಯದಾದ  ಗಾಂಧಿ ಮಾರುಕಟ್ಟೆಗೆ ಹೊಂದಿಕೊಂಡ ಸಂಡೇ ಮಾಕರ್ೆಟ್ ಬದಿಯಲ್ಲಿ ಮೀನು ಮಾರಾಟ ಮಾಡುತ್ತೇವೆ. ರಾಷ್ಟ್ರೀಯ ಹೆದ್ದಾರಿ ಪಕ್ಕ ಮಳೆಗಾಲದಲ್ಲಿ ಮೀನು ಮಾರಾಟ ಕಷ್ಟ. ಅಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ರಾಷ್ಟ್ರೀಯ ಹೆದ್ದಾರಿ ದಾಟಿ ತಾತ್ಕಲಿಕ ಮೀನು ಮಾರುಕಟ್ಟೆಗೆ ಬರುವುದು ಕಷ್ಟ. ಹಾಗಾಗಿ ಸಂಡೇ ಮಾರುಕಟ್ಟೆಯಲ್ಲಿ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಿ. ನೂತನವಾಗಿ ಕಟ್ಟುತ್ತಿರುವ ಮೀನು ಮಾರುಕಟ್ಟೆಯನ್ನು ಬೇಗನೇ ಸಿದ್ದ ಮಾಡಿಕೊಡಿ ಎಂದು ಜಿಲ್ಲಾಡಳಿತದ ಎದುರು ಮೀನುಗಾರ ಮಹಿಳೆಯರು ಬೇಡಿಕೆ ಇಟ್ಟರು. 

ಬೇಡಿಕೆ ಈಡೇರುವತನಕನ ಸಂಡೇ ಮಾರುಕಟ್ಟೆ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ನಗರಸಭೆಯ ಅಧಿಕಾರಿಗಳ ಮಾತನ್ನು ಮೀನುಗಾರ ಮಹಿಳೆಯರು ಕೇಳಲು ಸಿದ್ಧರಿರಲಿಲ್ಲ, ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಸ್ಥಳಕ್ಕೆ ಆಗಮಿಸಿ ಮಾರುಕಟ್ಟೆ ವಿಸ್ತರಿಸದಂತೆ ಕೆಲ ಅಂಗಡಿಕಾರರು ಕೋರ್ಟ ಮೆಟ್ಟಿಲು ಹತ್ತಿದ್ದಾರೆ. ಕೋರ್ಟನಲ್ಲಿ ಇರುವ ತಡೆಯಾಜ್ಞೆ ತೆರವಿಗೆ ಮುಂದಿನ ತಿಂಗಳಲ್ಲಿ ಪ್ರಯತ್ನಿಸಲಾಗುವುದು ಎಂದರು. ಅದಷ್ಟು ಬೇಗ ಮೀನು ಮಾರಾಟಕ್ಕೆ ನೂತನ ಕಟ್ಟಡವನ್ನು ಸಜ್ಜು ಮಾಡಿಕೊಡುವಂತೆ ಮೀನು ಮಾರಾಟ ಮಾಡುವವರು ಆಗ್ರಹಿಸಿದಾಗ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಶಾಸಕಿಯನ್ನು ಭೇಟಿ ಮಾಡಲು ಇಚ್ಚಿಸದ ಪ್ರತಿಭಟನಾಕಾರರು:

ಈ ವೇಳೆ ಪ್ರತಿಭಟನಾಕಾರರನ್ನು ಭೇಟಿಯಾಗಲು ಶಾಸಕಿ ರೂಪಾಲಿ ನಾಯ್ಕ ಆಗಮಿಸಿದರಾದರೂ, ಅವರನ್ನು ಭೇಟಿ ಮಾಡಲು ಮೀನುಗಾರ ಮಹಿಳೆಯರು ಬಯಸಲಿಲ್ಲ. ನೂತನವಾಗಿ ನಿಮರ್ಿಸುತ್ತಿರುವ ಮೀನು ಮಾರುಕಟ್ಟೆಯನ್ನು ಮೀನುಗಾರ ಮಹಿಳೆಯರು ಕುಳಿತುಕೊಳ್ಳುವಂತೆ ಕಟ್ಟಡದ ಒಳಗಿನ ಕೆಲಸವನ್ನು ಗುತ್ತಿಗೆದಾರರಿಂದ ನಾಳೆಯೇ ಪ್ರಾರಂಭಿಸಬೇಕು. ನಮಗೆ ಬೇಕಾದ ಸ್ಥಳವನ್ನು ಬೇಗನೆ ಸಿದ್ಧಮಾಡಿಕೊಡಬೇಕು. ಹಾಗಾದರೆ ಮಾತ್ರ ಪ್ರತಿಭಟನೆ ಹಿಂತೆಗೆಯುತ್ತೇವೆ. ಇಲ್ಲದೇ ಹೋದಲ್ಲಿ ನಾಳೆಯೂ ಸಹ ಸಂಡೇ ಮಾರುಕಟ್ಟೆಯಲ್ಲಿ , ನಗರದ ಮುಖ್ಯ ರಸ್ತೆಯ ಬದಿಗಳಲ್ಲಿ ಮೀನು ಮಾರಾಟ ಮಾಡಲಾಗುವುದು ಎಂದು ಮೀನುಗಾರ ಮಹಿಳೆಯರ ಸಂಘಟನೆಯ ಮುಖ್ಯಸ್ಥರು ಮತ್ತು ಪ್ರತಿಭಟನೆಯ ನೇತೃತ್ವವಹಿಸಿದ್ದ ಮಹಿಳೆಯರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಕಳೆದ ಮೂರು ವರ್ಷಗಳಿಂದ ಶೀಘ್ರವಾಗಿ ಮೀನು ಮಾರುಕಟ್ಟೆ ಸಿದ್ಧ ಮಾಡಿಕೊಡಿ ಎಂದು ಮನವಿ ಮಾಡುತ್ತಲೇ ಬಂದಿದ್ದೇವೆ. ನಮ್ಮ ಬೇಡಿಕೆ ನಿರ್ಲಕ್ಷಿಸಿದ ಕಾರಣ ಇಂದು ಪ್ರತಿಭಟನೆಗೆ ಇಳಿಯಬೇಕಾಯಿತು. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾರ್ಯ ನಡೆದಿದೆ.ಅಲ್ಲಿ ತಾತ್ಕಲಿಕ ಮೀನು ಮಾರುಕಟ್ಟೆಗೆ ಗ್ರಾಹಕರು ಬರುವುದು ಕಷ್ಟ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಅರಿತುಕೊಳ್ಳಬೇಕಿತ್ತು ಎಂದು ಪ್ರತಿಭಟನಾಕಾರರು ಅಳಲು ಕೇಳಲು ಬಂದವರಿಗೆ ತಿವಿದರು.