ನವದೆಹಲಿ, ಡಿ16 ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ ದೇಶದ ಅನೇಕ ಕಡೆ
ಹಿಂಸಾಚಾರಕ್ಕೆ ತಿರುಗಿ, ಕಾನೂನು ಕೈಗೆತ್ತಿಕೊಂಡಿರುವುದು ಬಹಳ ನೋವಿನ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೇಂದ್ರದ ಕಾಯ್ದೆಯ ವಿರುದ್ಧದ
ಪ್ರತಿಭಟನೆ ದೆಹಲಿ ಬೆಂಗಳೂರು ಮತ್ತು ಮುಂಬೈನಲ್ಲಿ ಸೇರಿದಂತೆ ಅನೇಕ ಕಡೆ ವ್ಯಾಪಿಸಿದ್ದು, ತೀವ್ರವಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿಯ ಜಾಮಿಯಾ
ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಭಾನುವಾರ ಪೊಲೀಸರು ಕ್ಯಾಂಪಸ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ,
ನಂತರ ಅಶ್ರುವಾಯು ಸಿಡಿಸಿದ ಘಟನೆ, ಮತ್ತು ಘರ್ಷಣೆಯಲ್ಲಿ ಕನಿಷ್ಠ 100 ಜನರು ಗಾಯಗೊಂಡಿದ್ದಾರೆ."ಪೌರತ್ವ
ತಿದ್ದುಪಡಿ ಕಾಯ್ದೆಯ ಮೇಲಿನ ಹಿಂಸಾತ್ಮಕ ಪ್ರತಿಭಟನೆ ದುರದೃಷ್ಟಕರ ಮತ್ತು ದುಃಖಕರ ಸಂಗತಿ. ಚರ್ಚೆ ಮತ್ತು ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದಲ್ಲಿ ಸಹಜ, ಅತ್ಯಗತ್ಯ ಭಾಗ
ಆದರೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ
ಮಾಡಿ ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ, ಸಮಂಜಸವೂ
ಅಲ್ಲ ಎಂದೂ ಪ್ರಧಾನಿ
ಮೋದಿ ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.