ಧಾರವಾಡ 29: ಮಕ್ಕಳಿಗೆ ಅವರ ಮೂಲಭೂತ ಹಕ್ಕುಗಳು ಅವರಿಗೆ ಸಿಗಲೆಬೇಕು. ಸರಕಾರ, ಪಾಲಕರು, ಹಾಗೂ ಸಮಾಜದ ಇನ್ನುಳಿದವರು ಮಕ್ಕಳಿಗೆ ಅವರ ಹಕ್ಕುಗಳು ಕೊಡುವುದು ಹಾಗೂ ಕೊಡಿಸುವುದು ಅವರ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದಶರ್ಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಚಿಣ್ಣನ್ನವರ ಆರ್.ಎಸ್. ಹೇಳಿದರು.
ಅವರು ದಿ. 28ರಂದು ಮದ್ಯಾಹ್ನ ಯರಿಕೊಪ್ಪ ಗ್ರಾಮ ಪಂಚಾಯತ ಸಮುದಾಯ ಭವನದಲ್ಲಿ ಬಿ.ಡಿ.ಎಸ್.ಎಸ್ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿ- 1098 ಇವುಗಳ ಸಂಯುಕ್ತ ಆಶ್ರಯದಲ್ಲಿ ತೆರೆದ ಮನೆ ಮತ್ತು ಅರಿವಿನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಮಕ್ಕಳು ತಮ್ಮ ಹಕ್ಕುಗಳು ಪಡೆದುಕೊಳ್ಳುವಲ್ಲಿ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ತಿಳಿಸಬೇಕು. ಜೊತೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ಸಹ ನೇರವಾಗಿ ಸಂಪಕರ್ಿಸಬಹುದು. ಪಾಲಕರು ತಮ್ಮ ಮಕ್ಕಳ ಮೂಲಭೂತ ಹಕ್ಕುಗಳನ್ನು ಅನುಭವಿಸಲು ಅವಕಾಶ ಮಾಡುವದರೊಂದಿಗೆ ಇತರ ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗದಂತೆ ಜಾಗೃತಿವಹಿಸಬೇಕೆಂದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ ಅವರು ಮಾತನಾಡಿ, ಮಕ್ಕಳು ಒಳ್ಳೆಯ ಆರ್ದಶಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ವಯಕ್ತಿಕ ಅಥವಾ ಕೌಟಂಬಿಕ ಹಾಗೂ ಸಾಮಾಜಿಕ ತೊಂದರೆಗಳು ಉಂಟಾದರೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತಮ್ಮ ದೂರು ದಾಖಲಿಸಬೇಕು. ಮತ್ತು ಅಲ್ಲಿಂದ ಕಾನೂನು, ರಕ್ಷಣೆ ಹಾಗೂ ಸಮಾಲೋಚನೆಯ ಸಹಾಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇನ್ನೊರ್ವ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಅವರು ಮಾತನಾಡಿ, ಮಕ್ಕಳ ಸಹಾಯವಾಣಿ-1098 ತೆರೆದ ಮನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬ ಖುಷಿಯ ಕೆಲಸ, ಮಕ್ಕಳು ಯಾವುದೇ ಸಂಕಷ್ಠದಲ್ಲಿದ್ದರೂ ಸಹಾಯವಾಣಿ 1098ಕ್ಕೆ ಕರೆ ಮಾಡಿ, ಇದರ ಲಾಛವನ್ನ ಪಡೆಯಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಬಿ.ಡಿ.ಎಸ್.ಎಸ್.ಸಂಸೆ,್ಥಯ ಸಹ ನಿದರ್ೇಶಕ ಫಾದರ್ ಪೀಟರ್, ಸರಕಾರಿ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಂಕ್ರಪ್ಪ ಅಮ್ಮೀನಭಾವಿ, ಸದಸ್ಯರಾದ ಎಸ್. ಹೆಚ್. ಕಾಳೆ, ಮುಖ್ಯೋಪಾಧ್ಯಾಯ ಹೊನ್ನಕೊರೆಣ್ಣವರ, ಶಿಶು ಅಭಿವೃದ್ಧಿ ಯೋಜನೆಯ ಗ್ರಾಮೀಣ ಮೇಲ್ವಿಚಾರಕಿ ಲಕ್ಷ್ಮೀ, ಗ್ರಾಮ ಪಂಚಾಯತ ಸದಸ್ಯ ಮಧು ಪಾಟೀಲ, ಗಂಗಪ್ಪ ಪಾಟೀಲ್, ಶಂಕ್ರಪ್ಪ ಬೈಲವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಸೇರಿದಂತೆ ಒಟ್ಟು 400 ಕ್ಕಿಂತ ಹೆಚ್ಚು ಮಕ್ಕಳು, ಗ್ರಾಮಸ್ಥರು ಭಾಗವಹಿಸಿದರು.
ಉಮಾ ರೊಟ್ಟಿಗವಾಡ ಸ್ವಾಗತಿಸಿದರು. ಚಂದ್ರಶೇಕರ ರಾಹುತರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಸಹಾಯವಾಣಿ 1098 ಕಾರ್ಯಕತರ್ೆ ಆನಂದ ಸವಣೂರ ನಿರೂಪಿಸಿದರು. ದ್ರಾಕ್ಷಯಣಿ ವಂದಿಸಿದರು.