ಲಿಬಿಯಾ ಕರಾವಳಿ ಪಡೆಯಿಂದ 81 ವಲಸಿಗರ ರಕ್ಷಣೆ

ಟ್ರಿಪೋಲಿ, ಫೆ 12:   ಲಿಬಿಯಾದ ಕರಾವಳಿ ಕಾವಲು ಪಡೆ ದೇಶದ ಪಶ್ಚಿಮ ಕರಾವಳಿಯಲ್ಲಿ 81 ವಲಸಿಗರನ್ನು ರಕ್ಷಿಸಿದೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ ಇನ್ ಲಿಬಿಯಾ (ಐಒಎಂ ಲಿಬಿಯಾ) ತಿಳಿಸಿದೆ.

  "ಕಳೆದ ರಾತ್ರಿ, 81 ವಲಸಿಗರು, ಅವರ ಪೈಕಿ  18 ಮಹಿಳೆಯರು ಮತ್ತು 4 ಮಕ್ಕಳನ್ನು ಲಿಬಿಯಾದ ಕೋಸ್ಟ್ ಗಾರ್ಡ್ ಟ್ರಿಪೊಲಿಗೆ ಹಿಂತಿರುಗಿಸಲಾಗಿದೆ  ಎಂದೂ  ಐಒಎಂ ಲಿಬಿಯಾ ಮಂಗಳವಾರ ಟ್ವೀಟ್ ಮಾಡಿದೆ.

ಮಾಜಿ ನಾಯಕ ಮುಅಮ್ಮರ್ ಗಡಾಫಿಯನ್ನು ಉರುಳಿಸಿದ 2011 ರ ದಂಗೆಯ ನಂತರ ಉತ್ತರ ಆಫ್ರಿಕಾದ ದೇಶದಲ್ಲಿನ ಅಭದ್ರತೆ ಮತ್ತು ಅವ್ಯವಸ್ಥೆಯಿಂದಾಗಿ ಮೆಡಿಟರೇನಿಯನ್ ಸಮುದ್ರವನ್ನು  ದಾಟಬೇಕೆಂದು ಆಶಿಸುತ್ತಿರುವ ವಲಸಿಗರಿಗೆ ಲಿಬಿಯಾ ಆದ್ಯತೆಯ ನಿರ್ಗಮನ ಕೇಂದ್ರವಾಗಿದೆ.

600,000 ಕ್ಕೂ ಹೆಚ್ಚು ವಲಸಿಗರು ಲಿಬಿಯಾದಲ್ಲಿದ್ದು, ಅವರಿಗೆ  ಸಹಾಯದ ಅಗತ್ಯವಿದೆ ಎಂದು ಐಒಎಂ ಲಿಬಿಯಾ ಈ ಹಿಂದೆ ಹೇಳಿದೆ.

  2019 ರಲ್ಲಿ 110,000 ಕ್ಕೂ ಹೆಚ್ಚು ವಲಸಿಗರು ಮೆಡಿಟರೇನಿಯನ್ ಮೂಲಕ ಯುರೋಪಿಗೆ ತೆರಳಿದ್ದಾರೆ.   ಇವರ ಪೈಕಿ 1ಸಾವಿರದ ,283 ಜನರು ದಾರಿಯಲ್ಲೇ  ಸಾವನ್ನಪ್ಪಿದ್ದಾರೆ ಎಂದೂ  ಐಒಎಂ ಹೇಳಿದೆ.