ಮಕ್ಕಳ ಆರೋಗ್ಯ ಕಾಪಾಡುವುದು ತಾಯಂದಿರ ಜವಾಬ್ದಾರಿ : ಶಿವಣ್ಣನವರ

ಬ್ಯಾಡಗಿ 01: ಮಕ್ಕಳ ಆರೋಗ್ಯ ಕಾಪಾಡುವುದರಲ್ಲಿ ತಾಯಂದಿರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅದು ಅವರ ಜವಾಬ್ದಾರಿಯೂ ಆಗಿದೆ ಎಂದು  ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.ಇಂದು ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ.ತಾಲೂಕು ಪಂಚಾಯತ್‌.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಪೌಷ್ಠಿಕತೆ ಸಪ್ತಾಹ ಮತ್ತು ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಸಪ್ತಾಹ ಅಂಗವಾಗಿ ನಡೆದ ’ಪೊ?ಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಭೇಟಿ ಬಚಾವೋ ಬೇಟೆ ಪಡಾವೂ ಕಾರ್ಯಕ್ರಮ ಮತ್ತು ಬಾಲ್ಯ ವಿವಾಹ ನಿಷೇಧ ಕಾರ್ಯಕ್ರಮವನ್ನು  ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ .ಮಹಿಳೆಯರು ಗರ್ಭಿಣಿಯರಾದ ಸಂದರ್ಭದಲ್ಲಿಪೌಷ್ಟಿಕಾಂಶ ಆಹಾರ ಸೇವನೆ ಅಗತ್ಯವಾಗಿದ್ದು, ಅದನ್ನು ಸೇವನೆ ಮಾಡದೇ ನಿರ್ಲಕ್ಷತ್ರ್ಯ ವಹಿಸಿದರೆ ಹುಟ್ಟುವ ಮಕ್ಕಳ ತೂಕ ಕಡಿಮೆಯಾಗುತ್ತದೆ.  

ಅಪೌಷ್ಠಿಕತೆಯಿಂದ ಮಕ್ಕಳು ನಲುಗಿ ರಕ್ತಹೀನತೆಯಿಂದ ಬಳಲುವ ಸಾಧ್ಯತೆಯಿದೆ, ತಾಯಂದಿರು ಕೂಡಾ ಹೆರಿಗೆ ಸಮಯದಲ್ಲಿತೀವ್ರ ರಕ್ತಸ್ರಾವದಿಂದ ಬಳಲಬೇಕಾಗುತ್ತದೆ ಎಂದರು.ತಾಯಂದಿರು ಮತ್ತು ಮಕ್ಕಳ ಅಪೌಷ್ಟಿಕತೆಯನ್ನು ನಿವಾರಣೆ ಮಾಡಲು ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿಮಧ್ಯಾಹ್ನದ ಬಿಸಿಯೂಟ, ತರಕಾರಿ, ಹಾಲು, ಬೇಯಿಸಿದ ಮೊಟ್ಟೆ ವಿತರಣೆ ಮಾಡಲಾಗುತ್ತದೆ, ಇದರಲ್ಲಿಯಾವುದೇ ಜಾತಿ ಭೇದದ ಪ್ರಶ್ನೆ ಬರುವುದಿಲ್ಲ. ನೇರವಾಗಿ ಕೇಂದ್ರಕ್ಕೆ ಗರ್ಭಿಣಿಯರು, ಬಾಣಂತಿಯರು ತೆರಳಿ, ಊಟ ಪಡೆಯಬೇಕು, ಇದರಿಂದ ಹುಟ್ಟುವ ಮಕ್ಕಳು ಆರೋಗ್ಯವಾಗಿ ಬೆಳೆಯುತ್ತವೆ, ಈ ಕಾರ್ಯಕ್ರಮದ ಯಶಸ್ಸಿನಲ್ಲಿಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದರು.ಎದೆಹಾಲು ಕುಡಿಸಿ; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರ್ದೇಶಕ ಆಲದಾರ್ತಿ ಮಾತನಾಡಿ, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿರುವ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಇಲಾಖೆಯಿಂದ 4 ವಾರಗಳ ಕಾಲ ರಾಷ್ಟ್ರೀಯ ಪೌಷ್ಟಿಕತೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ, ತಾಯಂದಿರು ತಮ್ಮ ಮಕ್ಕಳಿಗೆ ಕನಿಷ್ಠ 2 ವರ್ಷದವರೆಗಾದರೂ ಎದೆಹಾಲು ಕುಡಿಸಬೇಕು, ಇದರಿಂದ ಮಕ್ಕಳಲ್ಲಿರಕ್ತಹೀನತೆ, ಅತಿಸಾರ ಭೇದಿ ಸಮಸ್ಯೆ ನಿವಾರಣೆಯಾಗುತ್ತದೆ, ಪ್ರಧಾನಮಂತ್ರಿ ಮಾತೃವಂದನಾ, ಮುಖ್ಯಮಂತ್ರಿ ಮಾತೃಶ್ರಿ ಯೋಜನೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.4 ಮಂದಿ ಗರ್ಭಿಣಿಯರಿಗೆ ಸೀಮಂತಪೊ?ಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ4 ಮಂದಿ ಗರ್ಭಿಣಿಯರಿಗೆ ವೇದಿಕೆಯಲ್ಲಿಕೂರಿಸಿ ಸೀಮಂತ ಮಾಡಿದ್ದು ವಿಶೇಷತೆಯಾಗಿತ್ತು. ಬಾಳೆಹಣ್ಣು,  ರವಿಕೆಬಟ್ಟೆ, ಕುಂಕುಮ ಅರಿಶಿನ, ಬಳೆ, ಹೂ ಮುಡಿಸುವ ಮೂಲಕ ಶಾಸಕರ  ಅವರ ಸಮ್ಮುಖದಲ್ಲಿಸೀಮಂತ ಕಾರ್ಯಕ್ರಮ ನಡೆಯಿತು. 

ಇದೇ ವೇಳೆ ಬೇಟಿ ಬಚಾವೋ ಬೇಟೆ ಪಡಾವೂ ಕಾರ್ಯಕ್ರಮ ನಿಮಿಊ ಒಂದು ವರ್ಷದ ಹೆಣ್ಣು ಮಗುವಿನ ಜೊತೆ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತುವಸ್ತು ಪ್ರದರ್ಶನ; ಸಭಾಂಗಣದ ಒಳಾಂಗಣದಲ್ಲಿಅಂಗನವಾಡಿ ಕೇಂದ್ರಗಳಲ್ಲಿಮಾತೃವಂದನಾ ಯೋಜನೆಯಡಿ ವಿತರಣೆ ಮಾಡಲಾಗುವ ತರಕಾರಿ ಸೊಪ್ಪು, ಮೊಳಕೆಕಟ್ಟಿದ ಹೆಸರುಕಾಳು, ಮೊಟ್ಟೆ, ನಾನಾತರಹದ ಪಾನೀಯ, ಕಡಲೆಕಾಯಿ ಡಾಮ್ಟಿ, ರೊಟ್ಟಿ, ಸಪ್ಪಸೀಗೆ ಸೊಪ್ಪಿನ ಚಪಾತಿ, ಕಡಲೆ ಉಂಡೆಗಳ.ಮಕ್ಕಳ ರಾಗಿ ಮಾಲ್ಟ್‌ .ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು. ಉದ್ಘಾಟನಾ ಕಾರ್ಯಕ್ರಮದ ಶಾಸಕ ಬಸವರಾಜ ಶಿವಣ್ಣನವರ ಹಾಗೂ ಬಾಲಚಂದ್ರ ಗೌಡ ಪಾಟೀಲ.ಎಸ್ ಆರ್ ಪಾಟೀಲ್ ಸೇರಿದಂತೆ ವೇದಿಕೆಯ ಗಣ್ಯರು ವಸ್ತುಪ್ರದರ್ಶನ ವಿ?ಕ್ಷಿಸಿದರು.ಈ ಸಂದರ್ಭದಲ್ಲಿ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ್ ಕೆ ಎಂ ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಯಪ್ಪ ಗೋಳ. ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ಚತ್ರದ.  ಶಂಭನಗೌಡ ಪಾಟೀಲ್‌. ತಹಶೀಲ್ದಾರ್ ಫೀರೋಜ ಷಾ ಸೋಮನಕಟ್ಟಿ. ಸುಭಾಷ್ ಮಳಗಿ ಸರೋಜ ಉಳ್ಳಾಗಡ್ಡಿ ಉಮೇಶ್ ನಾಯಕ್ ಖಾದರ್ ಸಾಬ್ ದೊಡ್ಮನಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿ ವೈ ಟಿ ಪೂಜಾರ್‌. ಹಾಗೂ ಪುರಸಭೆಯ ಸದಸ್ಯರು ಮತ್ತು ಮಕ್ಕಳ ಮತ್ತು ಮಹಿಳಾ ಶಿಶು ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆರು ಮುದ್ದು ಮಕ್ಕಳು ಉಪಸ್ಥಿತರಿದ್ದರು.