ಮಣ್ಣಿನ ಫಲವತ್ತತೆಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ: ಡಾ. ಎನ್.ಆರ್ ಸಾಲೀಮಠ
Protecting soil fertility is everyone's duty: Dr. N.R. Salimath
ಘಟಪ್ರಭಾ 24 : ಇಂದಿನ ದಿನಮಾನಗಳಲ್ಲಿ ನಶಿಸುತ್ತಿರುವ ಭೂಮಿಯ ಸಂರಕ್ಷಣೆ ಮತ್ತು ಮಣ್ಣಿನ ಫಲವತ್ತತೆಯ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ತುಕ್ಕಾನಟ್ಟಿ ಬರ್ಡ್ಸ ಕೆ ವಿ ಕೆ ಯ ಡಾಕ್ಟರ್ ಎನ್ ಆರ್ ಸಾಲೀಮಠ ಅವರು ಹೇಳಿದರು. ಅವರು ಸಾವಳಗಿ ನಂದಗಾಂವ (ಮುತ್ನಾಳ) ಗ್ರಾಮದಲ್ಲಿ ಜೈ ಜವಾನ್ ಜೈ ಕಿಸಾನ್ ಕೃಷಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಬಾಪುರ ಖನಗಾಂವ ದವರು ಶ್ರೀ ಮಹಾಲಕ್ಷ್ಮಿ ಸಹಕಾರಿ ಸಂಸ್ಥೆಯ ಆವರಣದಲ್ಲಿ ಏರಿ್ಡಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಘಟಪ್ರಭಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತವಿ ಮಹಾಜನ ಮಾತನಾಡಿ ಯಾರಾದರೂ ನಮಗೆ ಸಣ್ಣ ಸಹಾಯ ಮಾಡಿದರೆ ನಾವು ಅವರಿಗೆ ಎಷ್ಟೋ ಬಾರಿ ಧನ್ಯವಾದಗಳನ್ನು ತಿಳಿಸುತ್ತೇವೆ ಜೀವನ ಪರ್ಯಂತ ನಮ್ಮನ್ನು ಸಂರಕ್ಷಣೆ ಮಾಡುವ ಭೂಮಿ ತಾಯಿಯ ಋಣ ಎಷ್ಟು ಮಾಡಿದರು ಕಡಿಮೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಈಶ್ವರ ಭಾಗೋಜಿಯವರು ಮಾತನಾಡಿ ಕೃಷಿ ಗ್ರಾಮೀಣ ಅಭಿವೃದ್ಧಿ ಜೊತೆಗೆ ವಿಧವೆಯರು ಅಂಗವಿಕಲರ, ದೀನ ದುರ್ಬಲರ ಕಲ್ಯಾಣ ಕ್ಕಾಗಿ ಶೃಮವಹಿಸುತ್ತಿದೆ ಅದಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ಶಂಕರ ಕೋರೆ ವಿಜಯಕುಮಾರ್ ಮಗದುಮ್ ಮುಂತಾದವರು ಸಾವಯವ ಕೃಷಿ ಕುರಿತು ಮಾತನಾಡಿದರು.ಅತಿಥಿಗಳಾಗಿ ನಂದಗಾಂವ ಮುತ್ನಾಳ ಗ್ರಾಮಪಂಚಾಯಿತಿ ಕಾರ್ಯದರ್ಶಿ ಹರ್ಷಾ ಸುಣಗಾರ, ಹಿರಿಯರಾದ ಮಲ್ಲಪ್ಪಾ ಕಾಡಪ್ಪಾ ಮಗದುಮ, ಕಾಡಗೌಡಾ ಗೌಡರ (ಪಾಟೀಲ), ಮುಂತಾದವರು ಹಾಜರಿದ್ದರು.
ನ್ಯಾಯವಾದಿಗಳಾದ ಕೀರ್ತಿ ವಿಜಯಕುಮಾರ್ ಮಗದುಮ್, ಕಾರ್ಯಕ್ರಮ ನಿರೂಪಿಸಿದರೆ,ಕಾರ್ಯದರ್ಶಿ ಮಾಧವಿ ಪಾಟೀಲ ವಂದನಾರೆ್ಣ ಸಲ್ಲಿಸಿದರು. ಶೋಭಾ ಈಶ್ವರ ಭಾಗೋಜಿ ಶೋಭಾ ಹುರಕಡ್ಲಿ ಹಾಗೂ ಸಾವಳಗಿ ನಂದಗಾಂವ ಮುತ್ನಾಳ ಖಾನಾಪುರ ಶಿವಾಪುರ ಗ್ರಾಮಗಳ ನಾಗರೀಕರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 