ಕುಡಿಯುವ ನೀರು ಸಂರಕ್ಷಿಸಿ: ಗ್ರಾಮ ಜಾಗೃತಿ
ಲೋಕದರ್ಶನ ವರದಿ
ಹಾವೇರಿ17: ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಹಾವೇರಿ ವತಿಯಿಂದ ಜನನಿ ಜಾನಪದ ಕಲಾ ತಂಡ ಯಕ್ಲಾಸಪುರ,ರಾಣೆಬೆನ್ನೂರು ಇವರಿಂದ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಗ್ರಾಮೀಣ ಭಾಗದ ಜನರಿಗೆ ಮತ್ತು ರೈತರಿಗೆ ಕುಡಿಯುವ ನೀರನ್ನು ಮಿತವಾಗಿ ಬಳಸಿ, ನೀರು ಪೊಲಾಗದಂತೆ ಸಂರಕ್ಷಿಸಿ, ಶೌಚಾಲಯ ಬಳಸಿ, ಇಂಗು ಗುಂಡಿಗಳನ್ನು ನಿಮರ್ಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಳ್ಳಿ, ಜಮೀನಿನ ಸುತ್ತಲೂ ಸಸಿಗಳನ್ನು ನೆಡಿ ಎಂದು ಜಾಗೃತಿ ಮೂಡಿಸಲಾಯಿತು. ರೈತರು ತಮ್ಮ ಜಮೀನಿನಲ್ಲಿ ಬದುಗಳನ್ನು ಹಾಕಿಸಿ, ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಕುರಿತು ಮಾಹಿತಿಯನ್ನು ನೀಡಿದರು. ಹಾಗೂ ವಿವಿಧ ಯೊ?ಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕೊನೆಯಲ್ಲಿ ರೈತ ಗೀತೆ, ಸ್ವಚ್ಛತಾ ಗೀತೆ ಹೇಳಲಾಯಿತು ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಶಿವಲಿಂಗಪ್ಪ ದಾಸಣ್ಣನವರ, ರಾಮಣ್ಣ ಬಂಕಾಪುರ, ವೀರನಗೌಡ ಲೆಕ್ಕನಗೌಡ್ರ, ಪಕ್ಕೀರಪ್ಪ ರಿತ್ತಿ ಮುಂತಾದವರು ಇದ್ದರು ಹಾಗೂ ಶಾಲಾ ವಿದ್ಯಾಥರ್ಿಗಳು, ಗುರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 