ರೈತ ದಿನದಂದು ಪ್ರಗತಿಪರ ರೈತನಿಗೆ ಸನ್ಮಾನ

ಲೋಕದರ್ಶನವರದಿ

ಗುಳೇದಗುಡ್ಡ:  1979 ರಲ್ಲಿ ಭಾರತದ 6 ನೇ ಪ್ರಧಾನಿಯಾಗಿದ್ದ ಚೌದರಿ ಚರಣಸಿಂಗ್ ಅವರು ಪ್ರಧಾನಿಹುದ್ದೆಯಲ್ಲಿದ್ದಾಗ ಅವರು ಇದಷ್ಟು ಕಾಲಾವಧಿಯಲ್ಲಿ ರೈತಪರ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ತೆಗೆದುಕೊಂಡ ಪ್ರಮುಖ ನಿಧರ್ಾರಗಳೇಲ್ಲವು ರೈತರ ಪರವಾಗಿದ್ದವು. ರೈತಪರ ಚಿಂತಕರಾಗಿ ರೈತರ ಹಿತಾಸಕ್ತಿಗಾಗಿ ಹಂಬಲಿಸುತ್ತಿದ್ದ ಚೌದರಿ ಚರಣಸಿಂಗ್ ಜನ್ಮದಿನವನ್ನೇ ರಾಷ್ಟ್ರದಾದ್ಯಂತ ರೈತದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಶಾಲೆಯ ಚೇರಮನ್ ಅಶೋಕ ಹೆಗಡೆ ಹೇಳಿದರು.

ಅವರು ಇಲ್ಲಿಯ ಪಿ.ಇ.ಟ್ರಸ್ಟ್ನ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಸಮೀಪದ ತೋಗುಣಸಿ ಗ್ರಾಮದ ರೈತ  ರೈತ ತಿಪ್ಪಣ್ಣ ಉಪ್ಪಾರ ಹೊಲಕ್ಕೆ ಹೋಗಿ ರೈತರ ಬೆಲೆಗಳನ್ನು ವಿಕ್ಷಿಸಿ ರೈತ ಬೆಳೆದ ಒಂದು ಎಕರೆ ಎಂಟು ಗುಂಟೆ ಜಮೀನಿನಲ್ಲಿ ಒಟ್ಟು ಹದಿನೆಂಟು ತರಹದ ಕಾಯಿಪಲ್ಲೆಗಳನ್ನು ಬೆಳೆದು ಸಾಧನೆಯನ್ನು ನೋಡಿ ಶಾಲೆಯ ಚೇರಮನ್ ಅಶೋಕ ಹೆಗಡೆ ವಿದ್ಯಾಥರ್ಿಗಳಿಗೆ ರೈತರ ದಿನಾಚರಣೆಬಗ್ಗೆ ವಿವರಿಸಿ ಹೇಳಿದರು.  

ರೈತ ಜಮೀನಿನಲ್ಲಿ ಬೆಳೆದ ಮೇಣಸಿನಕಾಯಿ, ಬದನಿಕಾಯಿ, ಟೋಮಾಟೋ, ಹೀರಿಕಾಯಿ, ಹಾಗಲಕಾಯಿ, ಬೆಳ್ಳೂಳ್ಳಿ, ಉಲ್ಲಾಗಡ್ಡಿ, ಮೂಲಂಗಿ, ಶೇಂಗಾ, ಅಲಸಂದಿ, ಬಂಡೆ, ಚವಳಿಕಾಯಿ, ಮೆಂತೆ ಸೊಪ್ಪು, ಪಾಲಕ ಸೊಪ್ಪು ಮುಂತಾದವುಗಳನ್ನು ನೋಡಿದರು. ತಿಂಗಳಿಗೆ ಸರಾಸರಿ 10 ರಿಂದ 12 ಸಾವಿರ ರೂಪಾಯಿಗಳ ವರೆಗೆ ಆದಾಯ ಬರುವುದಾಗಿರೈತ ತಿಳಿಸಿದನು.

 ಈ ತನ್ನ ಸಾಧನೆಗೆ ತಮ್ಮ ಮಗ ಹಾಗೂ ಹೆಂಡತಿಯ ಸಹಾಕರ ಇರುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ರೈತನನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಶಿಕ್ಷಕರಾದ.ಎ.ಜಿ. ಕವಡಿಮಟ್ಟಿ, ಬಸವರಾಜ ಯಳಮೇಲಿ, ಬಸವರಾಜ ನರಸಲಗಿ, ಸುರೇಶ ತಾಂಬೂರಿ, ಶ್ರೀದೇವಿ ಶೇಖಾ, ಸುಜಾತಾ ಲಿಂಗಸೂರು ಹಾಗೂ ಶಾಲೆಯ ವಿದ್ಯಾಥರ್ಿಗಳು ಉಪಸ್ಥಿತರಿದ್ದರು