ಪರಮಾನಂದ ಬೆಟ್ಟವನ್ನು ಡೀಮ್ಡ್‌ ಫಾರೆಸ್ಟಂದು ಪರಿಗಣಿಸಲು ಸರ್ಕಾರಕ್ಕೆ ಪ್ರಸ್ತಾವನೆ: ಬಿರಾದಾರ

ಪರಮಾನಂದ ಬೆಟ್ಟವನ್ನು ಡೀಮ್ಡ್‌ ಫಾರೆಸ್ಟಂದು ಪರಿಗಣಿಸಲು ಸರ್ಕಾರಕ್ಕೆ ಪ್ರಸ್ತಾವನೆ: ಬಿರಾದಾರ Proposal to Govt to consider Paramananda Hill as Deemed Forest: Biradara

ತಾಳಿಕೋಟೆ 07: ಐತಿಹಾಸಿಕ ಪರಮಾನಂದ ಬೆಟ್ಟವನ್ನು ದೈವಿ ವನವನ್ನಾಗಿಸಲು ಹಾಗೂ ಡೀಮ್ಡ್‌ ಫಾರೆಸ್ಟಂದು ಪರಿಗಣಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಿ.ಐ.ಬಿರಾದಾರ ತಿಳಿಸಿದರು. 

ಅವರು ತಾಲೂಕಿನ ಬ.ಸಾಲವಾಡಗಿಯ ಪರಮಾನಂದ ಬೆಟ್ಟದಲ್ಲಿ ನಮ್ಮ ಹೆಮ್ಮೆ ನಮ್ಮ ಸಾಲವಾಡಗಿ ಪರಿಸರ ಬಳಗ, ಗ್ರಾಮ ಪಂಚಾಯತಿ, ಅರಣ್ಯ ಇಲಾಖೆ ಹಾಗೂ ಪಟ್ಟಣದ ಹಸಿರು ಸಂಪದ ಬಳಗದ ಸಹಯೋಗದಲ್ಲಿ ನಡೆದ ವನಮಹೋತ್ಸವ, ನೂತನ ಪದಾಧಿಕಾರಿಗಳ ಪದಗ್ರಹಣ, ಹಾಗೂ ಪರಿಸರ ಪ್ರೇಮಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.  

ಮುಖ್ಯ ಉಪನ್ಯಾಸಕರಾಗಿದ್ದ ಸಾಹಿತಿ ಅಶೋಕ ಹಂಚಲಿ ಮಾತನಾಡಿ, ಮನುಷ್ಯನ ಜೀವನಕ್ಕೆ ಎಲ್ಲವನ್ನೂ ನೀಡುವ ಕಾಡು, ಬೆಟ್ಟ, ಪ್ರಕೃತಿ ಸಂಪತ್ತನ್ನು ರಕ್ಷಿಸುವುದರೊಂದಿಗೆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅವಶ್ಯಕತೆ ಇದೆ. ಇಲ್ಲಿ ವೈವಿಧ್ಯಮಯ ಓಷಧೀಯ ಸಸ್ಯ ಸಂಪತ್ತಿದ್ದು ಅದರ ರಕ್ಷಣೆಯಾಗಬೇಕು ಎಂದರು.  

ಹಸಿರು ಸಂಪದ ಬಳಗದ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಪ್ರೇಮಿ ಪ್ರಶಸ್ತಿಯನ್ನು ಅರಣ್ಯ ಇಲಾಖೆಯ ನಿವೃತ್ತ ಉಪ ಅರಣ್ಯ ವಲಯಾಧಿಕಾರಿ ಶಬ್ಬೀರ ಅಹಮ್ಮದ ಮಕಾನದಾರ ಹಾಗೂ ಬೆಂಗಳೂರಿನ ಬೋಶ್ ಗ್ಲೋಬಲ್ ಸಾಪ್ಟವೇರ್ ಟೆಕ್ನಾಲಜಿಸ್ನ ಇಂಜಿನಿಯರ್ ಶಿವರಾಮ ಪಾಟೀಲ ಅವರುಗಳಿಗೆ ನೀಡಿ ಗೌರವಿಸಲಾಯಿತು.  

ಸುಮಂಗಲಾ ಕೋಳೂರ, ಶ್ರೀಕಾಂತ ಪತ್ತಾರ ಹಾಗೂ ಸನ್ಮಾನಿತರು ಮಾತನಾಡಿದರು. ಹಸಿರು ಸಂಪದ ಬಳಗದ ಅಧ್ಯಕ್ಷ ಡಾ.ವಿ.ಎಸ್‌.ಕಾರ್ಚಿ ಅಧ್ಯಕ್ಷತೆ ವಹಿಸಿದ್ದರು. ಹಸಿರು ಸಂಪದ ಬಳಗದ ಪದಾಧಿಕಾರಿಗಳಿಗೆ ಅನಿಲಕುಮಾರ ಇರಾಜ ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು.   

ಅಪ್ಪಾಸಾಹೇಬಗೌಡ ಮೂಲಿಮನಿ ಸ್ವಾಗತಿಸಿದರು. ಅಜೀತ ಯಾಳಗಿ ನಿರ್ವಹಿಸಿದರು. ಎಸ್‌.ಎಸ್‌.ಗಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬರೀಶ ವಂದಿಸಿದರು.   

ಕೃಷಿ ಅಧಿಕಾರಿ ಮಹೇಶ ಜೋಶಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗಿರಿಶ ಹಲಕುಡೆ, ಡಿವೈಆರ್‌.ಎಫ್ ಓ ಸಂತೋಷ ಭಜಂತ್ರಿ, ಬೀಟ್ ಫಾರೆಸ್ಟರ ಗಳಾದ ಪ್ರವೀಣ, ವಿಠ್ಠಲ, ಯಲಗೂರ​‍್ಪ, ವಿನಾಯಕ, ಮಹಾಂತೇಶ, ಸಿಬ್ಬಂದಿ, ಗ್ರಾಮದ ಪ್ರಮುಖರು ಭಾಗವಹಿಸಿದ್ದರು. ಪರಮಾನಂದ ಗುಡ್ಡದಲ್ಲಿ ವನಮಹೋತ್ಸವದ ನಂತರ ಎತ್ತಿನ ಬಂಡಿ ಸವಾರಿ, ಬೆಟ್ಟದಲ್ಲಿ ಚಾರಣ ಹಿರಿಯರು ಮತ್ತು ಮಕ್ಕಳಿಗಾಗಿ             ಹಳ್ಳಿಯ ಆಟಗಳಾದ ಲಗೋರಿ, ಹಗ್ಗ ಜಗ್ಗಾಟ, ಪಣಿ ಚಂಡು, ಚಿನ್ನಿದಾಂಡು ಆಯೋಜಿಸಲಾಗಿತ್ತು. ಪರಿಸರ ಕುರಿತಾದ ಮಕ್ಕಳು ರಚಿಸಿರುವ ಚಿತ್ರಗಳ ಪ್ರದರ್ಶನದ ನಂತರ ವನಭೋಜನ ಜರುಗಿತು.   

ಪದಾಧಿಕಾರಿಗಳು: ಡಾ.ವಿ.ಎಸ್‌.ಕಾರ್ಚಿ(ಅಧ್ಯಕ್ಷ), ಜಿ.ಜಿ.ಮದರಕಲ್ಲ(ಗೌರವಾಧ್ಯಕ್ಷ), ರಾಜು ಹಂಚಾಟೆ,ವಾಸುದೇವ ಹೆಬಸೂರ, ಜೈಸಿಂಗ ಮೂಲಿಮನಿ, ಶಫೀಕ ಇನಾಮದಾರ, ಪ್ರಭುಗೌಡ ಮದರಕಲ್ಲ, ಆರಿ​‍್ವ.ಜಾಲವಾದಿ, ಜೈಸಿಂಗ ಮೂಲಿಮನಿ, ಸುಮಂಗಲಾ ಕೋಳೂರ(ಉಪಾಧ್ಯಕ್ಷರು) ಕಿರಣ ಬಡಿಗೇರ(ಪ್ರಧಾನ ಕಾರ್ಯದರ್ಶಿ).  

ಕಾಶಿನಾಥ ಸಜ್ಜನ(ಸಹಕಾರ್ಯದರ್ಶಿ)ಬಸವರಾಜ ಪಂಚಗಲ್ಲ, ಎಂ.ಎಸ್‌.ಹುಲ್ಲೂರ(ಸಹ ಖಜಾಂಚಿ), ಶರಣಬಸಪ್ಪ ಗಡೇದ(ಸಂಚಾಲಕ) ಸಂಗನಗೌಡ ಅಸ್ಕಿ, ಜೈಭೀಮ ಮುತ್ತಗಿ, ಪ್ರಶಾಂತ ಜನಾದ್ರಿ, ಯಲ್ಲೇಶ ದಾಯಪುಲೆ, ರಾಘವೇಂದ್ರ ವಿಜಾಪುರ, ವಿಜಯ ಕಲಾಲ(ಸಂಘಟನಾ ಕಾರ್ಯದರ್ಶಿಗಳು), ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಘಟಕ, ಯುವಘಟಕ ಮೊದಲಾದವರು ಇದ್ದರು