ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್‌: ಸೀರತ್ ಅಭಿಯನ ರಾಜ್ಯ ವ್ಯಾಪಿ ಆರಂಭ

ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್‌: ಸೀರತ್ ಅಭಿಯನ ರಾಜ್ಯ ವ್ಯಾಪಿ ಆರಂಭ Prophet Muhammad, the pioneer of justice: Seerat campaign begins statewide

ಕೊಪ್ಪಳ 03: ನ್ಯಾಯದ ಹರಿಕಾರ ಪ್ರವಾದಿ ಪೈಗಂಬರ್ ಮೊಹಮ್ಮದ್ ಸೀರತ್ ಅಭಿಯಾನ 2025, ಜಮಾತೆಇಸ್ಲಾಮಿ ಹಿಂದ್ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಇಂದಿನಿಂದರಾಜ್ಯ ವ್ಯಾಪಿ ಏಕಕಾಲಕ್ಕೆ ಆರಂಭಗೊಂಡಿದೆಎಂದುಕರ್ನಾಟಕ ಸಾಲಿಡಾರಿಟಿಯೂತ್ ಮೂಮೆಂಟ್ ಕಾರ್ಯದರ್ಶಿಯಾಗಿರುವ ಇಲಿಯಾಸ್ ನಾಲ್ ಬಂದ್‌ರವರು ಹೇಳಿದರು. ಬುಧವಾರ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದಅವರುಸೆ, 03 ರಿಂದ 14 ರವರೆಗೆರಾಜ್ಯವ್ಯಾಪಿ ಅಭಿಯಾನಆರಂಭಗೊಂಡಿದೆ.  

ದಿ. 03ರ ಬುಧವಾರದಂದು ಅಭಿಯಾನದ ಕಾಗೋಷ್ಠಿ ಗೋಷ್ಠಿಗಳು ನಡೆಸುವುದು ನಂತರ ಸಲಹಾ ಸಮಿತಿಯರಚನೆ ಮಾಡಲಾಗುವುದು ದಿ. 05ರ  ಶುಕ್ರವಾರ "ಪ್ರವಾದಿ ಮುಹಮ್ಮದರನ್ನು (ಸ) ಅರಿಯಿರಿ" ಮತ್ತು " ಭಾರತಿಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ (ಸ) ಆದರ್ಶದಓಚಿತ್ಯ" ಎರಡು ಪುಸ್ತಕಗಳ ಬಿಡುಗಡೆ. ಸಾಹಿತಿಗಳು, ವೈದ್ಯರು, ಪ್ರೋಫೆಸರ್ಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಣ್ಯರನ್ನು ಭೇಟಿಯಾಗಿಅಭಿಯಾನದ ಪರಿಚಯಿಸಿ ಪುಸ್ತಕ ನೀಡುವುದು. ಯು ಜಿ ಮತ್ತು ಪಿ ಜಿ ಮತ್ತು ಶಿಕ್ಷಕರಿಗಾಗಿ (ಪುರುಷ ಮತ್ತು ಮಹಿಳೆಯರು) ದಿ. 20ರ ಶನಿವಾರ ರೈಲ್ವೆ ಸ್ಟೇಷನ್‌ರಸ್ತೆಯಲ್ಲಿರುವ  ಮಸ್ಜಿದೆ ಆಲಾ ಸಭಾಂಗಣದಲ್ಲಿ ಮಧ್ಯಾಹ್ನ 03-00 ಗಂಟೆಗೆ ಪ್ರಬಂಧ ಸ​‍್ರ್ದೇಏರಿ್ಪಡಸಲಾಗಿದೆ. ಸೆ 03 ರಿಂದ 14 ರವರೆಗೆ ಸಾರ್ವಜಿಕ ಸ್ಥಳ, ವಾರ್ಡ್ಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು. ದಿ. 06ರ ಶನಿವಾರ ಜಿಲ್ಲಾಆಸ್ಪತ್ರೆಗೆ ರೋಗಿಗಳ ಆರೋಗ್ಯ ವಿಚಾರಣೆ ಮತ್ತು ಹಣ್ಣು ಹಂಪಲ ವಿತರಣೆ ಮಾಡಲಾಗುವುದು. ದಿ. 10ರ ಬುಧವಾರ ವೃದ್ಧಾಶ್ರಮಕ್ಕೆ ಭೇಟಿ, ಭಾಗ್ಯನಗರ, ಮುನಿರಾಬಾದ, ಗಿಣಿಗೇರಾ, ಕಿನ್ನಾಳ, ಗೊಂಡಬಾಳ, ಕುದರಿಮೋತಿ-ಮಂಗಳೂರು, ಹಾಲಳ್ಳಿ, ಕೋಳೂರು, ಹನಕುಂಟಿ ಮತ್ತು ಲಾಚನಕೇರಾ ಗ್ರಾಮಗಳಲ್ಲಿ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್(ಸ) ಸೀರತ್ ಅಭಿಯಾನ -2025 ರ ಪರಿಚಯಿಸುವುದು.  

ಅಭಿಯಾನದ ಪ್ರಯುಕ್ತ ಸನ್ಮಾರ್ಗ ವಾರಪತ್ರಿಕೆ ವಿಷೇಶಾಂಕ ಬಿಡುಗಡೆ ಮಾಡಲಾಗುವುದು, ಮಹಿಳೆಯರಿಗಾಗಿರುವ ಅನುಪಮಾ ಮಾಸ ಪತ್ರಿಕೆಯಿಂದ ವಿಷೇಶಾಂಕ ಬಿಡುಗಡೆ ಗೊಳಿಸಲಾಗುವುದು. ಈ ಅಭಿಯಾನಕ್ಕೆ ಸಾರ್ವಜನಿಕರು ಪಾಲ್ಗೊಂಡು ಪ್ರೋತ್ಸಾಹ ನೀಡಿಅಭಿಯಾನವು ಯಶಸ್ವಿಯಾಗಲು ಸಹಕರಿಸಬೆಕೆಂದು ಕರ್ನಾಟಕ ಸಾಲಿದಾರಿಟಿಯೂತ್ ಮುಮೆಂಟ್ ಕಾರ್ಯದರ್ಶಿಯಾಗಿರುವ ಇಲಿಯಾಸ್ ನಾಲ್ಬಂದ್ ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕರು ಭಾಗವಹಿಸಲು ಮನವಿ ಮಾಡಿ ಕೊಂಡಿದ್ದಾರೆ. ಜಮಾತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕದಅಧ್ಯಕ್ಷರಾದ ಸೈಯದ್ ಹಿದಾಯತ್ ಅಲಿ, ರಾಬ್ತಾ ಎ ಮಿಲ್ಲತ್ ಸಂಸ್ಥೆಯಅಧ್ಯಕ್ಷ, ಎಂ ಲಾಯಕ್ ಅಲಿ, ಹ್ಯೂಮನ್‌ರೀಲೀಫ್ ಸೊಸೈಟಿ ಪ್ರಾದೇಶಿಕ ಅಧ್ಯಕ್ಷ, ಅಜಗರ್‌ಖಾನ್ ಮತ್ತು ಸಾಲಿಡಾರಿಟಿಯೂಥ್ ಮುಮೆಂಟ್ ಕೊಪ್ಪಳ ಘಟಕದಅಧ್ಯಕ್ಷರಾದಏಜಾಜ್‌ಅಹಮದ್ ಶರೀಫ್ ಸೇರಿರಂತೆಅನೇಕರು ಉಪಸ್ಥಿತರಿದ್ದರು.