ರಾಯಬಾಗ 05: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ಕಲೆ ಅಡಗಿರುತ್ತದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಜೀವನದ ಬದಲಾವಣೆಯ ಹಂತವನ್ನು ಕಾಣುತ್ತೇವೆ ಎಂದು ಹಾರೂಗೇರಿ ಸಿದ್ಧೇಶ್ವರ ಕಲಾ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಟಿ.ಎಸ್.ವಂಟಗುಡಿ ಹೇಳಿದರು.
ಇತ್ತಿಚೆಗೆ ರಾಯಬಾಗ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಡಿಪ್ಲೋಮಾ ವಿದ್ಯಾಥರ್ಿಗಳ ಪ್ರೋಜೆಕ್ಟ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾಥರ್ಿಗಳು ತಾಂತ್ರಿಕ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಕಲಿಕೆ ಮತ್ತು ಗಳಿಕೆ ಜೀವನೂದ್ದಕ್ಕೂ ಸಾಗುತ್ತದೆ, ವಿದ್ಯಾಥರ್ಿಗಳು ಹೆಚ್ಚಿನ ಜ್ಞಾನ ಪಡೆದುಕೊಂಡು ಉನ್ನತ ಹುದ್ದೆ ಪಡೆಯಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ರೇಣುಕಾ ಶುಗರ್ಸನ ಜನರಲ್ ಮ್ಯಾನೇಜರ ಜಾಕಿಅಹಮದ್ ಶೇಖ ಮಾತನಾಡಿ, ಯಾವ ವಿದ್ಯಾಥರ್ಿಗಳು ತಮ್ಮ ತಂದೆ-ತಾಯಂದಿರಿಗೆ ಗೌರವ ನೀಡುತ್ತಾರೋ ಅವರು ಜೀವನದಲ್ಲಿ ಮುಂದೆ ಬರುತ್ತಾರೆ. ವಿದ್ಯಾಥರ್ಿ ಜೀವನ ಅತ್ಯಮೂಲ್ಯವಾಗಿದೆ ಎಂದರು.
ಕಾಲೇಜಿನ ಉಪಪ್ರಾಚಾರ್ಯ ಹಾಗೂ ಮೆಕ್ಯಾನಿಕಲ ವಿಭಾಗದ ಮುಖ್ಯಸ್ಥಎಸ್.ವಿ.ದೇಸಾಯಿ ಶೈಕ್ಷಣಿಕ ವಾಷರ್ಿಕ ವರದಿ ವಾಚಿಸಿದರು. ಅಂತಿಮ ವರ್ಷದ ವಿದ್ಯಾಥರ್ಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ರೇಣುಕಾ ಶುಗರ್ಸನ ಅಭಿಯಂತರ ಎ.ಜಿ. ಪಾಟೀಲ, ಆಡಳಿತಾಧಿಕಾರಿ ಪಿ.ಬಿ. ಬೆಳ್ಳಿ, ಪ್ರಾಚಾರ್ಯ ಎಂ.ಎಸ್.ಮಗದುಮ, ಎಸ್.ವಿ.ದೇಸಾಯಿ, ಎಲ್.ಕೆ.ಸಂತೋಷ, ಎಮ್.ಆರ್.ಜೇಡರ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ಆರ್.ಎ.ಅನ್ವೇಕರ ಸ್ವಾಗತಿಸಿ, ನಿರೂಪಿಸಿದರು. ಎಲ್.ಬಿ.ದಲಾಲ ವಂದಿಸಿದರು.