ನಿಷೇಧಿತ ಪ್ಲಾಸ್ಟಿಕ್ ವಶ 31 ಸಾವಿರ ರೂ.ದಂಡ

ಧಾರವಾಡ  04: ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಜನಜಾಗೃತಿ ಮೂಡಿಸಲು ವಾರ್ಡ ನಂಬರ್ 22 ರ  ಸತ್ತೂರ ,ರಾಜಾಜಿನಗರ ವಿವಿಧ ಬೇಕರಿ,ಅಂಗಡಿಗಳ ಮೇಲೆ ಮಹಾನಗರ ಪಾಲಿಕೆಯ ಸಿಬ್ಬಂದಿ ದಾಳಿ ನಡೆಸಿ ಸುಮಾರು 20 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. 31 ಸಾವಿರ ರೂ.ದಂಡ ವಿಧಿಸಿದ್ದಾರೆ. ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ.ಮ್ಯಾಗೇರಿ ಮತ್ತಿತರ ಸಿಬ್ಬಂದಿ ಇದ್ದರು.