ಶೇಡಬಾಳ ಸನ್ಮತಿ ಶಿಕ್ಷಣ ಸಮಿತಿಗೆ ಪ್ರಗತಿಪರ ರೈತ ವ್ಹಿ.ಟಿ. ಪಾಟೀಲ ದೇಣಿಗೆ
Progressive farmer V.H.T. Patil donates to Shedbal Sanmati Education Committee
ಕಾಗವಾಡ 20: ತಾಲೂಕಿನ ಶೇಡಬಾಳ ಪಟ್ಟಣದ ಪ್ರಗತಿಪರ ರೈತ ವ್ಹಿ.ಟಿ. ಪಾಟೀಲ ಮತ್ತು ಚಂಪಾಬಾಯಿ ಪಾಟೀಲ ದಂಪತಿಗಳು ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಶಾಲೆಗಳ ಅಭಿವೃದ್ಧಿಗಾಗಿ ಒಂದು ಲಕ್ಷ ದೇಣಿಗೆ ನೀಡಿದ್ದು, ಗುರುವಾರ ದಿ. 19 ರಂದು ಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ವ್ಹಿ.ಟಿ. ಪಾಟೀಲ ಅವರನ್ನು ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕ ಎಚ್.ಪಿ. ನಾಯಿಕ ಮಾತನಾಡಿ, ನಮ್ಮ ಶಾಲೆಯು ಅತಿ ಕಡಿಮೆ ಶುಲ್ಕದೊಂದಿಗೆ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ದಾನಿಗಳಿಂದ ಬಂದ ದೇಣಿಗೆಯಿಂದ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ವಿನೋದ ಬರಗಾಲೆ, ನಿರ್ದೇಶಕರಾದ ಅಶ್ವತಕುಮಾರ ಪಾಟೀಲ, ರಾಹುಲ ಸವದತ್ತಿ, ಸನ್ಮತಿ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಯಶವಂತ ಜಾಧವ, ರಾಜು ಘೇನಪ್ಪಗೋಳ, ನೇಮಗೌಡಾ ಪಾಟೀಲ, ಪ.ಪಂ. ಸದಸ್ಯ ಪ್ರಕಾಶ ಮಾಳಿ, ಮುಖಂಡರಾದ ಭರತ ನಾಂದ್ರೆ, ಪ್ರಕಾಶ ಚೌಗುಲಾ, ಸಂತೋಶ ಗಾಯಕವಾಡ, ಪ್ರಕಾಶ ತೀರ್ಥ, ಪ್ರಕಾಶ ಐನಾಪೂರೆ, ಪಟ್ಟಣದ ಕಿರಾಣಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಶೋಕ ವಿಭೂತೆ, ಇಂಜಿನಿಯರ್ ಪ್ರದೀಪ ಪಾಟೀಲ, ಪಿಕೆಪಿಎಸ್ ಉಪಾಧ್ಯಕ್ಷ ಎ.ಸಿ. ಖಾಂಡೆ, ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಎಂ.ಎನ್. ಕಾಳೇನಟ್ಟಿ, ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಬಾಹುಬಲಿ ಬನಜಿಗವಾಡೆ ಸೇರಿದಂತೆ ಉಪನ್ಯಾಸಕರು, ಸಹ-ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 