ಹುಬ್ಬಳ್ಳಿಯಲ್ಲಿ ವಾಕರಸಾ ಸಂಸ್ಥೆಯ ಪ್ರಗತಿ ಪರೀಶೀಲನಾ ಸಭೆ
Progress review meeting of Vakarasa organization in Hubli
ಹುಬ್ಬಳ್ಳಿಯಲ್ಲಿ ವಾಕರಸಾ ಸಂಸ್ಥೆಯ ಪ್ರಗತಿ ಪರೀಶೀಲನಾ ಸಭೆ
ಗದಗ 12 : ಹುಬ್ಬಳ್ಳಿ ಸೆಪ್ಟಂಬರ್ 11 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಛೇರಿ ಹುಬ್ಬಳ್ಳಿಯಲ್ಲಿ ವ್ಯವಸ್ಥಾಪಕರ ನಿರ್ದೇಶಕರಾದ ಪ್ರಿಯಾಂಗಾ.ಎಂ ರವರ ಅಧ್ಯಕ್ಷತೆಯಲ್ಲಿ ಎಲ್ಲ ವಿಭಾಗಗಳ ಪ್ರಗತಿ ಪರೀಶೀಲನಾ ಸಭೆ ಜರುಗಿಸಲಾಯಿತು. ಚಾಲನಾ ಸಿಬ್ಬಂದಿಗಳ ಬಳಕೆ ಉತ್ತಮ ಗೊಳಿಸುವುದು ಅವಘಡ ಅಪಘಾತ ರಹಿತ ಕಾರ್ಯಾಚರಣೆಗೆ ಒತ್ತು ನೀಡುವುದು ಕೆ.ಎಂ.ಪಿ.ಎಲ್ ಈ ಪಿ ಕೆ ಎಮ್ ಸುಧಾರಿಸುವುದು ಇತ್ಯಾದಿ ವಿಷಯಗಳ ಕುರಿತು ಪ್ರಗತಿ ಪರೀಶೀಲಿಸಲಾಗಿ ಮುಂಬರುವ ದಿನಗಳಲ್ಲಿ ಜನದಟ್ಟಣೆ ಗನುಗುಣವಾಗಿ ಕಾರ್ಯಾಚರಣೆ ಮಾಡುವಂತೆ ವಾಣಿಜ್ಯ ಮಳಿಗೆಗಳ ಶುಲ್ಕವನ್ನು ಯು.ಪಿ.ಆಯ್ ಮೂಖಾಂತರ ಪಾವತಿಸಲು ಉತ್ತೇಜಿಸುವಂತೆ ಹಾಗೂ ಇನ್ನಿತರ ವಿಷಯಗಳ ಸೂಕ್ತ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ್, ಗಣೇಶ ರಾಠೋಡ ಸಿದ್ದೇಶ್ವರ ಹೆಬ್ಬಾಳ ಶ್ರೀನಿವಾಸಮೂರ್ತಿ ಸಿ. ಈ ಇಮಾಮ್ ಕಾಸೀಮ್ ಕಂದಗಲ್ಲ ಬಿ. ಬೋರಯ್ಯಾ ಸೋಮಣ್ಣ ಅಂಗಡಿ ನಿತಿನ ಹೆಗಡೆ ಶಶೀಧರ ಮರಿದೇವರಮಠ ಅಧಿಕಾರಿಗಳಾದ ಸುನೀಲ್ ಎಮ್ ಮತ್ತು ಎಲ್ಲ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಂಚಾರ ಅಧಿಕಾರಿಗಳು ತಾಂತ್ರಿಕ ಶಿಲ್ಪಿಗಳು ಘಟಕ ವ್ಯವಸ್ಥಾಪಕರು ಹಾಗೂ ಇನ್ನಿತರ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 