ಪ್ರಗತಿ ಮಗದುಮ್ಮ ಸಾಧನೆ
ರಾಯಬಾಗ, 02; ತಾಲೂಕಿನ ಬಾವನಸೌಂದತ್ತಿ ಗ್ರಾಮದ ಹೊಸ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪ್ರಗತಿ ಬಾಜಿರಾವ ಮಗದುಮ್ಮ ಇವಳು ನವೋದಯ, ಆಳ್ವಾಸ್ (ಮೂಡುಬಿದಿರೆ), ಮೊರಾರ್ಜಿ ಮತ್ತು ಆದರ್ಶ ವಿದ್ಯಾಲಯ ಈ ಎಲ್ಲಾ ಶಾಲೆಗಳು ನಡೆಸಿದ ಪ್ರವೇಶ ಪರೀಕ್ಷೆ ಗಳಲ್ಲಿ ತೇರ್ಗಡೆ ಆಗುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ಇವಳಿಗೆ ಶಿಕ್ಷಕರಾದ ನವೀನಕುಮಾರ ಮತ್ತು ಸಾಗರ ಅವರು ಮಾರ್ಗದರ್ಶನ ಮಾಡಿದ್ದರು. ಈ ವಿದ್ಯಾರ್ಥಿಯನ್ನು ಶಾಲೆ ಆಡಳಿತ ಮಂಡಳಿ ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.ಫೋಟೊ: 02 ರಾಯಬಾಗ 2ಫೋಟೊ ಶೀರ್ಷಿಕೆ: ಪ್ರಗತಿ ಬಾಜಿರಾವ ಮಗದುಮ್ಮ