ಸಂಶೋಧನೆ ಮತ್ತು ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ ಕುರಿತು ಕಾರ್ಯಕ್ರಮ
Program on the transition from research and training to cooperative education
ಗದಗ 17: ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ, ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ, ಕೆ.ಎಂ.ಎಫ್ ಧಾರವಾಡ, ಗದಗ ಉಪವಿಭಾಗ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಲ್ಲಾಪೂರ ಹಾಗೂ ರೋಣ ತಾಲೂಕಿನ ಎಲ್ಲಾ ಸಹಕಾರ ಸಂಘ/ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ 72 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಧ್ಯೇಯ: “ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು” ಅಂಗವಾಗಿ “ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯ: ಸಂಶೋಧನೆ ಮತ್ತು ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ” ದಿನದ ಕಾರ್ಯಕ್ರಮವನ್ನು ದಿ.15 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಲ್ಲಾಪೂರ ಇದರ ಆವರಣದಲ್ಲಿ ನೆರವೇರಿಸಲ್ಪಟ್ಟಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಹಾಗೂ ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇದರ ನಿರ್ದೇಶಕರಾದ ಜಿ. ಪಿ. ಪಾಟೀಲರವರು ಉದ್ಘಾಟಿಸಿ ಮಾತನಾಡುತ್ತಾ ಭಾರತದ ಮೊದಲ ಸಹಕಾರಿ ವಿಶ್ವವಿದ್ಯಾಲಯವಾಗಿ ತ್ರಿಭುವನ್ ವಿಶ್ವವಿದ್ಯಾಲಯ ಆರಂಭವಾಗಿದೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ ಶಾರವರು 2025 ರಲ್ಲಿ ವಿಶ್ವ ವಿದ್ಯಾಲಯ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯುವ ಮೂಲಕ ಸಹಕಾರ ಚಳವಳಿಯ ಪೂರಕ ಬೆಳವಣಿಗೆಗೆ ಚಾಲನೆ ನೀಡಿದ್ದಾರೆ, ರಾಷ್ಟೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಗುರುತಿಸಲ್ಪಟ್ಟ ಈ ವಿಶ್ವವಿದ್ಯಾಲಯವು, “ಸಹಕಾರ ಮೂಲಕ ಸಮೃಧ್ಧಿ” ಎಂಬ ದೃಷ್ಠಿಕೋನಕ್ಕೆ ಅನುಗುಣವಾಗಿ ಸಹಕಾರಿ ಸಂಸ್ಥೆಗಳಿಗೆ ತಾಂತ್ರಿಕ ಮತ್ತು ನಿರ್ವಹಣಾ ಶಿಕ್ಷಣದಲ್ಲಿ ಪರಿಣತಿಯನ್ನು ನೀಡುತ್ತಿದೆ. ಇದರ ಜತೆಗೆ ಸಹಕಾರ ವಲಯದಲ್ಲಿ ಸಂಶೋಧನೆ, ಅಭಿವೃಧ್ಧಿ ಮತ್ತು ಸಾಂಸ್ಥಿಕ ಜಾಲಗಳನ್ನು ಮುನ್ನಡೆಸುವ ಭಾರತದ ಸಹಕಾರಿ ಚಳವಳಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಕೆ.ಸಿ.ಸಿ. ಬ್ಯಾಂಕಿನಿಂದ ಸಿಗುವ ಸರ್ವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಸಂಘದ ಏಳ್ಗೆಗೆ ಪ್ರಯತ್ನಿಸಬೇಕೆಂದು ಕರೆ ನೀಡಿದರು. ಬ್ಯಾಂಕಿನ ನಿರ್ದೇಶಕನಾಗಿ ರೋಣ ಹಾಗೂ ಗಜೇಂದ್ರಗಡ ಸಂಘಗಳಿಗೆ ಸರ್ವ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಸಹಕಾರಿ ಪಿತಾಮಹ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಅಧ್ಯಕ್ಷತೆ ವಹಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಲ್ಲಾಪೂರ ಇದರ ಅಧ್ಯಕ್ಷರಾದ ಅಂದಪ್ಪ ಉಗಲಾಟ ರವರು ಮಾಡಿ ಮಾತನಾಡುತ್ತಾ ಗ್ರಾಮೀಣಾಭಿವೃಧ್ಧಿಗೆ ಸಹಕಾರಿ ಸಂಸ್ಥೆಗಳ ಪ್ರಮುಖ ಕೊಡುಗೆಗಳಾದ ಆರ್ಥಿಕ ಸೇರೆ್ಡ, ಆರ್ಥಿಕ ಒಟ್ಟುಗೂಡುವಿಕೆ ಮತ್ತು ಮೌಲ್ಯ ಸರಪಳಿ ಮತ್ತು ಏಕೀಕರಣ, ಗ್ರಾಮೀಣ ಜನರಿಗೆ ಕೈಗೆಟಕುವ ಹಣಕಾಸು ಸಾಲ, ಸ್ಥಳಿಯ ಸೇವಾ ವಿತರಣೆ ಮತ್ತು ಸಾಮಾಜಿಕ ರಕ್ಷಣೆ, ಅಂತರ್ಗತ ಉದ್ಯೋಗ ಮತ್ತು ಲಿಂಗ ಸಬಲೀಕರಣ, ಗ್ರಾಮೀಣ ಆರ್ಥಿಕತೆಯ ಬಲವರ್ಧನೆ, ಹೊಂದಿ ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳ ಬೆಳವಣಿಗೆಗೆ ಅಡೆತಡೆಗಳಾದ ಆಡಳಿತ ಕೊರತೆಗಳು, ತಂತ್ರಜ್ಞಾನ ಅಳವಡಿಕೆ ಮತ್ತು ಪ್ರಮಾಣ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ರೋಣ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಕೆ. ಎ. ಹಾದಿಮನಿಯವರು ಮಾತನಾಡುತ್ತಾ ಸಹಕಾರ ಸಂಘಗಳ ಸದಸ್ಯರ ಆರೋಗ್ಯದ ಕುರಿತು ಮಾಹಿತಿ ನೀಡಿದರು. “ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯ: ಸಂಶೋಧನೆ ಮತ್ತು ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ” ಆ ದಿನದ ಕುರಿತು ವ್ಹಿ. ಜಿ. ಕುಲಕರ್ಣಿ ವಿಶ್ರಾಂತ ಸಹಕಾರ ಅಭಿವೃದ್ಧಿ ಅಧಿಕಾರಿಗಳು, ಧಾರವಾಡ ಇವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಲ್ಲಾಪೂರ ಇದರ ಉಪಾಧ್ಯಕ್ಷರಾದ ಮೃತ್ಯುಂಜಯ ಲ. ಹೊಸಮನಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಪುಷ್ಪಾ ಕೆ. ಕಡಿವಾಳ, ಸಹಕಾರ ಸಂಘಗಳ ಲೆಕ್ಕ ಪರಿಶಶೊಧನಾ ಇಲಾಖೆ ರೋಣ ತಾಲೂಕಾ ಸಹಾಯಕ ನಿರ್ದೇಶಕರಾದ ಪಿ.ಎಲ್. ಹಳೇಮನಿ, ರೋಣ ತಾಲೂಕಾ ಸಹಕಾರ ಅಭಿವೃಧ್ಧಿ ಅಧಿಕಾರಿ ಪ್ರಶಾಂತ ಮುಧೊಳ, ಕೆ.ಸಿ.ಸಿ. ಬ್ಯಾಂಕ್ ಲಿ., ರೋಣ ಮ್ಯಾನೇಜರ ಆದ ವ್ಹಿ. ಎಸ್. ಪಾಟೀಲ, ಬ್ಯಾಂಕ್ ನೀರಿಕ್ಷಕರುಗಳಾದ ಎ.ಎ. ಶಾಬಾದಿ, ಎಂ. ಬಿ. ಪೂಜಾರಿ, ಧಾರವಾಡ ಹಾಲು ಒಕ್ಕೂಟ, ರೋಣ ತಾಲೂಕಿನ ವಿಸ್ತರಣಾಧಿಕಾರಿ ಸಾಲೋಟಗಿಮಠ, ಉಪಸ್ಥಿತರಿದ್ದರು.
ಸರ್ಕಾರಿ ಪ್ರಾಥಮಿಕ ಶಾಲೆ, ಮಲ್ಲಾಪೂರ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಲ್ಲಾಪೂರ ಇದರ ನಿರ್ದೇಶಕ ಲಿಂಗರಾಜ ಪಾಟೀಲರವರು ಸ್ವಾಗತಿಸಿದರು. ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 