ಸಾಹಿತ್ಯ ಕೃತಿಗಳ ಪರಿಚಯ ಕಾರ್ಯಕ್ರಮ
Program Introducing Literary Works
ಬೆಳಗಾವಿ 24: ಡಾ. ಮಲ್ಲಿಕಾರ್ಜುನ ಛಬ್ಬಿ ಅವರ ವಿಮರ್ಶಾ ಕೃತಿ ಅನುವರ್ತನ, ನವಿಲುತೋಟ ಹಾಗೂ ಶ್ರೀಶೈಲ ಸಿ. ಹೆಬ್ಬಳ್ಳಿ (ದೊಡ್ಡವಾಡ) ಅವರ ಗಜಲ್ಗಳನ್ನು ಒಳಗೊಂಡ ನೋವಿರದ ನಲಿವು ಎಲ್ಲಿರುವುದು, ಬಾಳ ಕಡಲಿನ ತೆರೆಗಳು ಕವನ ಸಂಕಲನ ಹಾಗೂ ಅಪ್ಪಾಸಾಹೇಬ ಬ. ಲಿಂಬಿಗಿಡ ಅವರ ಕವನ ಸಂಕಲನಗಳನ್ನು ಒಳಗೊಂಡ ಕಳಕಳಿಯ ಕಂದಮ್ಮಗಳು ಸೇರಿದಂತೆ ವಿವಿಧ ಕೃತಿಗಳನ್ನು ಪರಿಚಯಿಸಲಾಯಿತು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ಪ್ರಕಟಿಸಿರುವ ಪ್ರೊ. ಜೆ.ಆರ್. ಲಕ್ಷ್ಮಣರಾವ್ ಹಾಗೂ ಪ್ರೊ. ಅಡ್ಯನಡ್ಕ ಕೃಷ್ಣಭಟ್ಟ ಅವರು ಸಂಪಾದಿಸಿರುವ ಇಂಗ್ಲಿಷ್-ಕನ್ನಡ ವಿಜ್ಞಾನ ಶಬ್ದಕೋಶದ ಆರು ಸಂಪುಟಗಳನ್ನೂ ಪರಿಚಯಿಸಲಾಯಿತು.
ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಪಿ.ವೈ. ಗ್ರಾಮದ ಆರೂಢ ಜ್ಯೋತಿ ಚೈತನ್ಯ ಪ್ರಾಥಮಿಕ ಶಾಲೆಯ ಕೋಚಿಂಗ್ ವಿಭಾಗದ ಶಿಕ್ಷಕ, ಉದಯೋನ್ಮುಖ ಬರಹಗಾರ ಹಾಗೂ ಕವಿ ಶಿವಾನಂದ ಬಸನಾಯ್ಕ ಪಟ್ಟಿಹಾಳ (ಇಂಚಲ) ಅವರಿಗೆ ಕೃತಿಗಳನ್ನು ಪರಿಚಯಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯಲು ಪ್ರೋತ್ಸಾಹ ನೀಡಿದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 