ಅಶ್ಲೀಲ ಪದ ಬಳಕೆ ಪ್ರಕರಣ : ಸಿಟಿ ರವಿ ಕೇಸ್ ಬೆಂಗಳೂರು ಜನಪ್ರತಿನಿಧಿ ನ್ಯಾಯಾಲಯಕ್ಕೆ ವರ್ಗಾವಣೆ

Profanity case: City Ravi case transferred to Bangalore People's Court

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅಶ್ಲೀಲ ಪದ ಬಳಕೆ ಆರೋಪ ಎದುರಿಸುತ್ತಿರುವ ಪರಿಷತ್ ಸದಸ್ಯ ಸಿಟಿ ರವಿ ಅವರ ಪ್ರಕರಣ ವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

    ‌ಅಶ್ಲೀಲ ಪದ ಬಳಕೆ ಆರೋಪ ಎದುರಿಸುತ್ತಿರುವ ಸಿಟಿ ರವಿ ಅವರನ್ನು ಶುಕ್ರವಾರ ಮುಂಜಾನೆ ಬೆಳಗಾವಿಯ ಜೆಎಮ್ ಎಫ್ ಸಿ ಹೆಚ್ವುವರಿ 5 ನೇ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. 

   ನ್ಯಾಯಾಧೀಶರಾದ ಶ್ರೀಮತಿ ಸ್ಪರ್ಷಾ ಎಮ್ ಡಿಸೋಜಾ ಅವರು ಈ ಪ್ರಕರಣ ವಿಚಾರಣೆ ನಡೆಸಿದರು. ಅಲ್ಲದೆ ರವಿ ಅವರ ಪರ ನ್ಯಾಯವಾದಿ ಎಮ್ ಬಿ ಝೀರಲಿ ಅವರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

    ಬಳಿಕ ಈ ಪ್ರಕರಣವನ್ನು ಮಧ್ಯಾಹ್ನ 2 ಗಂಟೆಯ ವರೆಗೆ ಈ ಪ್ರಕರಣ ವನ್ನು ಮೂದೂಡಲಾಗಿತ್ತು. ಬಳಿಕ 2 ಗಂಟೆಗೆ ನ್ಯಾಯಾಧೀಶರು ಈ ಪ್ರಕರಣವು ತಮ್ಮ ವ್ಯಾಪ್ತಿಗೆ ಬರುವದಿಲ್ಲ ಎಂದು ತಿಳಿಸಿ ಈ ಪ್ರಕರಣವನ್ನು ಬೆಂಗಳೂರು ‌ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಿದರು. 

    ಬಳಿಕ ಸಿಟಿ ರವಿ ಅವರನ್ನು ಬಿಗಿ ಪೊಲೀಸ್ ಬಂದೋಬಸ್ತನಲ್ಲಿ ಬೆಂಗಳೂರಿಗೆ ಪೊಲೀಸರು‌ ಕರೆದೊಯ್ಯದರು.