ದಿವ್ಯ ಕಾಯಕ ಚರಿತೆಯ ಮಹಾನ ಚೇತನ ಶಿಕ್ಷಣ ತಜ್ಞ ಪ್ರೊ ಶಿವಾನಂದ ಪಟ್ಟಣಶೆಟ್ಟರ
Prof. Shivananda Pattanashettar, the great spirit of the divine Kayaka story
ತೋಂಟದ ಲಿಂ, ಡಾ ಸಿದ್ದಲಿಂಗ ಶ್ರೀ, ಡಾ,ಸಿದ್ದರಾಮ ಶ್ರೀಗಳವರ ಬಲಕೃಪೆಯಿಂದ ತೋಂಟದಾರ್ಯ ಮಠ, ಶಿಕ್ಷಣ ಸಂಸ್ಥೆಗಳನ್ನು ಉತ್ತುಂಗಕ್ಕೇರಿಸಿದ ಕಾಯಕಯೋಗಿನಾಡುಕಂಡ ಅಪರೂಪದ ಕಾಯಕ ಜೀವ"ಸೇವಾಭಾವ ಕಾಯಕದ ಅನ್ವೇಷಕ ಪ್ರೊ ಎಸ್.ಎಸ್. ಪಟ್ಟಣಶೆಟ್ಟರ"
ವಿಶೇಷ ಲೇಖನ : ಗುಲಾಬಚಂದ ಜಾಧವ
ಆಲಮಟ್ಟಿ
ದೊಡ್ಡಬಳ್ಳಾಪುರದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡಮಾಡಿದ ಕಾಯಕಯೋಗಿ 2026 ಪ್ರಶಸ್ತಿಗೆ ಗದುಗಿನ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಹಾಗೂ ಜೆಟಿವಿಪಿ ಮತ್ತು ಆಲಮಟ್ಟಿ ಎಸ್.ವಿ.ವಿ.ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶಿಕ್ಷಣ ತಜ್ಞ ಪ್ರೊ ಶಿವಾನಂದ ಪಟ್ಟಣಶೆಟ್ಟರ ಭಾಜನರಾಗಿ ನಿನ್ನೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಆ ನಿಮಿತ್ಯ ಈ ಲೇಖನ... ಕಾರ್ಮಿಕರ ದಿನಾಚರಣೆ ದಿನದಂದು ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸುಲಿಬೆಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಆಯೋಜನೆಗೊಂಡಿದ್ದ ಕಾಯಕಯೋಗಿ 2026 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸೇವಾ ಕಾಯಕ ಸಾಧಕರಾದ ಪ್ರೊಫೆಸರ್ ಶಿವಾನಂದ ಪಟ್ಟಣಶೆಟ್ಟರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಹಲ ಸಾಧಕರು ಪ್ರಶಸ್ತಿ ಸ್ವೀಕರಿಸಿದರು. ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಡಾ, ಹುಲಿಕಲ್ ನಟರಾಜ, ಉಪಾಧ್ಯಕ್ಷೆ ಸುಧಾ ಹುಚ್ಚಣವರ, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಬಣಕಾರ ಇತರರಿದ್ದರು.
ಆಲಮಟ್ಟಿ : ಜಾಗರಿತ ಮನಃ ಸಾಕ್ಷಿಯಿಂದ ಅತ್ಯುಚ್ಚ ಸೇವಾಭಾವ ಕಾಯಕದ ಪರಧಿಯಲ್ಲಿ ಅನುಪಮ ಹೆಜ್ಜೆ ಗುರುತು ಮೂಡಿಸಿ ದಿವ್ಯ ಕಾಯಕ ಚರಿತೆಯ ಮಹಾನ ಚೇತನರಾಗಿ ಮಿನುಗಿದ್ದಾರೆ ಶಿಕ್ಷಣ ತಜ್ಞ ಪ್ರೊ ಶಿವಾನಂದ ಪಟ್ಟಣಶೆಟ್ಟರ !
ಎಪ್ಪತ್ತರ ಇಳಿವಯಸ್ಸಿನಲ್ಲೂ ಇವರಲ್ಲಿ ಕಾಯಕ ಲವಲವಿಕೆ ಭಾವ ಕುಂದಿಲ.ಸಾಮಾನ್ಯರಲೇ ಅಸಾಮಾನ್ಯರಾಗಿ ಪವಿತ್ರ ಕಣಮನದ ಶುದ್ದ, ಚಾರಿತ್ರ್ಯಿಕ ಕಾಯಕದ ಸೇವಾ ಕೈಂಕರ್ಯ ಗೈಯ್ಯುತ್ತಿರುವುದು ವಿಶೇಷ ! ಸೇವಾ ಕಾಯಕ ತಪ ಸಹನಶೀಲತೆಯಿಂದ ಕೂಡಿದೆ. ಅಪ್ರತಿಮ ಅದ್ವೈತದ ಪ್ರತಿಭಾ ಸಂಪನ್ನ ಕಾಯಕ ಜೀವ ಅವರದ್ದು. ನಿಷ್ಟೆ, ಶ್ರದ್ಧೆ, ದೃಷ್ಟಿಕೋನ, ನಡೆ,ನುಡಿ ಶಿಸ್ತು, ಜವಾಬ್ದಾರಿ, ಸಹನೆ,ತಾಳ್ಮೆ ಇವುಗಳೆಲ್ಲವೂ ಸೇವಾ ಕಾಯಕದ ಸಫಲತೆಗೆ ಕಾರಣವಾಗಿದೆ.ಹೀಗಾಗಿ ಪ್ರಶಸ್ತಿ, ಪುರಸ್ಕಾರಗಳು ಪ್ರೊ ಶಿವಾನಂದ ಪಟ್ಟಣಶೆಟ್ಟರ ಅವರನ್ನು ಹುಡುಕುತ್ತಾ ಬೆನ್ನೆತ್ತಿ ಬಂದಿವೆ. ಬಸವಣ್ಣನವರ ತತ್ವಾದರ್ಶದಡಿಯಲ್ಲಿ ಕಳೆದ ಐದು ದಶಕಗಳಿಂದ ನಿರಂತರ ಪರೋಪಕಾರದ ಸೇವಾ ಕಾಯಕ ಸಾಗಿಸಿಕೊಂಡು ಬಂದಿರುವ ಸಾಮಾಜಿಕ ಕಾರ್ಯ ಸಾಧನೆಗಳು ಹತ್ತು ಹಲವಾರು ರೀತಿಯಲ್ಲಿವೆ.ಅವು ಹೆಮ್ಮರವಾಗಿ ಜನಮನದ ಸ್ಮೃತಿ ಪಟಲದ ಮೇಲೆ ಪ್ರಭಾವಳಿ ಬೀರಿವೆ. ದಣಿವರಿಯದ ಕಾಯಕ ಜೀವದ ಯಶೋಗಾಥೆ ಸ್ಪಷ್ಟತೆಯ ಸಂಚಲನದಿಂದ ಅನನ್ಯ ರೂಪ ತಾಳಿವೆ. ಕಾಯಕ ನಿಷ್ಠೆಗೆ ಇನ್ನೊಂದು ಹೆಸರೇ ಶಿವಾನಂದ ಪಟ್ಟಣಶೆಟ್ಟರ. ಸಾಮಾಜಿಕ ರಂಗಕ್ಕೆ ಸಲ್ಲಿಸಿರುವ ಕೊಡುಗೆ ಆವಣೀ9ಯವಾಗಿವೆ. ಗದುಗಿನ ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾಗಿ, ಜೆಟಿ ವಿದ್ಯಾಪೀಠದ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿ, ವಿವಿಧ ಸಂಘ,ಸಂಸ್ಥೆಗಳ ಶ್ರೇಯೋಭಿವೃದ್ದಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಒಂದು ಕಾಲದಲ್ಲಿ ಗದಗ- ಡಂಬಳ ತೋಂಟದಾರ್ಯ ಮಠದ ಆಸ್ಮೀತೆಯೇ ಕಳಚಿ, ಮಾಸಿ ಹೋಗುತ್ತಿದ್ದ ಸಂದರ್ಭದಲ್ಲಿ ಶ್ರೀಮಠಕ್ಕೆ ಪುನಶ್ಚೇತನ ಸ್ಪರ್ಶ ಲೇಪಿಸಿ ನವದಿಸೆ ತೋರಿದ ಮಾನವೀಯತೆಯ ಮಹಾನುವತ ಪಟ್ಟಣಶೆಟ್ಟರ ಅವರು ! ಅಂದು ಶ್ರೀಮಠಕ್ಕೆ ಧಾಮಿ9ಕ ಮೆರಗು ಪುನಃ ಸೃಜೀಸಿ ಉತ್ತುಂಗಕ್ಕೇರಿಸಿದ ಅದ್ವೈತ ಈ ಜೀವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಪ್ರಾಂಜಲ್ಯ ಕಾಯಕದಿಂದ ಮೌಲ್ಯಿಕ ಛಾಪು ಮೂಡಿಸಿದ್ದಾರೆ. ಇವೆಲ್ಲಾ ಕಾಯಕ ಕಾರ್ಯಗಳ ಹಿಂದೆ ಲಿಂ,ತೋಂಟದ ಡಾ, ಸಿದ್ದಲಿಂಗ ಶ್ರೀಗಳವರ ಕೃಪಾಬಲ ಇತ್ತು. ಪ್ರೊ ಶಿವಾನಂದ ಪಟ್ಟಣಶೆಟ್ಟರ ಅವರನ್ನು ಸಿದ್ದಲಿಂಗ ಪೂಜ್ಯರು ತಮ್ಮ ಉಸಿರನ್ನಾಗಿಸಿಕೊಂಡಿದ್ದರು. ಅಷ್ಟೊಂದು ಭಾವನಾತ್ಮಕ ಬೆಸುಗೆ, ಪ್ರೀತಿ,ವಿಶ್ವಾಸ, ಸಾಮರಸ್ಯದ ಓದಾರ್ಯಶೀಲತೆ ಗುಣ ಸ್ವಭಾವದ ಒಡನಾಟ ಉಭಯ ಜೀವಗಳಲ್ಲಿ ಒಂದಾಗಿತ್ತು.
ನಾಡಿನ ವಿವಿಧೆಡೆ ನೂರಕ್ಕ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಪ್ರಗತಿದತ್ತ ಕೊಂಡೊಯ್ದು ಸಾರ್ಥಕತೆ ಮೆರೆದಿದ್ದಾರೆ. ಕಾಯಕ ಪ್ರಾವೀಣ್ಯತೆಯಿಂದ ಸದ್ಭಾವನೆ,ಸನ್ಮಾರ್ಗ ಸಾಧನೆಗಳು ಅರಳಿ ಘಮಿಸಿವೆ.ಸಂಸ್ಥೆಯ ಅಸಂಖ್ಯಾತ ನೌಕರರಿಗೆ ನೆಮ್ಮದಿಯ ಜೀವಾಶ್ರಯ ನೀಡಿ ಅವರ ಬದುಕನ್ನು ಹಸನದೆಡೆಗೆ ಮುನ್ನಡೆಸಿದ್ದಾರೆ. ಅಣ್ಣ ಬಸವಣ್ಣನವರು ಬೋಧಿಸಿದ ಕಾಯಕ ತತ್ವವನ್ನು ಚಾಚು ತಪ್ಪದೆ ಪಾಲಿಸುತ್ತಾ ಕಾಯಕ ತೃಷೆ ಕಂಡಿದ್ದಾರೆ. ಲಿಂ, ಸಿದ್ದಲಿಂಗ ಶ್ರೀಗಳವರು ಕಂಡ ಕನಸು, ಆಶಯಗಳನ್ನು ಬದ್ಧತೆಯ ಚಾರ್ಣದಲ್ಲಿ ನಿಭಾಯಿಸಿದ್ದಾರೆ. ಧರ್ಮ, ಸಮಾಜ, ಶಿಕ್ಷಣ, ಸಾಹಿತ್ಯ ಸೇರಿ ಹಲ ಕ್ಷೇತ್ರದಲ್ಲಿ ಅಪಾರ ಕೃಷಿ ಕಾಯಕ ಮಾಡುತ್ತಾ ಬಂದಿದ್ದಾರೆ. ಇದು ಎಲ್ಲರಲ್ಲೂ ಹೆಮ್ಮೆ ಮುಡಿಸಿದೆ. ಜೆಟಿವಿಪಿ ಮಠದ ಭಾವೈಕ್ಯತಾ ತೋರಣ, ಸಾಮರಸ್ಯದ ಹೂರಣ ವಿಶೇಷ ಕೀತಿ9, ಸಂಪ್ರದಾಯವನ್ನು ನಾಡಿನಲ್ಲಿ ಫಸರಿಸಿದ್ದಾರೆ. ಅನೇಕ ಒತ್ತಡದಲ್ಲೂ "ಜನಪರ-ಜನಜನಿತ" ಕಾಯಕ ಸೇವಾ ಕಾರ್ಯಕ್ಕೆ ಸಮಪಿ9ತರಾಗಿ ಉತ್ಸಾಹದಿಂದ ಓಡಾಡುತ್ತಿರುವುದು ಸಂತಸ ಹಾಗೂ ಅಭಿಮಾನ ಪಡುವ ಸಂಗತಿ. ರಮ್ಯೋತಿ ಕಾಯಕಗಳು ಉುತ್ತಂಗಕ್ಕೆರಿವೆ. ಸಮಾಜದ ಅಭ್ಯುದಯಕ್ಕೆ ಮಿಡಿದಿದ್ದಾರೆ, ಶ್ರೀಮಠ ಮಹಾಮಠವನ್ನಾಗಿ ರೂಪಗೊಳ್ಳಲು ಜೀವ ಸವೆತ ಕಂಡಿದ್ದಾರೆ. ಮಠದ ಉನ್ನತಿ, ಶಾಲಾ ಸಂಸ್ಥೆಗಳ ಪ್ರಗತಿ ಮತ್ತಿಷ್ಟು, ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಮನಸ್ಸು ಮಾಡಿದ್ದಾರೆ. ನೋಡಲು ಸಿದಾಸಾದಾ ಕಂಡರು ಅಪಾರ ಅನುಭಾವಿಗಳು, ಮೇಧಾವಿಗಳಾಗಿದ್ದಾರೆ. ಪ್ರೊ ಪಟ್ಟಣಶೆಟ್ಟರ ಅವರಲ್ಲಿ ವಿವೇಚನೆ, ಚಿಂತನೆ,ಧೋರಣೆ,ಆಲೋಚನೆ ವಿಭಿನ್ನ. ಅಗಾಧ ಜ್ಞಾನ ಜ್ಯೋತಿ ಬೆಳಗುತ್ತಿದೆ. ಹೀಗಾಗಿ ಅಪೇಕ್ಷಿತ ಸಕಾರಾತ್ಮಕ ಬದಲಾವಣೆ ತರುವ ಗಟ್ಟಿ ಛಾತಿ ಹೊಂದಿದ್ದಾರೆ. ಪರಿಣಾಮ ಕಾಯಕ ಜ್ಞಾನ ಮೂಲಕ ಕಾಯಕಯೋಗಿಗಳಾಗಿ ತಮ್ಮ ಸರಳತೆಯ ಜೀವ ಪಯಣವನ್ನು ನಡೆಸುತ್ತಾ ಬಂದಿದ್ದಾರೆ.
ಕಾಯಕ ತತ್ವದ ತಳಹದಿ ಮೇಲೆ ಜ್ಞಾನರಸದ ಸುವಾಸನೆ ಹರಡಿಸಿರುವ ಪಟ್ಟಣಶೆಟ್ಟರ ಅವರು ಶುಚಿತ್ವ, ನಿರ್ಮಲ ಬುದ್ದಿಮತ್ತೆಯಿಂದ ಸಾಮಾಜಿಕ ಸಂವೇದನೆಯ ಕಾಯಕ ಪ್ರಜ್ಞೆ ಮೆರೆದಿದ್ದಾರೆ. ಶಿಕ್ಷಣದಿಂದ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನ ಶಿಕ್ಷಣದಿಂದಲೇ ಉಜ್ವಲ ಭವಿಷ್ಯ ಈ ಭಾವದಡಿ ಸಿದ್ದಲಿಂಗ ಶ್ರೀಗಳವರ ಅಪೇಕ್ಷೆಯಂತೆ ಹೆಚ್ಚು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಕಾರಣರಾಗುವ ಮೂಲಕ ಮಕ್ಕಳ ಮನಸ್ಸಿನ ಮೇಲೆ ಅಕ್ಷರ ಕಲಿಕೆಯ ಗರಿ ಮೂಡಿಸಿದ್ದಾರೆ. ಉನ್ನತ ಹುದ್ದೆಯಲ್ಲಿದ್ದರು ನಯ,ವಿನಯ, ಸರಳತೆ ಭಾಷ್ಪ ಬಾಷ್ಪೀಕರಣಗೊಂಡಿದೆ. ಹೆಗ್ಗಳಿಕೆ, ತೆಗ್ಗಳಿಕೆಗಳಿಗೆ ಎಂದೂ ಚಿಂತಿಸಿದವರಲ್ಲ. ಸೇವೆಯೇ ಮಹಾಪೂಜೆ ಎಂದು ನಂಬಿ ಕಾಯಕ ಸೇವೆಯಲ್ಲಿಯೇ ಸಂತೃಪ್ತಿ ಕಂಡಿದ್ದಾರೆ. ಕಾಯಕಕ್ಕೆ ಮೊದಲು ಆದ್ಯತೆ, ಕಾಯಕದ ಮೇಲೆಯೇ ಗೌರವ ನೀಡುವ ಅವರು ಉದಾತ್ತ ಸದುದ್ದೇಶಗಳಿಗೆ ಮೌಲ್ಯ ಭರಿಸಿದ್ದಾರೆ. ಅಮೂಲ್ಯ ಸದ್ಗುಣಗಳ ಭಂಡಾರ ಮನಾಂಗಳದಲ್ಲಿದೆ.ಕಠಿಣ ಪರಿಶ್ರಮದ ದಾರಿಯಲ್ಲಿ ಕಾಯಕ ಪುಂಜಿನ ರಸಗವಳ ತೇಲಿವೆ.ಸಾಮಾನ್ಯ ಕುಟುಂಬ ಪರಿವಾರದಲ್ಲಿ ಜನ್ನ ತಳೆದು ತಮ್ಮ ವಿಶಿಷ್ಠವಾದ ಸೇವಾ ಕಾಯಕದಿಂದ ಖ್ಯಾತಿ ಪಡೆದಿದ್ದಾರೆ ಪಟ್ಟಣಶೆಟ್ಟರ ಅವರು !
ಆಡಳಿತಾಧಿಕಾರಿಗಳಾಗಿ, ಕಾರ್ಯದರ್ಶಿಗಳಾಗಿ, ಅರ್ಥಶಾಸ್ತ್ರ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಪಟ್ಟಣಶೆಟ್ಟರ ಅವರು ಗೈದ ಕಾಯಕಗಳು ಪರಿಕಲ್ಪನೆಗೆ ನಿಲುಕದ್ದಾಗಿವೆ. ಅಷ್ಟೊಂದು ಉತ್ತಮ ರೀತಿಯಲ್ಲಿ ಪಯಣಿಸಿವೆ. ಪ್ರೊ ಶಿವಾನಂದ ಪಟ್ಟಣಶೆಟ್ಟರ ಅವರೊಬ್ಬರು ದೊಡ್ಡ ಶಕ್ತಿಯಾಗಿದ್ದಾರೆ. ತೋಂಟದ ಸಿದ್ದಲಿಂಗ ಪೂಜ್ಯರ ಅನ್ನದಾಸೋಹ, ಅಕ್ಷರ ದಾಸೋಹ ಪ್ರೇರಣೆಯೇ ತಮ್ಮ ಸೇವಾ ಕಾಯಕ್ಕೆ ಸ್ಪೂತಿ9 ನೀಡಿವೆ.
ಮೂಢನಂಬಿಕೆ, ಕಂದಾಚಾರ ವಿರುದ್ಧ ಪೂಜ್ಯರು ಸದಾ ವಿರೋಧಿಸಿ ಗುಡುಗುತ್ತಿದ್ದರು. ಅವರ ಚಿಂತನೆಗಳೇ ಕಾಯಕಕ್ಕೆ ಬಲ ನೀಡಿವೆ ಹಾಗೂ ತೋಂಟದ ಡಾ ಸಿದ್ದರಾಮ ಮಹಾಸ್ವಾಮಿಗಳು ಸಹ ಸಿದ್ದಲಿಂಗ ಶ್ರೀಗಳವರ ಆಲೋಚನೆ, ಆಶೋತ್ತರಗಳಿಗೆ ಭಾವ ಮಿಡಿದು ಕಾಯಕ ಪಥದಲ್ಲಿ ಸಾಗುತ್ತಿರುವುದ ಖುಷಿ, ಸಂತಸತಂದಿದೆ ಎನ್ನುತ್ತಾರೆ ಪ್ರೊ ಶಿವಾನಂದ ಪಟ್ಟಣಶೆಟ್ಟರ ಅವರು !
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 